Film News

ಬಾಲಿವುಡ್ ನಟಿಯನ್ನು ನೈಟ್ ಗರ್ಲ್ ಎಂದ ಉಮೈರ್ ಸಂಧು, ಅಂಬಾನಿ ಸಹ ಆಕೆಯೊಂದಿಗೆ ರಾತ್ರಿ ಕಳೆಯಲು ಬಯಸ್ತಾರೆ ಎಂದು ಟ್ವೀಟ್…..!

ಸದಾ ವಿವಾದಾತ್ಮಕ ಟ್ವೀಟ್ ಗಳ ಮೂಲಕವೇ ಸುದ್ದಿಯಾಗುವ ಸ್ವಯಂ ಘೋಷಿತ ಕ್ರಿಟಿಕ್ ಉಮೈರ್‍ ಸಂಧು ಇಂಡಿಯನ್ ಫಿಲಂ ಸೆಲೆಬ್ರೆಟಿಗಳ ಬಗ್ಗೆ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡುತ್ತಿರುತ್ತಾರೆ. ಇಂಡಿಯನ್ ಕಲಾವಿದರ ಬಗ್ಗೆ ಮಾನಹಾನಿಕರವಾದ ಹೇಳಿಕೆಗಳನ್ನು ಮಾಡುತ್ತಾ ಅವರ ತೇಜೋವಧೆ ಮಾಡುತ್ತಾ ಸುದ್ದಿಯಾಗುತ್ತಿರುತ್ತಾರೆ. ಈಗಾಗಲೇ ಆತನ ಬಗ್ಗೆ ಅನೇಕರು ಲೀಗಲ್ ಆಗಿ ನೋಟಿಸ್ ಕಳುಹಿಸಿದರೂ ಸಹ ಆತ ಮಾತ್ರ ತನ್ನ ವರಸೆ ಬಿಟ್ಟಿಲ್ಲ. ಇದೀಗ ಬಾಲಿವುಡ್ ಸ್ಟಾರ್‍ ನಟಿಯನ್ನು ನೈಟ್ ಗರ್ಲ್‌ ಎಂದೂ, ಆಕೆಯೊಂದಿಗೆ ಮಲಗಲು ಅಂಬಾನಿ ಸಹ ಇಷ್ಟಪಡುತ್ತಾರೆ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದು, ಟ್ವೀಟ್ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಪಾಕಿಸ್ತಾನ ಮೂಲದ ಉಮೈರ್‍ ಸಂಧು ಸ್ವಯಂ ಘೋಷಿತ ಸಿನೆಮಾ ವಿಮರ್ಶಕ ಎಂದು ಹೇಳಿಕೊಳ್ಳುತ್ತಾನೆ. ಪತ್ರಕರ್ತ, ಸಿನೆಮಾ ವಿಮರ್ಶಕ ಎಂದು ಹೇಳಿಕೊಳ್ಳುತ್ತಾ ಹಿಂದಿ ಸಿನೆಮಾಗಳು ಹಾಗೂ ವಿದೇಶಿ ಸೆನ್ಸಾರ್‍ ಬೋರ್ಡ್‌ನ ಸದಸ್ಯೆ ಎಂತಲೂ ಹೇಳಿಕೊಳ್ಳುತ್ತಾರೆ. ಭಾರತ ಸಿನಿರಂಗದ ಸ್ಟಾರ್‍ ನಟ-ನಟಿಯರ ಬಗ್ಗೆ ಅನೇಕ ವಿವಾದಾತ್ಮಕ ಟ್ವೀಟ್ ಗಳು, ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ತನ್ನನ್ನು ತಾನು ಸದಾ ಸುದ್ದಿಯಲ್ಲಿರುವಂತೆ ಮಾಡುತ್ತಿರುತ್ತಾರೆ. ಈ ಹಿಂದೆ ಸೀನಿಯರ್‍ ನಟಿ ಅಮಿಷಾ ಪಟೇಲ್ ರವರ ವಿರುದ್ದ ಸಹ ಆರೋಪ ಮಾಡಿದ್ದರು. ಪೂಜಾ ಹೆಗ್ಡೆ ಆತ್ಮಹತ್ಯೆಕ್ಕೆ ಯತ್ನಿಸಿದ್ದರು ಎಂದು ಟ್ವೀಟ್ ಮಾಡಿದ್ದರು. ಇದಕ್ಕಾಗಿ ಆತನಿಗೆ ಲೀಗಲ್ ನೊಟೀಸ್ ಸಹ ಪೂಜಾ ಕಳುಹಿಸಿದ್ದರು. ಸ್ಯಾಂಡಲ್ ವುಡ್ ಸ್ಟಾರ್‍ ನಟ ಯಶ್ ಬಗ್ಗೆ ಸಹ ಕೀಳಾಗಿ ಮಾತನಾಡಿ ಯಶ್ ಅಭಿಮಾನಿಗಳಿಂದ ಮಂಗಳಾರತಿ ಎತ್ತಿಸಿಕೊಂಡಿದ್ದರು. ಇದೀಗ ಬಾಲಿವುಡ್ ಸ್ಟಾರ್‍ ನಟಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಸುದ್ದಿಯಾಗಿದ್ದಾರೆ.

ಬಾಲಿವುಡ್ ನ ಸ್ಟಾರ್‍ ನಟಿ ನೋರಾ ಫತೇಹಿ ಸಿನಿರಂಗದಲ್ಲಿ ಭಾರಿ ಫೇಂ ಪಡೆದುಕೊಂಡಿದ್ದಾರೆ. ಐಟಂ ಡ್ಯಾನ್ಸರ್‍ ಆಗಿ ತುಂಬಾನೆ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲದೇ ಸೌತ್ ನಲ್ಲಿಯೂ ಸಹ ಕೆಲವೊಂದು ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಮೂಲಕ ಕ್ರೇಜ್ ಪಡೆದುಕೊಂಡಿದ್ದಾರೆ. ಇದೀಗ ನೋರಾ ಫತೇಹಿ ಬಗ್ಗೆ ಉಮೈರ್‍ ಸಂಧು ಕೆಟ್ಟದಾಗಿ ಎಕ್ಸ್ (ಟ್ವೀಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇತ್ತಿಚಿಗೆ ಭಾರತದಲ್ಲಿ ಅತ್ಯಂರ ದುಬಾರಿ ನೈಟ್ ಗರ್ಲ್ ಅಂದರೇ ನೋರಾ ಫತೇಹಿ. ಪ್ರತಿಯೊಬ್ಬ ರಾಜಕಾರಣಿ, ನಟಿ, ಉದ್ಯಮಿಗಳು ಅದರಲ್ಲೂ ಅಂಬಾನಿ ಸಹ ಆಕೆಯ ಜೊತೆಗೆ ಮಲಗಲು ಇಷ್ಟಪಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ಉಮೈರ್‍ ಸಂಧು ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಇನ್ನೂ ಉಮೈರ್‍ ಸಂಧು ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ನೋರಾ ಫತೇಹಿ ಅಭಿಮಾನಿಗಳಂತೂ ಕೆಟ್ಟ ಭಾಷೆಯ ಮೂಲಕವೇ ಉಮೈರ ಸಂಧುರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈತನ ಹುಚ್ಚಾಟಕ್ಕೆ ಯಾವಾಗ ಬ್ರೇಕ್ ಬೀಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top