Film News

ಭತ್ತದ ಬೆಳೆಯಲ್ಲಿ ಅಪ್ಪು ಭಾವಚಿತ್ರ ಬಿಡಿಸಿದ ರೈತ, ರಾಯಚೂರು ಜಿಲ್ಲೆಯ ರೈತನಿಂದ ಭತ್ತದ ಬೆಳೆಯಲ್ಲಿ ಕಂಡ ಅಪ್ಪು…..!

ಕೇವಲ ಸಿನೆಮಾಗಳ ಮೂಲಕವಲ್ಲದೇ, ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ದೊಡ್ಡ ಫೇಮ್ ದಕ್ಕಿಸಿಕೊಂಡ ನಟರಲ್ಲಿ ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ಮೊದಲ ಸ್ಥಾನದಲ್ಲಿರುತ್ತಾರೆ. ಕಳೆದ ಅ.29 ರಂದು ಅಂದು ಕರುನಾಡು ಮಾತ್ರವಲ್ಲದೇ ಇಡೀ ಅಪ್ಪು ಅಭಿಮಾನಿಗಳಿಗೆ ದೊಡ್ಡ ಆಘಾತ ಎದುರಾಗಿತ್ತು. ಅಂದು ಅಪ್ಪು ಮರಣದ ಸುದ್ದಿ ಕರುನಾಡನ್ನು ಕಣ್ಣಿರು ಹಾಕಿಸಿತ್ತು. ಇಂದಿಗೂ ಸಹ ಅಪ್ಪು ಮೃತಪಟ್ಟಿದ್ದಾರೆ ಎಂದು ಅನೇಕರು ನಂಬಿಯೇ ಇಲ್ಲ. ಇದೀಗ ಪುನೀತ್ ರವರ ಕಟ್ಟಾ ಅಭಿಮಾನಿಯೊಬ್ಬರು ಭತ್ತದ ಬೆಳೆಯಲ್ಲಿ ಅಪ್ಪು ಚಿತ್ರ ಮೂಡುವಂತೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಡೊಣ್ಣಿ ಕ್ಯಾಂಪ್ ಎಂಬಲ್ಲಿನ ರೈತ ನಾರಾಯಣ ರವರು ಪುನೀತ್ ರಾಜ್ ಕುಮಾರ್‍ ರವರ ಅಪ್ಪಟ ಅಭಿಮಾನಿಯಾಗಿದ್ದಾರೆ. ತಮ್ಮ ಭತ್ತದ ಬೆಳೆಯಲ್ಲಿ ಪುನೀತ್ ರಾಜಕುಮಾರ್‍ ರವರ ಭಾವಚಿತ್ರ ಮೂಡುವಂತೆ ಮಾಡಿ ವಿಭಿನ್ನವಾಗಿ ಅಪ್ಪು ರವರ 2ನೇ ವರ್ಷದ ಪುಣ್ಯಸ್ಮರಣೆ ಆಚರಿಸಿದ್ದಾರೆ. ತಮ್ಮ ಎರಡು ಎಕರೆ ಜಮೀನಿನಲ್ಲಿ ಅಪ್ಪುವಿನ ಭಾವಚಿತ್ರಕ್ಕೆ ತಕ್ಕಂತೆ ಭತ್ತ ಬೆಳೆದಿದ್ದಾರೆ. ಇನ್ನೂ ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ರೈತ ಸತ್ಯನಾರಾಯಣರವರು ಅಂಗವೈಕಲ್ಯತೆ ಹೊಂದಿದ್ದರೂ ಸಹ ತುಂಬಾ ಕಷ್ಟಪಡುತ್ತಾರೆ. ಇದೀಗ ಅಪ್ಪು ಭಾವಚಿತ್ರ ಮೂಡುವಂತೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ರೈತ ಸತ್ಯನಾರಾಯಣ ರವರು ಜಪಾನ್ ತಂತ್ರಜ್ಞಾನ ಬಳಸಿಕೊಂಡು ವಿವಿಧ ತಳಿಯ ಭತ್ತ ಬೆಳೆಯುತ್ತಾ ಅನೇಕರಿಗೆ ಮಾದರಿಯಾಗಿದ್ದಾರೆ. ಜೊತೆಗೆ ತೆಲಂಗಾಣ, ಗುಜರಾತ್ ರಾಜ್ಯಗಳಿಂದ ಕಾವೇರಿ, ಕಾಲಭಟ್ಟಿ, ಗೋಲ್ಡನ್ ರೋಜ್ ಸೇರಿದಂತೆ ವಿವಿಧ ತಳಿಯ ಭತ್ತದ ತಳಿ ಬೆಳೆದಿದ್ದಾರೆ. ಜೊತೆಗೆ ಸಾವಯವ ಪದ್ದತಿಯ ಮೂಲಕ ಕೃಷಿ ಮಾಡುತ್ತಾರೆ. ಬರಗಾಲದ ನಡುವೆ ಭತ್ತದ ಗದ್ದೆಗೆ ನೀರು ಹಾಯಿಸಲು ಸುಮಾರು ಮೂರು ಲಕ್ಷ ವೆಚ್ಚ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ 90 ದಿನಗಳ ಭತ್ತದ ಬೆಳೆಯಲ್ಲಿ ಅಪ್ಪು ಚಿತ್ರ ರೂಪುಗೊಂಡಿದೆ. ಜೊತೆಗೆ ಕರ್ನಾಟಕ ರತ್ನ ಎಂಬ ಅಕ್ಷರ ಸಹ ಬಿಡಿಸಿದ್ದಾರೆ. ಸದ್ಯ ಈ ವಿಡಿಯೋ, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Most Popular

To Top