Film News

ಸಮಂತಾ ಬಗ್ಗೆ ಅಸಭ್ಯಕರವಾದ ಕಾಮೆಂಟ್ಸ್, ಆಕೆ ಹೆಚ್ಚಾಗಿ ಶೃಂಗಾರದ ಮೇಲೆ ಪೋಕಸ್ ಇಡುತ್ತಿದ್ದಾಳೆ ಎಂದ ಕ್ರಿಟಿಕ್…!

ಸ್ಟಾರ್‍ ನಟಿ ಸಮಂತಾ ಇತ್ತೀಚಿಗೆ ವೈಯುಕ್ತಿಕ ಕಾರಣಗಳಿಂದ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಆಕೆ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಅನೇಕ ಸಮಸ್ಯೆಗಳನ್ನು ಎದುರಿಸಿದ್ದರು. ಎದುರಾದ ಎಲ್ಲಾ ಅವಮಾನಗಳನ್ನು ಮೆಟ್ಟಿನಿಂತು ಸಿನೆಮಾ ಕೆರಿಯರ್‍ ಮುಂದುವರೆಸುತ್ತಿದ್ದಾರೆ. ಬಳಿಕ ಆಕೆ ಮಯೋಸೈಟೀಸ್ ವ್ಯಾದಿಗೆ ಗುರಿಯಾಗಿ ತುಂಬಾನೆ ಸಮಸ್ಯೆ ಎದುರಿಸಿದ್ದರು. ಸದ್ಯ ಆಕೆ ಸಂಪೂರ್ಣವಾಗಿ ಗುಣಮುಖರಾಗಲು ಒಂದು ವರ್ಷದ ಕಾಲ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದರು. ಇದೀಗ ಸಮಂತಾ ಬಗ್ಗೆ ಕ್ರಿಟಿಕ್ ಒಬ್ಬರು ಅಸಭ್ಯಕರವಾಗಿ ಕಾಮೆಂಟ್ ಮಾಡಿದ್ದು, ಆತನ ವಿರುದ್ದ ಸಮಂತಾ ಅಭಿಮಾನಿಗಳು ಫೈರ್‍ ಆಗಿದ್ದಾರೆ.

ಕಳೆದ ವರ್ಷ ಮಯೋಸೈಟೀಸ್ ವ್ಯಾದಿಗೆ ಗುರಿಯಾದ ಸಮಂತಾ ಅದರಿಂದ ಹೊರಬರಲು ತುಂಬಾನೆ ಕಷ್ಟಗಳನ್ನು ಪಟ್ಟಿದ್ದರು. ಮಯೋಸೈಟೀಸ್ ನಿಂದ ಹೊರಬಂದ ಸಮಂತಾ ಯಶೋಧ, ಶಾಕುಂತಲಂ ಹಾಗೂ ಖುಷಿ ಸಿನೆಮಾದಲ್ಲಿ ನಟಿಸಿದ್ದರು. ಜೊತೆಗೆ ಸಿಟಾಡೆಲ್ ವೆಬ್ ಸಿರೀಸ್ ಸಹ ಪೂರ್ಣಗೊಳಿಸಿದ್ದರು. ಇದೀಗ ಆಕೆ ತನ್ನ ಆರೋಗ್ಯವನ್ನು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಆಕೆ ಒಂದು ವರ್ಷದ ಕಾಲ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಸದಾ ಯೋಗಾ ಮಾಡುತ್ತಾ, ಪ್ರಾಕೃತಿಕ ಪ್ರದೇಶಗಳನ್ನು ವೀಕ್ಷಣೆ ಮಾಡುತ್ತಾ ಸಾಗುತ್ತಿದ್ದಾರೆ. ಕೊನೆಯದಾಗಿ ಆಕೆ ಖುಷಿ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಸಹ ಕಂಡಿದೆ.

ಇನ್ನೂ ತನ್ನನ್ನು ತಾನು ಫಿಲಂ ಕ್ರಿಟಿಕ್ ಎಂದು ಸೋಷಿಯಲ್ ಮಿಡಿಯಾದಲ್ಲಿ ಇಲ್ಲ ಸಲ್ಲದ ಪೋಸ್ಟ್ ಗಳನ್ನು ಮಾಡುತ್ತಾ ಫೇಂ ಪಡೆದುಕೊಳ್ಳಲು ಮುಂದಾಗುವಂತಹ ಉಮೈರ್‍ ಸಂಧು ಸಮಂತಾ ಬಗ್ಗೆ ಅಸಭ್ಯಕರವಾದ ಕಾಮೆಂಟ್ ಮಾಡಿದ್ದಾರೆ. ಆತನ ಟ್ವೀಟ್ ವಿರುದ್ದ ಸಮಂತಾ ಫ್ಯಾನ್ಸ್ ಕಿಡಿಕಾರಿದ್ದು, ಆತನನ್ನು ಹಿಗ್ಗಾಮುಗ್ಗಾ ಟ್ರೋಲ್ ಸಹ ಮಾಡುತ್ತಿದ್ದಾರೆ. ಈ ಟ್ವೀಟ್ ನಲ್ಲಿ ಉಮೈರ್‍ ಸಮಂತಾರವರ ಮಾರ್ಫಿಂಗ್ ಪೊಟೋ ಬಳಸಿದ್ದಾರೆ. ಸಮಂತಾ ವಿಚ್ಚೇದನದ ಬಳಿಕ ಲಿಮಿಟ್ಸ್ ದಾಟುತ್ತಿದ್ದಾರೆ. ನಾನ್ ಸ್ಟಾಪ್ ಆಗಿ ಒನ್ ನೈಟ್ ಸ್ಟಾಂಡ್ಸ್ ಮಾಡುತ್ತಿದ್ದಾರೆ. ಆಕೆ ಶೃಂಗಾರದ ಮೇಲೆ ಹೆಚ್ಚಿನ ದೃಷ್ಟಿ ಇಡುತ್ತಿದ್ದಾರೆ. ಸಿನೆಮಾಗಳು ಮಾಡುವ ಆಸಕ್ತಿ ಸಹ ಆಕೆಯ ಮೇಲಿಲ್ಲ ಎಂದು ವಲ್ಗರ್‍ ಆಗಿ ಕಾಮೆಂಟ್ಸ್ ಮಾಡಿದ್ದಾನೆ.

ಇನ್ನೂ ಸಮಂತಾ ಬಗ್ಗೆ ಕ್ರಿಟಿಕ್ ಎಂದು ಹೇಳಿಕೊಳ್ಳುವ ಉಮೈರ್‍ ಸಂಧೂ ಅಸಭ್ಯಕರವಾದ ಕಾಮೆಂಟ್ಸ್ ಮಾಡಿದ್ದು, ಆತನ ವಿರುದ್ದ ಸಮಂತಾ ಫ್ಯಾನ್ಸ್ ಫೈರ್‍ ಆಗಿದ್ದಾರೆ. ಆತನ ವಿರುದ್ದ ಲೀಗಲ್ ಆಕ್ಷನ್ ತೆಗೆದುಕೊಳ್ಳಬೇಕು ಎಂದು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಉಮೈರ್‍ ಸಂಧು ಸದಾ ಸೆಲೆಬ್ರೆಟಿಗಳ ವಿರುದ್ದ ಇದೇ ಮಾದರಿಯಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಾ ಫೇಮಸ್ ಆಗಲು ಕೀಳು ಮಟ್ಟದ ಪೋಸ್ಟ್ ಮಾಡುತ್ತಿರುತ್ತಾರೆ.

Most Popular

To Top