Film News

ಆಫ್ರಿಕಾದಲ್ಲೂ ಕುರ್ಚಿ ಮಡತಪೆಟ್ಟಿ ಹಾಡಿನ ಹವಾ, ಗುಂಟೂರು ಕಾರಂ ಸಿನೆಮಾದ ಹಾಡಿಗೆ ಉಗಾಂಡ ಮಕ್ಕಳ ಭರ್ಜರಿ ಸ್ಟೆಪ್ಸ್…..!

ಕೆಲವು ದಿನಗಳ ಹಿಂದೆಯಷ್ಟೆ ತೆರೆಕಂಡ ಮಹೇಶ್ ಬಾಬು ಹಾಗೂ ಯಂಗ್ ಬ್ಯೂಟಿ ಶ್ರೀಲೀಲಾ ಅಭಿನಯದ ಗುಂಟೂರು ಖಾರಂ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಭಾರಿ ನಿರೀಕ್ಷೆಯಿಂದ ಈ ಸಿನೆಮಾ ತೆರೆಗೆ ಬಂದಿತ್ತು. ಆದರೆ ಅಂದುಕೊಂಡಷ್ಟು ಈ ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದು.  ಆದರೆ ಈ ಸಿನೆಮಾದಲ್ಲಿನ ಹಾಡುಗಳು ಹಾಗೂ ಶ್ರೀಲೀಲಾ ನೃತ್ಯ ಪ್ರೇಕ್ಷಕರನ್ನು ತುಂಬಾ ಆಕರ್ಷಣೆ ಮಾಡಿತ್ತು. ಅದರಲ್ಲೂ ಕುರ್ಚಿ ಮಡತಪೆಟ್ಟಿ ಹಾಡು ಮಾತ್ರ ತುಂಬಾ ಟ್ರೆಂಡಿಂಗ್ ಆಗಿತ್ತು. ಈ ಹಾಡಿಗೆ ಆಫ್ರಿಕನ್ ಮಕ್ಕಳು ಸಹ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಗುಂಟೂರು ಖಾರಂ ಸಿನೆಮಾದಲ್ಲಿನ ಟ್ರೆಂಡಿಂಗ್ ಸಾಂಗ್ ಕುರ್ಚಿ ಮಡಪೆಟ್ಟಿ ಎಂಬ ಹಾಡು ಭಾರಿ ಸದ್ದು ಮಾಡಿತ್ತು. ಈಗಲೂ ಸಹ ಈ ಹಾಡಿನ ಹವಾ ಕಡಿಮೆಯಾಗಿಲ್ಲ ಎನ್ನಬಹುದು. ಯೂಟ್ಯೂಬ್ ನಲ್ಲಿ ಹೊಸ ರೆಕಾರ್ಡ್‌ಗಳನ್ನು ಸಹ ಸೃಷ್ಟಿಸಿದೆ. ಮಹೇಶ್ ಬಾಬು ಹಾಗೂ ಶ್ರೀಲೀಲಾ ಈ ಹಾಡಿನಲ್ಲಿ ಭರ್ಜರಿಯಾಗಿ ಎನರ್ಜಿಟಿಕ್ ಆಗಿ ನೃತ್ಯ ಮಾಡಿದ್ದರು. ಈ ಹಾಡು ಸೌತ್ ಅಂಡ್ ನಾರ್ತ್‌ನಲ್ಲೂ ಭಾರಿ ಸೌಂಡ್ ಮಾಡಿತ್ತು. ಇದೀಗ ಈ ಹಾಡು ಆಫ್ರಿಕಾದಲ್ಲೂ ಸದ್ದು ಮಾಡಿದೆ. ಆಫ್ರಿಕಾದ ಮಕ್ಕಳು ಕುರ್ಚಿ ಮಡಪೆಟ್ಟಿ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಮಹೇಶ್ ಬಾಬು ರವರಂತೆ ಈ ಮಕ್ಕಳು ಸ್ಟೆಪ್ಸ್ ಹಾಕಿದ್ದಾರೆ. ಗ್ರೂಪ್ ನಲ್ಲಿ ಓರ್ವ ಹುಡುಗಿ ಶ್ರೀಲೀಲಾ ಮಾದರಿಯಲ್ಲಿ ಸ್ಟೆಪ್ಸ್ ಹಾಕಿದರೇ, ಉಳಿದ ಮಕ್ಕಳು ಮಹೇಶ್ ಬಾಬು ಸ್ಟೈಲ್ ಫಾಲೋ ಮಾಡಿದ್ದಾರೆ.

ಇತ್ತೀಚಿಗೆ ಅಮೇರಿಕಾದಲ್ಲಿ ಹ್ಯೂಸ್ಟನ್ ಫ್ಲಾಷ್ ಮಾಬ್ ಈವೆಂಟ್ ನಲ್ಲೂ ಈ ಹಾಡು ಸದ್ದು ಮಾಡಿತ್ತು. ಇದೀಗ ಆಫ್ರಿಕಾದ ಮಕ್ಕಳು ಭರ್ಜರಿಯಾಗಿ ನೃತ್ಯ ಮಾಡಿದ್ದಾರೆ. ಈ ಹಿಂದೆ ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ರವರ ಅಲಾ ವೈಕುಂಠಪುರಂಲೋ ಸಿನೆಮಾದ ಬುಟ್ಟಬೊಮ್ಮ ಹಾಡು ಭಾರಿ ವೈರಲ್ ಆಗಿತ್ತು. ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರೆಟಿಗಳೂ ಅದರಲ್ಲೂ ವಿವಿಧ ದೇಶಗಳ ಸೆಲೆಬ್ರೆಟಿಗಳೂ, ಕ್ರಿಕೆಟಿಗರೂ ಸಹ ಈ ಹಾಡಿಗೆ ಸ್ಟೆಪ್ಸ್ ಹಾಕಿದ್ದರು. ಇದೀಗ ಆಫ್ರಿಕಾದ ಮಕ್ಕಳು ಮಹೇಶ್ ಬಾಬು ರವರ ಗುಂಟೂರು ಖಾರಂ ಸಿನೆಮಾದ ಕುರ್ಚಿ ಮಡತಪೆಟ್ಟಿ ಹಾಡಿಗೆ ಭರ್ಜರಿಯಾಗಿ ಕುಣಿದಿದ್ದಾರೆ. ಈ ವಿಡಿಯೋ  ಇದೀಗ ಭಾರಿ ವೈರಲ್ ಆಗುತ್ತಿದೆ. ಮಕ್ಕಳ ನೃತ್ಯಕ್ಕೆ ಅನೇಕರು ಫಿದಾ ಆಗಿದ್ದಾರೆ.

Most Popular

To Top