Film News

ಪುಷ್ಪಾ ಸಿನೆಮಾದಲ್ಲಿ ಶ್ರೀವಲ್ಲಿ ಪಾತ್ರ ನಾನಾಗಿದ್ದರೇ ಅದ್ಬುತವಾಗಿ ನಟಿಸುತ್ತಿದ್ದೆ ಎಂದ ಐಶ್ವರ್ಯ ರಾಜೇಶ್, ವೈರಲ್ ಆದ ಕಾಮೆಂಟ್ಸ್…..!

ತೆಲುಗು ಬ್ಯೂಟಿ ಐಶ್ವರ್ಯ ರಾಜೇಶ್ ತೆಲುಗು ಸಿನೆಮಾಗಳಿಗಿಂತ ತಮಿಳು ಸಿನೆಮಾಗಳಲ್ಲೇ ಹೆಚ್ಚು ಫೇಮ್ ದಕ್ಕಿಸಿಕೊಂಡಿದ್ದಾರೆ. ಕಾಲಿವುಡ್ ನಲ್ಲಿಯೇ ಸ್ಟಾರ್‍ ಇಮೇಜ್ ಅನ್ನು ಸ್ವಂತ ಮಾಡಿಕೊಂಡಿದ್ದಾರೆ ಇನ್ನೂ ಆಕೆ ಮೊದಲಿಗಿಂತಲೂ ಕೊಂಚ ಗ್ಲಾಮರ್‍ ಡೋಸ್ ಹೆಚ್ಚಿಸಿದ್ದಾರೆ. ಇದೀಗ ಆಕೆ ಪುಷ್ಪಾ ಸಿನೆಮಾದಲ್ಲಿ ರಶ್ಮಿಕಾ ನಟಿಸಿದ ಶ್ರೀವಲ್ಲಿ ಪಾತ್ರದಲ್ಲಿ ಆಕೆಗಿಂತ ಚೆನ್ನಾಗಿ ನಾನು ನಟಿಸುತ್ತಿದ್ದೆ ಎಂದು ಕಾಮೆಂಟ್ ಮಾಡಿ‌ದ್ದಾರೆ. ಆಕೆಯ ಈ ಕಾಮೆಂಟ್ ಇದೀಗ ಹಾಟ್ ಟಾಪಿಕ್ ಆಗಿದೆ.

ನಟಿ ರಶ್ಮಿಕಾ ಮಂದಣ್ಣಾ ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್ ನಲ್ಲೂ ಬಹುಬೇಡಿಕೆ ನಟಿಯಾಗಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಸೌತ್ ನಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಂಡರು. ಅದರಲ್ಲೂ ಆಕೆ ಪ್ಯಾನ್ ಇಂಡಿಯಾ ಸಿನೆಮಾ ಪುಷ್ಪಾ ಸಿನೆಮಾದ ಬಳಿಕ ದೇಶವ್ಯಾಪಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದ ಬಳಿಕ ಆಕೆ ನ್ಯಾಷನಲ್ ಕ್ರಷ್ ಎಂಬ ಖ್ಯಾತಿಗೂ ಸಹ ಗುರಿಯಾದರು. ಅಷ್ಟೊಂದು ಸ್ಟಾರ್‍ ಆದರೂ ಸಹ ರಶ್ಮಿಕಾ ಮಂದಣ್ಣ ಸದಾ ಟ್ರೋಲ್ ಆಗುತ್ತಿರುತ್ತಾರೆ. ಅದಕ್ಕೆ ಕಾರಣ ಆಕೆಯ ಆನ್ ಸ್ಕ್ರೀನ್ ಅಂಡ್ ಆಫ್ ಸ್ಕ್ರೀನ್ ನಲ್ಲಿ ಮಾಡುವಂತಹ ಓವರ್‍ ಆಕ್ಷನ್ ಎನ್ನಲಾಗಿದೆ. ಪುಷ್ಪಾ ಸಿನೆಮಾದಲ್ಲಿ ರಶ್ಮಿಕಾ ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆಕೆಗೆ ಈ ರೋಲ್ ಅಷ್ಟೊಂದು ಸೆಟ್ ಆಗಲಿಲ್ಲ ಎಂದು ಸಹ ಹೇಳಲಾಗಿತ್ತು. ಇದೀಗ ನಟಿ ಐಶ್ವರ್ಯ ರಾಜೇಶ್ ಸಹ ಆಕೆಯ ಪಾತ್ರದ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ.

