ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ, ಒಂದು ವರ್ಷದಿಂದ ಈ ಕೆಲಸ ನಡೆಯುತ್ತಿದೆಯಂತೆ…..!

ಕರ್ನಾಟಕದ ಉಡುಪಿಯಲ್ಲಿರುವ ನೇತ್ರಜ್ಯೋತಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮತಷ್ಟು ವಿಚಾರಗಳು ಹೊರಬರುತ್ತಿವೆ. ಇದೀಗ ಈ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳು ಒಂದು ವರ್ಷದಿಂದಲೂ ಖಾಸಗಿ ವಿಡಿಯೋ ಚಿತ್ರಿಕರಣ ನಡೆಯುತ್ತಿದೆ, ಈ ಬಗ್ಗೆ ದೂರು ನೀಡಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ ಮುಸ್ಲೀಂ ವಿದ್ಯಾರ್ಥಿನಿಯರ ವಿರುದ್ದ ರಾಜ್ಯ ಮಾತ್ರವಲ್ಲದೇ ದೇಶದಾದ್ಯಂತ ಭಾರಿ ಆಕ್ರೋಷ ವ್ಯಕ್ತವಾಗುತ್ತಿದೆ. ಇದೀಗ ಖಾಸಗಿ ಮಾದ್ಯಮಗಳಿಗೆ ಕೆಲ ವಿದ್ಯಾರ್ಥಿಗಳು ಸ್ಪೋಟಕ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಸುಮಾರು ಒಂದು ವರ್ಷದಿಂದ ಈ ಕೃತ್ಯ ನಡೆಯುತ್ತಿದ್ದರೂ ಸಹ ಆಡಳಿತ ಮಂಡಳಿ ಯಾವುದೆ ಕ್ರಮಕ್ಕೆ ಮುಂದಾಗಿಲ್ಲ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಸುಮಾರು ಒಂದು ವರ್ಷದಿಂದ ಕಾಲೇಜನ ಶೌಚಾಲಯಗಳಲ್ಲಿ ಮೊಬೈಲ್ ಇಟ್ಟು, ವಿಡಿಯೋ ಚಿತ್ರೀಕರಣ ಮಾಡಿ ಬಳಿಕ ಆ ಮೊಬೈಲ್ ಕಾರು ಹಾಗೂ ಬೈಕ್ ಗಳಲ್ಲಿ ಬರುವಂತಹ ಯುವಕರಿಗೆ ನೀಡುತ್ತಿದ್ದರು. ಈ ಬಗ್ಗೆ ಆಡಳಿತ ಮಂಡಳಿಗೆ ದೂರು ಸಹ ನೀಡಲಾಗಿತ್ತು ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿರುವುದಾಗಿ ತಿಳಿದುಬಂದಿದೆ.

ಇನ್ನೂ ಕಾಲೇಜಿನ ವಿದ್ಯಾರ್ಥಿನಿಯರು ಮೊಬೈಲ್ ಗಳನ್ನು ಬದಲಾವಣೆ ಮಾಡುತ್ತಿರುವ ದೃಶ್ಯಗಳು ಕಾಲೇಜಿನ ಸಿಸಿ ಕ್ಯಾಮೆರಾದಲ್ಲೂ ಸಹ ಸೆರೆಯಾಗಿತ್ತು. ಆದರೆ ಈ ಕೃತ್ಯವೆಸಗಿರುವ ವಿದ್ಯಾರ್ಥಿನಿಯರ ಮೇಲೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಳೆದ ಜು.18 ರಂದು ಪ್ರತಿಭಟನೆ ನಡೆಸಿದ್ದಕ್ಕಾಗಿ ವಿದ್ಯಾರ್ಥಿನಿಯರ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ. ಒಂದು ವೇಳೆ ನಾವು ಪ್ರತಿಭಟನೆ ಮಾಡದೇ ಇದ್ದರೇ ಆ ವಿಡಿಯೋಗಳು ವೈರಲ್ ಆಗುತ್ತಿತ್ತು. ಇನ್ನೂ ಈ ಕೃತ್ಯ ಖಂಡಿಸಿ ರಾಜ್ಯದ ಅನೇಕ ಕಡೆ ಉಗ್ರವಾದ ಪ್ರತಿಭಟನೆ ಸಹ ನಡೆದಿದೆ.

ಇನ್ನೂ ಉಡುಪಿಯಲ್ಲಿನ ವಿಡಿಯೋ ಚಿತ್ರೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಗೃಹಸಚಿವರು ಮಕ್ಕಳ ಆಟ ಎಂದು ಹೇಳಿದ್ದು ಭಾರಿ ಟೀಕೆಗೆ ಸಹ ಗುರಿಯಾಗಿತ್ತು. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಸ್ನೇಹಿತರ ಮಧ್ಯೆ ಅಂತಹ ಘಟನೆಗಳು ನಡೆಯುತ್ತವೆ, ಅದು ಆಗೆ ಮುಗಿಯುತ್ತದೆ ಎಂದು ಹೇಳಿದ್ದಾಗಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. ಅವರ ಹೇಳಿಕೆ ಖಂಡಿಸಿ ಸಹ ಪ್ರತಿಭಟನೆ ನಡೆದಿತ್ತು.