ಮೊದಲ ಬಾರಿಗೆ ಬೇಬಿ ಬಂಪ್ ರಿವೀಲ್ ಮಾಡಿದ ಉಪಾಸನಾ, ಮದರ್ಸ್ ಡೇ ವೇಳೆ ಶಾಕಿಂಗ್ ಪೋಸ್ಟ್ ಹಂಚಿಕೊಂಡ ಮೆಗಾ ಸೊಸೆ….!

ಗ್ಲೋಬಲ್ ಸ್ಟಾರ್‍ ನಟ ರಾಮ್ ಚರಣ್ ಹಾಗೂ ಉಪಾಸನಾ ರವರಿಗೆ ಮದುವೆಯಾಗಿ ಅನೇಕ ವರ್ಷಗಳು ಕಳೆದಿದ್ದು, ಇನ್ನೂ ಮಕ್ಕಳನ್ನು ಪಡೆದುಕೊಂಡಿರಲಿಲ್ಲ. ‌ಇನ್ನು ಕೆಲವೇ ದಿನಗಳಲ್ಲಿ ಮೆಗಾಸ್ಟಾರ್‍ ಕುಟುಂಬಕ್ಕೆ ಹೊಸ ಜೀವ ಸೇರ್ಪಡೆಯಾಗಲಿದೆ. ಮೆಗಾ ಸೊಸೆ ಉಪಾಸನಾ ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ. ಗರ್ಭಿಣಿಯಾದ ಬಳಿಕ ಮೊದಲ ಬಾರಿಗೆ ಆಕೆ ಬೇಬಿ ಬಂಪ್ ಪೊಟೋ ಶೇರ್‍ ಮಾಡಿದ್ದು, ಇದರ ಜೊತೆಗೆ ಶಾಕಿಂಗ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಟ ರಾಮ್ ಚರಣ್ ಪತ್ನಿ ಉಪಾಸನಾ ಗರ್ಭಿಣಿಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಟ ರಾಮ್ ಚರಣ್ ಶೀಘ್ರದಲ್ಲೇ ತಂದೆಯಾಗಿ ಪ್ರಮೋಷನ್ ಪಡೆದುಕೊಳ್ಳಲಿದ್ದಾರೆ. ತನ್ನ ಪ್ರೀತಿಯ ಪತ್ನಿಯನ್ನು ಸಂತೋಷವಾಗಿಟ್ಟುಕೊಳ್ಳಲು ಸದಾ ಟೂರ್‍, ವೇಕೇಷನ್ ಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇತ್ತೀಚಿಗಷ್ಟೆ ದುಬೈ ಟೂರ್‍ ನಲ್ಲಿದ್ದ ಈ ಸ್ಟಾರ್‍ ಕಪಲ್ ಅಲ್ಲಿಯೇ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮವನ್ನು ಸಹ ನಡೆಸಿಕೊಟ್ಟರು. ಇನ್ನೂ ಉಪಾಸನಾ ಸೋಷಿಯಲ್ ಮಿಡಿಯಾದಲ್ಲಿ ಮೊದಲ ಬಾರಿಗೆ ತಾಯಿಯಾಗುತ್ತಿರುವ ಬಗ್ಗೆ ಅಂದರೇ ಮೊದಲ ಬಾರಿಗೆ ಬೇಬಿ ಬಂಪ್ ಶೋ ಮಾಡಿದ್ದಾರೆ. ಬ್ಲಾಕ್ ಟಾಪ್ ನಲ್ಲಿ ಉಪಾಸನಾ ತನ್ನ ಬೇಬಿ ಬಂಪ್ ಪೊಟೋಸ್ ಶೇರ್‍ ಮಾಡಿದ್ದಾರೆ. ಇದೀಗ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಉಪಾಸನಾ ಬೇಬಿ ಬಂಪ್ ಪೊಟೋಗಳ ಜೊತೆಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಸಹ ಮಾಡಿದ್ದಾರೆ. ಸರಿಯಾದ ಸಮಯದಲ್ಲೇ ನಾನು ತಾಯಿಯಾಗಿದ್ದೇನೆ. ಅದು ಗರ್ವಪಡುವಂತಹ ವಿಚಾರವಾಗಿದೆ. ಅಪರಿಮಿತವಾದ ಪ್ರೀತಿಯನ್ನು ನನ್ನ ಮಗುವಿಗೆ ಕೊಡಲು ನಾನು ಎಮೋಷನಲ್ ಆಗಿ ಸಿದ್ದವಾಗಿದ ಬಳಿಕ ಗರ್ಭಿಣಿಯಾಗಬೇಕೆಂದು ನಿರ್ಣಯ ತೆಗೆದುಕೊಂಡಿದ್ದೆ. ನನ್ನ ಮಗುವಿಗೆ ಪ್ರೀತಿ, ಸಂರಕ್ಷಣೆ, ಪೋಷಣೆಗೆ ಅರ್ಹರು ಎಂದು ಕಾಮೆಂಟ್ ಮಾಡಿದ್ದಾರರೆ. ಇನ್ನೂ ಉಪಾಸನಾ ಈ ಕಾಮೆಂಟ್ ಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಪೊಟೋಗಳಿಗೆ ಮೆಗಾ ಫ್ಯಾನ್ಸ್ ಸಹ ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಶುಭ ಕೋರುತ್ತಿದ್ದಾರೆ.

ಇನ್ನೂ ರಾಮ್ ಚರಣ್ ಉಪಾಸನಾ ರವರನ್ನು ಮದುವೆಯಾಗಿ ಸುಮಾರು ಹತ್ತು ವರ್ಷಗಳು ಕಳೆದಿದೆ. ಕಳೆದ 2022 ರ ಡಿಸೆಂಬರ್‍ ನಲ್ಲಿ ಉಪಾಸನಾ ಗರ್ಭಿಣಿಯಾಗಿದ್ದಾಗಿ ತಿಳಿಸಿದರು. ಇನ್ನೂ ಈ ಸುದ್ದಿಯನ್ನು ಮೆಗಾಸ್ಟಾರ್‍ ಚಿರಂಜೀವಿ ಎಮೋಷನಲ್ ಆಗಿ ಪೋಸ್ಟ್ ಮಾಡಿದ್ದರು. ಇನ್ನೂ ಉಪಾಸನಾ ಅಮೇರಿಕಾದಲ್ಲಿ ಡಿಲೆವರಿ ಮಾಡಿಸಿಕೊಳ್ಳುತ್ತಾರೆ ಎಂದು ಪ್ರಚಾರ ನಡೆದಿತ್ತು. ಆದರೆ ಈ ಸುದ್ದಿಯನ್ನು ಆಕೆ ಖಂಡಿಸಿದ್ದು, ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ಕೊಡುವುದಾಗಿ ಆಕೆ ಸ್ಪಷ್ಟತೆ ನೀಡಿದ್ದರು. ಇನ್ನೂ ಇತ್ತೀಚಿಗೆ ಆಕೆಯ ಸೀಮಂತ ಕಾರ್ಯಕ್ರಮ ಸಹ ಜೋರಾಗಿ ನಡೆದಿತ್ತು.