Film News

ತೆಲುಗಿನ ಸ್ಟಾರ್ ನಟನ ಸಿನೆಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡ ಕಾಂತಾರ ಬ್ಯೂಟಿ ಸಪ್ತಮಿ ಗೌಡ….!

ಕನ್ನಡದಲ್ಲಿ ಇತ್ತಿಚಿಗೆ ತೆರೆಕಂಡ ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನೆಮಾ ಈಗಾಗಲೇ ದೊಡ್ಡ ಕ್ರೇಜ್ ಪಡೆದುಕೊಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ದೇಶದ ಅನೇಕ ಸಿನೆಮಾ ರಂಗಗಳ ಸೆಲೆಬ್ರೆಟಿಗಳಿಗೂ ಸಹ ಈ ಸಿನೆಮಾ ತುಂಬಾನೆ ಇಷ್ಟವಾಗಿದೆ. ಈ ಸಿನೆಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಸಪ್ತಮಿಗೌಡ ಭಾರಿ ಹೆಸರು ಪಡೆದುಕೊಂಡರು. ಈ ಸಿನೆಮಾದ ಬಳಿಕ ಆಕೆ ಬಾಲಿವುಡ್ ನಲ್ಲೂ ನಟಿಸಿದ್ದರು. ಇದೀಗ ಆಕೆ ತೆಲುಗಿನ ಸ್ಟಾರ್‍ ಹಿರೋ ಜೊತೆಗೆ ನಟಿಸುತ್ತಿದ್ದು, ಈ ಸುದ್ದಿಯನ್ನು ಸಪ್ತಮಿ ಗೌಡ ರವರೇ ರಿವೀಲ್ ಮಾಡಿದ್ದಾರೆ.

ಯಂಗ್ ಬ್ಯೂಟಿ ಸಪ್ತಮಿ ಗೌಡ ಪಾಪ್ ಕಾರ್ನ್ ಮಂಕಿ ಟೈಗರ್‍ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಆಕೆ ಕಾಂತಾರ ಸಿನೆಮಾದಲ್ಲಿ ನಟಿಸಿದ್ದರು. ಆಕೆಗೆ ಕಾಂತಾರ ಸಿನೆಮಾ ಬಿಗ್ ಬ್ರೇಕ್ ನೀಡಿದೆ ಎನ್ನಬಹುದಾಗಿದೆ. ಈ ಸಿನೆಮಾದಲ್ಲಿ ಆಕೆ ಫಾರೆಸ್ಟ್ ಗಾರ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ನಟಿ ಸಪ್ತಮಿ ತುಂಬಾನೆ ಚೆನ್ನಾಗಿ ಅಭಿನಯಿಸಿದ್ದಾರೆ. ಇನ್ನೂ ಈ ಸಿನೆಮಾದ ಬಳಿಕ ಆಕೆಗೆ ಭಾರಿ ಆಫರ್‍ ಗಳು ಹರಿದು ಬರುತ್ತಿವೆ. ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರ ರವರ ದಿ ವ್ಯಾಕ್ಸಿನ್ ವಾರ್‍ ಸಿನೆಮಾದಲ್ಲಿ ನಟಿಸಿ ಫೇಂ ಪಡೆದುಕೊಂಡರು. ಇದೀಗ ಆಕೆ ಟಾಲಿವುಡ್ ಅಂಗಳಕ್ಕೂ ಕಾಲಿಡಲಿದ್ದಾರೆ ಈ ಸುದ್ದಿಯನ್ನು ಆಕೆಯೇ ರಿವೀಲ್ ಮಾಡಿದ್ದಾರೆ.

ನಟಿ ಸಪ್ತಮಿ ಗೌಡ ತೆಲುಗು ಸಿನೆಮಾದಲ್ಲಿ ನಟಿಸುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ತೆಲುಗು ನಟ ನಿತಿನ್ ಸಿನೆಮಾದಲ್ಲಿ ನಾನು ನಟಿಸುತ್ತಿದ್ದೇನೆ. ಈಗಾಗಲೇ ಸಿನೆಮಾದ ಶೂಟಿಂಗ್ ಸಹ ಶುರುವಾಗಿದೆ. ನಾನು ಹೋಗಿ ಸೆಟ್ ನಲ್ಲಿ ಸೇರಿಕೊಳ್ಳಬೇಕಿದೆ ಎಂದು ಸಪ್ತಮಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನೂ ಈ ಸುದ್ದಿ ಕೇಳುತ್ತಿದ್ದಂತೆ ಸಪ್ತಮಿ ಗೌಡ ಪುಲ್ ಥ್ರಿಲ್ ಆಗಿದ್ದಾರೆ. ಈ ಸಿನೆಮಾಗಾಗಿ ಆಕೆ ಕುದುರೆ ಸವಾರಿ ಸಹ ಕಲಿಯುತ್ತಿದ್ದಾರೆ. ಈ ಬಗ್ಗೆ ಸಹ ಆಕೆ ಹೇಳಿದ್ದು, ನಾನು ಕುದುರೆ ಸವಾರಿ ಕಲಿಯುತ್ತಿದ್ದೇನೆ, ಆದರೆ ಸಂಪೂರ್ಣವಾಗಲ್ಲ, ಇನ್ನೂ ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನೂ ಕನ್ನಡದ ಮತ್ತೋರ್ವ ಬ್ಯೂಟಿ ಟಾಲಿವುಡ್ ನಲ್ಲಿ ಸದ್ದು ಮಾಡಲಿದ್ದಾರೆ ಎನ್ನಬಹುದಾಗಿದೆ.

ಇನ್ನೂ ನಟಿ ಸಪ್ತಮಿಗೌಡ ಕೊನೆಯದಾಗಿ ಯುವ ಎಂಬ ಕನ್ನಡದ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಡಾ.ರಾಜ್ ಕುಮಾರ್‍ ಮನೆಯ ಕುಡಿ ಯುವರಾಜ್ ಕುಮಾರ್‍ ಹಿರೋ ಆಗಿ ನಟಿಸಿದ್ದಾರೆ. ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಪಡೆದುಕೊಂಡಿದೆ. ಇದೀಗ ತೆಲುಗು ಸಿನೆಮಾದಲ್ಲಿ ನಟಿಸಲಿದ್ದಾರೆ. ಅದರ ಜೊತೆಗೆ ಆಕೆಗೆ ಮತಷ್ಟು ಆಫರ್‍ ಗಳು ಹರಿದುಬರುತ್ತಿದೆ.

Most Popular

To Top