Film News

ರೌಡಿ ಹಿರೋ ವಿಜಯ್ ದೇವರಕೊಂಡ ಜೊತೆಗೆ ಸ್ಪೇಷಲ್ ಸೆಲ್ಫಿ ಹಂಚಿಕೊಂಡ ರಶ್ಮಿಕಾ, ವೈರಲ್ ಆದ ಸ್ಪೇಷಲ್ ಪೋಸ್ಟ್……!

ಸೌತ್ ಸಿನಿರಂಗದ ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ರವರು ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲೇ ಇರುತ್ತಾರೆ. ಕನ್ನಡ ಸಿನೆಮಾದ ಮೂಲಕ ಇದೀಗ ಸೌತ್ ಅಂಡ್ ನಾರ್ತ್‌ನಲ್ಲೂ ಭಾರಿ ಬೇಡಿಕೆಯನ್ನು ಪಡೆದುಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ವಿಜಯ್ ದೇವರಕೊಂಡ ಜೊತೆಗೆ ಸ್ಪೇಷಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಆ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಸುಮಾರು ದಿನಗಳಿಂದಲೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವೆ ಲವ್ ಟ್ರಾಕ್ ನಡೆಯುತ್ತಿದೆ ಎಂಬ ರೂಮರ್‍ ಕೇಳಿಬರುತ್ತಲೇ ಇದೆ. ರಶ್ಮಿಕಾ ಹಾಗೂ ವಿಜಯ್ ಕಾಂಬಿನೇಷನ್ ನಲ್ಲಿ ತೆರೆಕಂಡ ಡಿಯರ್‍ ಕಾಮ್ರೇಡ್ ಸಿನೆಮಾದ ಬಳಿಕ ಅವರಿಬ್ಬರ ನಡುವೆ ಪ್ರೇಮಾಂಕುರ ಶುರುವಾಯ್ತು ಎಂಬ ಸುದ್ದಿಗಳು ಪ್ರಚಲಿತದಲ್ಲಿದೆ. ಈಗಲೂ ಸಹ ಅವರ ಬಗ್ಗೆ ಗಾಸಿಫ್ ಗಳು ಹರಿದಾಡುತ್ತಲೇ ಇದೆ. ಈ ಬಗ್ಗೆ ವಿಜಯ್ ಹಾಗೂ ರಶ್ಮಿಕಾ ಸಹ ರೂಮರ್‍ ಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳುತ್ತಿದ್ದರೂ ಸಹ ರೂಮರ್‍ ಗಳು ಮಾತ್ರ ನಿಂತಿಲ್ಲ. ಅದರ ಜೊತೆಗೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮಾಡುವಂತಹ ಕೆಲವೊಂದು ಕೆಲಸಗಳು ಅವರ ಬಗ್ಗೆ ರೂಮರ್‍ ಹರಿದಾಡಲು ಮತಷ್ಟು ಬಲ ತಂದುಕೊಡುತ್ತಿರುತ್ತವೆ.

ಇನ್ನೂ ಡಿಯರ್‍ ಕಾಮ್ರೇಡ್ ಸಿನೆಮಾ ಬಿಡುಗಡೆಯಾಗಿ ನಾಲ್ಕು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಆ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ ಕಾಮ್ರೇಡ್ ಟೀಂ. ಈ ಹಾದಿಯಲ್ಲೇ ನಟಿ ರಶ್ಮಿಕಾ ಸಹ ಸ್ಪೇಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಸಿನೆಮಾವನ್ನು ನೆನಪಿಸಿಕೊಳ್ಳುತ್ತಾ ಸೋಷಿಯಲ್ ಮಿಡಿಯಾದಲ್ಲಿ ಸ್ಪೇಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಸಿನೆಮಾ ಬಿಡುಗಡೆಯಾಗಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಸಿನೆಮಾದಲ್ಲಿ ನಟಿಸಿದ ವಿಜಯ್ ದೇವರಕೊಂಡ, ನಿರ್ದೇಶಕ ಭರತ್ ಕಮ್ಮ ಜೊತೆಗಿನ ಸೆಲ್ಫಿಯನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ಆಕೆ ಸ್ಪೇಷಲ್ ನೋಟ್ ಸಹ ಹಾಕಿದ್ದಾರೆ. ನನ್ನ ಹೃದಯದಲ್ಲಿ ಇ ಸಿನೆಮಾ ಎಂದೆಂದಿಗೂ ಪ್ರತ್ಯೇಕವಾದ ಸ್ಥಾನ ಹೊಂದಿರುತ್ತದೆ. ಡಿಯರ್‍ ಕಾಮ್ರೇಡ್ ಗೆ ನಾಲ್ಕು ವರ್ಷ, ಥ್ಯಾಂಕ್ಯೂ ವಿಜಯ್, ಭರತ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಈ ಪೋಸ್ಟ್ ಇದೀಗ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದೆ.

ಈಗಾಗಲೇ ರಶ್ಮಿಕಾ ಹಾಗೂ ವಿಜಯ್ ನಡುವೆ ಅಫೈರ್‍ ನಡೆಯುತ್ತಿಎ ಎಂಬ ರೂಮರ್‍ ಗಳ ನಡುವೆ ರಶ್ಮಿಕಾ ಹಂಚಿಕೊಂಡ ಈ ಪೋಸ್ಟ್ ಮತಷ್ಟು ರೂಮರ್‍ ಹರಿದಾಡಲು ಕಾರಣವಾಗಿದೆ ಎನ್ನಲಾಗಿದದೆ. ಕೆಲವು ದಿನಗಳ ಹಿಂದೆಯಷ್ಟೆ ಅವರಿಬ್ಬರು ಮಾಲ್ಡೀವ್ಸ್ ಟ್ರಿಪ್ ಗೆ ಹಾರಿದ್ದು, ಜೊತೆಯಾಗಿ ಡಿನ್ನರ್‍ ಡೇಟ್ ಮಾಡಿದ್ದು ಈ ಎಲ್ಲಾ ಸನ್ನಿವೇಶಗಳ ಕಾರಣದಿಂದ ಅವರ ನಡುವೆ ಲವ್ ಟ್ರಾಕ್ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡುತ್ತಲೇ ಇದೆ.

Most Popular

To Top