News

200 ಕೋಟಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಗುಜರಾತ್ ನ ಶ್ರೀಮಂತ ಜೈನ ದಂಪತಿ…..!

ಗುಜರಾತ್ ನ ದಂಪತಿ ತಮ್ಮ ನೂರಾರು ಕೋಟಿ ರೂಪಾಯಿ ಆಸ್ತಿ ಸೇರಿದಂತೆ ಎಲ್ಲವನ್ನೂ ತ್ಯಾಗ ಮಾಡಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ತಮ್ಮ 200 ಕೋಟಿ ದಾನ ಮಾಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಡೆದ ಸಮಾರಂಭದಲ್ಲಿ ಭಾವೇಶ್ ಭಂಡಾರಿ ಹಾಗೂ ಅವರ ಪತ್ನಿ ಎಲ್ಲಾ ಸಂಪತ್ತು ದಾನ ಮಾಡಿ ಈ ತಿಂಗಳ ಕೊನೆಯಲ್ಲಿ ನಡೆಯುವಂತಹ ಸಮಾರಂಭದಲ್ಲಿ ಸನ್ಯಾಸತ್ವ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಗುಜರಾತ್ ನ ಈ ದಂಪತಿಯ 19 ವರ್ಷದ ಮಗಳು ಹಾಗೂ 16 ವರ್ಷದ ಮಗ ಸಹ ಸನ್ಯಾಸತ್ವ ಸ್ವೀಕರಿದ್ದರಂತೆ. ಅದೇ ರೀತಿ ಪೋಷಕರು ಸಹ ಸನ್ಯಾಸತ್ವ ಸ್ವೀಕರಿಸಲಿದ್ದಾರೆ. ಹಿಮ್ಮತ್ ನಗರದಲ್ಲಿ ಕಟ್ಟಡ ನಿರ್ಮಾಣ ಉದ್ಯಮದಲ್ಲಿದ್ದ ಭಾವೇಶ್ ಭಂಡಾರಿ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದರು. ಇದೀಗ ತಮ್ಮ ಎಲ್ಲಾ ಸಂಪತ್ತನ್ನು ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಲಿದ್ದಾರಂತೆ. ಏ.22 ರಂದು ಸನ್ಯಾಸತ್ವ ಹಾಗೂ ಪ್ರತಿಜ್ಞೆ ತೆಗೆದುಕೊಂಡ ಬಲಿಕ ಎಲ್ಲಾ ಸಂಬಂಧಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಯಾವುದೇ ಭೌತಿಕ ವಸ್ತುಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬಾರದು. ಜೊತೆಗೆ ಬರಿಗಾಲಿನಲ್ಲಿ ನಡೆಯುತ್ತಾ ಭಿಕ್ಷೆ ಬೇಡುತ್ತಾ ಮಾತ್ರ ಮುಂದಿನ ಬದುಕನ್ನು ಕಳೆಯಬೇಕಾಗುತ್ತದೆ ಎನ್ನಲಾಗಿದೆ.

ಇನ್ನೂ ಸನ್ಯಾಸಿಗಳಾದ ಬಳಿಕ ಎರಡು ಬಿಳಿ ವಸ್ತ್ರಗಳನ್ನು ತಮ್ಮಲ್ಲಿ ಇಟ್ಟುಕೊಳ್ಳಲು ಅನುಮತಿಸಲಾಗುತ್ತದೆ. ಭಿಕ್ಷೆ ಬೇಡಲು ಒಂದು ಬಟ್ಟಲು ಹಾಗೂ ಬಿಳಿ ಪೊರಕೆ ಅಂದರೇ ಜೈನ ಸನ್ಯಾಸಿಗಳು ಅವರು ಕುಳಿತುಕೊಳ್ಳುವ ಮೊದಲು ಒಂದು ಪ್ರದೇಶದಿಂದ ಕೀಟಗಳನ್ನು ದೂರ ತಳ್ಳಲು ಬಳಕೆ ಮಾಡಲು ಉಪಯೋಗಿಸುವ ಪೊರಕೆ ಮಾತ್ರ ಇರುತ್ತದೆ. ಇದೀಗ ನೂರಾರು ಕೋಟಿ ಸಂಪತ್ತು ಹೊಂದಿರುವ ಕುಟುಂಬ ಎಲ್ಲ ದಾನ ಮಾಡಿ ಸನ್ಯಾಸ ಸ್ವೀಕಾರ ಮಾಡುತ್ತಿರುವುದು ಇಡೀ ದೇಶದ ಗಮನ ಸೆಳೆಯುತ್ತಿದೆ.

Most Popular

To Top