ಬಿಗ್ ಬಾಸ್: ಟಾಸ್ಕ್ ಸಂಬಂಧ ವಿನಯ್-ಅವಿನಾಶ್ ನಡುವೆ ಕಾಳಗ, ವಿನಯ್ ಕೈ ಬೆರಳು ಮುರಿತ, ಆಸ್ಪತ್ರೆಗೆ ದಾಖಲಾದ ಕಾರ್ತಿಕ್….!

Follow Us :

ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 12 ವಾರ ಪೂರೈಸಿದೆ. ಫೈನಲ್ ಹಂತ ಹತ್ತಿರ ಬರುತ್ತಿದ್ದಂತೆ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಸಹ ಜೋರಾಗಿದೆ. ಈ ನಡುವೆ ಮನೆಯಲ್ಲಿ ಸಂಭ್ರಮಕ್ಕಿಂತ ಕಾಳಗವೇ ಜಾಸ್ತಿಯಾಗುತ್ತಿದೆ. ಇದೀಗ ಟಾಸ್ಕ್ ಒಂದರಲ್ಲಿ ವಿನಯ್ ಹಾಗೂ ಅವಿನಾಶ್ ನಡುವೆ ಕಾಳಗ ನಡೆದಿದೆ. ಈ ಕಾಳಗದಲ್ಲಿ ವಿನಯ್ ಕೈ ಬೆರಳು ಮುರಿದಿದೆ, ಕಾರ್ತಿಕ್ ಸಹ ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗಿದೆ.

ಕನ್ನಡದ ಬಿಗ್ ಬಾಸ್ ಸೀಸನ್ 10 ರ ನಿಮಿತ್ತ ಬುಧವಾರ ಸ್ಪರ್ಧಿಗಳಿಗೆ ಕ್ಯಾಪ್ಟೆನ್ಸಿ ಪಟ್ಟಕ್ಕಾಗಿ ವಿಭಿನ್ನವಾದ ಟಾಸ್ಕ್ ನೀಡಲಾಗಿತ್ತು. ಬಟ್ಟೆಗಳನ್ನು ಬಣ್ಣಗಳಿಂದ ಕೊಳಕು ಮಾಡುವುದು, ಬಟ್ಟೆಗಳನ್ನು ಕಾಪಾಡಿಕೊಳ್ಳುವುದು ಟಾಸ್ಕ್ ಆಗಿದೆ. ಈ ವೇಳೆ ಭಾರಿ ಕಾಳಗ ನಡೆದಿದೆ. ವಿನಯ್ ಹಾಗೂ ಅವಿನಾಶ್ ನಡುವೆ ಟಾಸ್ಕ್ ಸಮಯದಲ್ಲಿ ಮಾತಿನ ಚಕಮಕಿ ನಡೆದಿದೆ. ಮಾತುಗಳು ಜಾಸ್ತಿಯಾಗಿ ಹೊಡೆದಾಡುವ ಹಂತಕ್ಕೆ ತಲುಪಿತ್ತು. ಮನೆಯ ಸದಸ್ಯರೆಲ್ಲರೂ ಭಯ ಪಡುವ ಹಂತಕ್ಕೆ ಈ ಜಗಳ ಹೋಗಿತ್ತು. ಮನೆಯ ಎಲ್ಲ ಸದಸ್ಯರು ಜಗಳವನ್ನು ತಡೆಯಲು ಪ್ರಯತ್ನಗಳನ್ನು ಮಾಡಿದ್ದರು. ಈ ಕಾಳಗದಲ್ಲಿ ವಿನಯ್  ಕೈ ಬೆರಳಿಗೆ ಪೆಟ್ಟಾಗಿದೆ. ಇದೇ ಟಾಸ್ಕ್ ನಲ್ಲಿ ಮತ್ತೋರ್ವ ಸ್ಪರ್ಧಿ ಕಾರ್ತಿಕ್ ಗೂ ಸಹ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದುಬಂದಿದೆ.

ಇನ್ನೂ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಟ್ರೋಫಿ ಗೆಲ್ಲಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸದ್ಯ 12 ವಾರ ಯಶಸ್ವಿಯಾಗಿ ಸ್ಪರ್ಧಿಗಳು ಪೂರೈಸಿದ್ದಾರೆ. ಆಯಾ ಸ್ಪರ್ಧಿಗಳ ಅಭಿಮಾನಿಗಳು ತಮ್ಮ ಸ್ಪರ್ಧಿಯೇ ಗೆಲ್ಲುತ್ತಾರೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಚರ್ಚೆ ಸಹ ನಡೆಸುತ್ತಿದ್ದಾರೆ. ಇನ್ನೂ ಸುಮಾರು ದಿನಗಳಿಂದ ಡ್ರೋನ್ ಪ್ರತಾಪ್ ಫೈನಲಿಸ್ಟ್ ಎಂದು ಹೇಳಲಾಗುತ್ತಿತ್ತು. ಇದೀಗ ಪ್ರತಾಪ್ ಹೆಸರು ಕೇಳುವುದು ಕಡಿಮೆಯಾಗಿದೆ. ಇದೀಗ ಸಂಗೀತಾ, ಕಾರ್ತಿಕ್ ಹಾಗೂ ತನಿಷಾ ಹೆಸರುಗಳು ಫೈನಲ್ ಲೀಸ್ಟ್ ನಲ್ಲಿರುತ್ತೆ ಎಂದು ಕಾಮೆಂಟ್ ಗಳು ಕೇಳಿಬರುತ್ತಿವೆ.