Film News

ಪುಲ್ ಹ್ಯಾಪಿ ಮೂಡ್ ನಲ್ಲಿ ಸ್ಟಾರ್ ನಟಿ ಸಮಂತಾ, ವೆಕೇಷನ್ ನಲ್ಲಿ ಮಂಕಿ ಜೊತೆಗೆ ಸೆಲ್ಫಿ ಹಂಚಿಕೊಂಡ ಸ್ಯಾಮ್, ವೈರಲ್ ಆದ ಪೊಟೋ…!

ಸ್ಟಾರ್‍ ನಟಿ ಸಮಂತಾ ಕೆಲವು ದಿನಗಳ ಹಿಂದೆಯಷ್ಟೆ ತಮ್ಮ ಆರೋಗ್ಯದ ದೃಷ್ಟಿಯಿಂದ ತಾವು ಸಿನೆಮಾಗಳಿಗೆ ಬ್ರೇಕ್ ನೀಡುವುದಾಗಿ ತಿಳಿಸಿದ್ದರು. ಈ ಹಾದಿಯಲ್ಲೇ ಆಕೆ ಸದ್ಯ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಬಾಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿಹರಿಸುತ್ತಾ, ಪ್ರಾಕೃತಿಕ ಸೌಂದರ್ಯ ಸವಿಯುತ್ತಾ ಕೆಲವೊಂದು ಪೊಟೋಗಳನ್ನು ಅಭಿಮಾನಿಗಳಿಗಾಗಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಪುಲ್ ಹ್ಯಾಪಿಯಾಗಿ ಮಂಕಿ ಜೊತೆಗೆ ಸೆಲ್ಫಿ ತೆಗದುಕೊಂಡಿದ್ದು, ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟಿ ಸಮಂತಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಆಗಿಂದ್ದಾಗೆ ಇಂಟ್ರಸ್ಟಿಂಗ್ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ. ಸದ್ಯ ಒಂದು ವರ್ಷದ ಕಾಲ ಸಮಂತಾ ಸಿನೆಮಾಗಳಿಂದ ದೂರ ಇರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇತ್ತೀಚಿಗೆ ಆಕೆ ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಗಳಿಂದ ಹೊರಬರಲು ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ಸಮಯದಲ್ಲಿ ಆಕೆ ಸ್ನೇಹಿತರೊಂದಿಗೆ ಸಹ ಸಂತೋಷದಿಂದ ಕಳೆಯುತ್ತಿದ್ದಾರೆ. ಈ ಹಾದಿಯಲ್ಲೇ ದೇವಾಲಯಗಳು, ಮೆಡಿಟೇಷನ್ ಸೆಂಟರ್‍ ಗಳು, ವೇಕೇಷನ್ ಗಳು ಹೀಗೆ ಎಂಜಾಯ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಸದ್ಗುರು ಇಷಾ ಸೆಂಟರ್‍ ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಆಕೆ ಇಂಡೋನೇಷಿಯಾದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಇಂಡೋನೇಷಿಯಾದ ಬಾಲಿಯಲ್ಲಿ ಎಂಜಾಯ್ ಮಾಡುತ್ತಿರುವ ಸಮಂತಾ ತುಂಬಾ ಖುಷಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿಯಲ್ಲಿರುವ ಮಂಕಿ ಫಾರೆಸ್ಟ್ ನಲ್ಲಿ ಸ್ನೇಹಿತರೊಂದಿಗೆ ಪುಲ್ ಹ್ಯಾಪಿ ಮೋಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂಬಂಧ ಆಕೆ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಮುಖದಲ್ಲಿ ತುಂಬಿದ ಖುಷಿ ಎಲ್ಲರನ್ನೂ ಆಕರ್ಷಣೆ ಮಾಡಿದೆ. ಸಮಂತಾ ಸುಮಾರು ದಿನಗಳ ಬಳಿಕ ಅಷ್ಟೊಂದು ಖುಷಿಯಾಗಿರುವುದು ಕಂಡಿಲ್ಲ ಎಂದೇ ಹೇಳಬಹುದಾಗಿದೆ. ಇನ್ನೂ ಸಮಂತಾ ಪೊಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳೂ ಸಹ ಆಕೆಯ ಖುಷಿಯನ್ನು ಕಂಡು ಫಿದಾ ಆಗಿದ್ದಾರೆ. ಇನ್ನೂ ಕಾಮೆಂಟ್ ಗಳು, ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಸಮಂತಾ ಕೊನೆಯದಾಗಿ ಶಾಕುಂತಲಂ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಈ ಸಿನೆಮಾ ಆಲ್ ಟೈಂ ಡಿಜಾಸ್ಟರ್‍ ಆಗಿ ಉಳಿಯಿತು. ಸದ್ಯ ಆಕೆ ಎರಡು ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದ್ದಾರೆ. ಬಾಲಿವುಡ್ ನಟ ವರುಣ್ ಧಾವನ್ ಜೊತೆಗೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ಹಾಗೂ ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದಲ್ಲಿ ನಟಿಸಿದ್ದು, ಸೆಪ್ಟೆಂಬರ್‍ 1 ರಂದು ಖುಷಿ ಸಿನೆಮಾ ಬಿಡುಗಡೆಯಾಗಲಿದೆ.

Most Popular

To Top