ನಟಿ ಐಶ್ವರ್ಯ ರಾಜೇಶ್ ಈ ಬಗ್ಗೆ ಮಾತನಾಡುತ್ತಾ, ಪುಷ್ಪಾ ಸಿನೆಮಾದಲ್ಲಿ ಶ್ರೀವಲ್ಲಿ ಪಾತ್ರ ರಶ್ಮಿಕಾ ಮಂದಣ್ಣರವರಿಗಿಂತ ನಾನು ಚೆನ್ನಾಗಿ ಮಾಡುತ್ತಿದ್ದೆ. ಶ್ರೀವಲ್ಲಿ ಡಿ ಗ್ಲಾಮರ್‍ ಪಾತ್ರವಾಗಿದ್ದು, ಅದು ನನಗೆ ಚೆನ್ನಾಗಿ ಸ್ಯೂಟ್ ಆಗುತ್ತಿತ್ತು. ರಶ್ಮಿಕಾಗಿಂತ ಆ ಪಾತ್ರ ನಾನು ಚೆನ್ನಾಗಿ ಮಾಡುತ್ತಿದ್ದೆ ಎಂದಿದ್ದಾರೆ. ರಶ್ಮಿಕಾ ಆ ಪಾತ್ರದಲ್ಲಿ ಚೆನ್ನಾಗಿ ನಟಿಸಲಿಲ್ಲವೇ ಎಂದು ಕೇಳಿದರೇ ಅದಕ್ಕೆ ಆಕೆ ನಾನು ಚೆನ್ನಾಗಿ ಮಾಡಿಲ ಎಂದು ಹೇಳಲಿಲ್ಲ. ನಾನಾಗಿದ್ದರೇ ಆ ಪಾತ್ರಕ್ಕೆ ಸರಿಯಾಗಿ ಸ್ಯೂಟ್ ಆಗುತ್ತಿದ್ದೆ ಎಂಬುದು ನನ್ನ ಅಭಿಪ್ರಾಯಾಗಿದೆ ಎಂದು ಐಶ್ವರ್ಯ ರಾಜೇಶ್ ಹೇಳಿದ್ದಾರೆ. ಇನ್ನೂ ಐಶ್ವರ್ಯ ರಾಜೇಶ್ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಅಷ್ಟೇಅಲ್ಲದೇ ಆಕೆಗೆ ಟಾಲಿವುಡ್ ಎಂದರೇ ತುಂಭಾ ಇಷ್ಟವಾಗಿದ್ದು, ವರ್ಲ್ಡ್ ಫೇಮಸ್ ಲವರ್‍ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ನಾನು ಪರಿಚಯವಾದೆ ಎಂದಿದ್ದಾರೆ. ಇನ್ನೂ ಐಶ್ವರ್ಯ ಕೈಯಲ್ಲಿ ಏಳು ಸಿನೆಮಾಗಳಿವೆ ಅದರಲ್ಲಿ ಮೂರು ಮಲಯಾಳಂ ಸಿನೆಮಾಗಳು ಹಾಗೂ ನಾಲ್ಕು ತಮಿಳು ಸಿನೆಮಾಗಳು. ಇನ್ನೂ ಈಕೆ ತೆಲುಗಿನಲ್ಲಿ ನಟಿಸಿದ ಕೌಸಲ್ಯ ಕೃಷ್ಣಮೂರ್ತಿ, ಟಕ್ ಜಗದೀಶ್, ರಿಪಬ್ಲಿಕ್, ಮಿಸ್ ಮ್ಯಾಚ್ ಸೇರಿದಂಯತೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದು, ಈ ಸಿನೆಮಾಗಳು ಅಷ್ಟೊಂದು ಖ್ಯಾತಿ ಪಡೆದುಕೊಂಡಿಲ್ಲ. ಸದ್ಯ ಆಕೆ ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲೇ ನಟಿಸುತ್ತಿದ್ದಾರೆ.

Most Popular

To Top