Film News

ಬ್ಯುಸಿನೆಸ್ ಮ್ಯಾನ್ ನೊಂದಿಗೆ ಕೀರ್ತಿ ಸುರೇಶ್ ಮದುವೆ, ಶೀಘ್ರದಲ್ಲೇ ನಾವೆ ಹೇಳುತ್ತೇವೆ ಎಂದ ಕೀರ್ತಿ ತಾಯಿ ಮೇನಕ…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಕೀರ್ತಿ ಸುರೇಶ್ ರವರ ವೈಯುಕ್ತಿಕ ವಿಚಾರಗಳ ಬಗ್ಗೆ ಇತ್ತೀಚಿಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಸಂಗೀತ ನಿರ್ದೇಶಕ ಅನಿರುದ್, ಕಾಲಿವುಡ್ ಸ್ಟಾರ್‍ ವಿಜಯ್ ಜೊತೆಗೆ ಅಫೈರ್‍ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು. ಬಳಿಕ ತನ್ನ ಕ್ಲಾಸ್ ಮೇಟ್ ಜೊತೆಗೆ ಪ್ರೀತಿಗೆ ಬಿದ್ದಿದ್ದಾರೆ ಎಂಬ ಸುದ್ದಿ ಮುನ್ನೆಲೆಗೆ ಬಂತು. ಕೇರಳ ಮೂಲದ ಉದ್ಯಮಿಯೇ ಕೀರ್ತಿ ಸುರೇಶ್ ಪ್ರಿಯಕರ, ಇವರ ಪ್ರೀತಿಯ ಬಗ್ಗೆ ಅವರ ಕುಟುಂಬದಲ್ಲೂ ಸಹ ತಿಳದಿದ್ದು, ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಈ ಬಗ್ಗೆ ಕೀರ್ತಿ ಸುರೇಶ್ ತಾಯಿ ಮೇನಕಾ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅಫೈರ್‍ ಗಳ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಅಷ್ಟೊಂದು ರಾದ್ದಾಂತ ನಡೆಯುತ್ತಿದ್ದರೂ ಸಹ ಕೀರ್ತಿ ಸುರೇಶ್ ಈ ಬಗ್ಗೆ ರಿಯಾಕ್ಟ್ ಆಗಿರಲಿಲ್ಲ. ಯಾವುದೇ ವಿಧದಲ್ಲೂ ಸಹ ಆಕೆ ರಿಯಾ‌ಕ್ಟ್ ಆಗಲಿಲ್ಲ. ಆಧರೆ ಕೀರ್ತಿ ತಾಯಿ ಮೇನಕ ಸುರೇಶ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮೇನಕಾ ರವರಿಗೆ ಕೀರ್ತಿ ಸುರೇಶ್ ರವರ ವಿರುದ್ದ ಬರುತ್ತಿದ್ದ ರೂಮರ್‍ ಗಳ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಮೇನಕಾ ಸಹ ರಿಪ್ಲೆ ಕೊಟ್ಟಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಎಲ್ಲಾ ವಿಚಾರಗಳೂ ಸುಳ್ಳು. ಕೀರ್ತಿ ಯಾರನ್ನೂ ಲವ್ ಮಾಡುತ್ತಿಲ್ಲ. ಆ ರೀತಿ ಇದ್ದರೇ ಅವಳೇ ನಮಗೆ ಹೇಳುತ್ತಾಳೆ. ನಾನು ಬಹಿರಂಗವಾಗಿಯೇ ನಿಮಗೆಲ್ಲಾ ಹೇಳುತ್ತೇವೆ ಎಂದಿದ್ದಾರೆ.

ಇನ್ನೂ ಕೀರ್ತಿ ಸುರೇಶ್ ಬಗ್ಗೆ ಬರುತ್ತಿರುವಂತಹ ಸುದ್ದಿಗಳು ಎಲ್ಲಾ ನಿರಾಧಾರವಾದವು. ಇಂತಹ ರೂಮರ್‍ ಗಳು ಹೇಗೆ ಬರುತ್ತವೆ ಗೊತ್ತಾಗುವುದಿಲ್ಲ. ಇಂತಹ ರೂಮರ್‍ ಗಳು ಬಂದರೇ ನನ್ನ ಮಗಳು ಸಕ್ಸಸ್ ಸಾಧಿಸುತ್ತಿದ್ದಾಳೆ ಎಂದು ಅರ್ಥ. ಕೀರ್ತಿ ಸುರೇಶ್ ಎಲ್ಲಾ ವಿಚಾರಗಳನ್ನು ನಮ್ಮೊಂದಿಗೆ ಹೇಳುತ್ತಾರೆ. ಆದ್ದರಿಂದ ಅವಳಿಗೆ ಯಾವುದೇ ಅಫೈರ್‍ ಗಳಿಲ್ಲ. ಆ ರೀತಿ ಇದ್ದರೇ ನಾವೇ ಮಿಡಿಯಾದೊಂದಿಗೆ ಹೇಳುತ್ತೇವೆ ಎಂದು ಮೇನಕಾ ಹೇಳಿದ್ದಾರೆ. ಇನ್ನೂ ಮೇನಕಾ ಸಹ ಈ ಹಿಂದೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಆಕೆ ಸಹ ಸ್ಟಾರ್‍ ಹಿರೋಯಿನ್ ಆಗಿದ್ದರು. ತೆಲುಗಿನಲ್ಲಿ ಆಕೆ ಕಡಿಮೆ ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ.

ಇನ್ನೂ ಕೀರ್ತಿ ಸುರೇಶ್ ಸರ್ಕಾರು ವಾರಿ ಪಾಟ ಸಿನೆಮಾದ ಬಳಿಕ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಹರಿದು ಬರುತ್ತಿವೆ. ಸದ್ಯ ನ್ಯಾಚುರಲ್ ಸ್ಟಾರ್‍ ನಾನಿ ಜೊತೆಗೆ ಆಕೆ ದಸರಾ ಎಂಬ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಭಾರಿ ನಿರೀಕ್ಷೆ ಹುಟ್ಟಿಸಿದೆ. ಮಾ.30 ರಂದು ಈ ಸಿನೆಮಾ ಬಿಡುಗಡೆಯಾಗಿದ್ದು, ಒಳ್ಳೆಯ ಟಾಕ್ ಪಡೆದುಕೊಳ್ಳುತ್ತಿದೆ. ಜೊತೆಗೆ ಆಕೆ ಮೆಗಾಸ್ಟಾರ್‍ ಚಿರಂಜೀವಿ ಅಭಿನಯಿಸುತ್ತಿರುವ ಭೋಳಾ ಶಂಕರ್‍ ಸಿನೆಮಾದಲ್ಲಿ ಚಿರಂಜೀವಿಯವರ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Most Popular

To Top