ತಿರುಮಲ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಈ ವರ್ಷ ಎರಡು ಬಾರಿ ನಡೆಯಲಿದೆ ಬ್ರಹ್ಮೋತ್ಸವ ….!

Follow Us :

ದೇಶದಾದ್ಯಂತ ಅತೀ ಹೆಚ್ಚು ಭಕ್ತರನ್ನು ಹೊಂದಿರುವ ತಿರುಮಲದಲ್ಲಿ ನೆಲೆಸಿರುವ ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತಾದಿಗಳು ಬರುತ್ತಾರೆ. ಅತ್ಯಧಿಕ ಆದಾಯ ಬರುವಂತಹ ದೇವಾಲಯಗಳಲ್ಲಿ ಸಹ ಒಂದಾಗಿದೆ. ಇದೀಗ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ವರ್ಷ ಅಧಿಕಮಾಸದ ಹಿನ್ನೆಲೆಯಲ್ಲಿ ಎರಡು ಬಾರಿ ತಿರುಮಲದಲ್ಲಿ ಬ್ರಹ್ಮೋತ್ಸವ ನಡೆಯಲಿದ್ದು, ಭಕ್ತಾದಿಗಳು ಕಣ್ತುಂಬಿಕೊಳ್ಳಬಹುದಾಗಿದೆ.

ಅಧಿಕ ಮಾಸದ ಹಿನ್ನೆಲೆಯಲ್ಲಿ ತಿರುಮಲ ತಿಮ್ಮಪ್ಪನಿಗೆ ಈ ಬಾರಿ ಎರಡು ಸಾರಿ ಬ್ರಹ್ಮೋತ್ಸವ ನಡೆಯಲಿದೆ. ಸಾಲಕಟ್ಲ ಬ್ರಹ್ಮೋತ್ಸವ ಸೆ.18 ರಂದು ನಡೆಯಲಿದೆ. ಅಂದು ಧ್ವಜಾರೋಹಣ, ಸೆ.22 ರಂದು ಗರುಡವಾಹನ ಸೇವೆ, 23 ರಂದು ಸ್ವರ್ಣ ರಥ, 25 ರಂದು ಮಹಾರಥಂ, 26 ರಂದು ಚಕ್ರಸ್ನಾನ ಮತ್ತು ಧ್ವಜಾವರೋಹಣ ನಡೆಯಲಿದೆ. ಜೊತೆಗೆ ನವರಾತ್ರಿ ಬ್ರಹ್ಮೋತ್ಸವ ನಡೆಯಲಿದೆ. ನ.19 ರಂದು ಗರುಡವಾಹನ ಸೇವೆ, 22 ರಂದು ಸ್ವರ್ಣರಥ ಮತ್ತು 23 ರಂದು ಚಕ್ರಸ್ನಾನ ನಡೆಯಲಿದೆ. ಇನ್ನೂ ಈ ಉತ್ಸವದಲ್ಲಿ ಲಕ್ಷಾಂತರ ಜನರು ಸಹ ಭಾಗವಹಿಸುವ ನಿರೀಕ್ಷೆ ಸಹ ಇದೆ.

ಕೆಲವು ದಿನಗಳ ಹಿಂದೆಯಷ್ಟೆ ಪುಟಾಣಿ ಬಾಲಕಿಯೊಬ್ಬಳನ್ನು ಚಿರತೆಯೊಂದು ಕೊಂದುಹಾಕಿತ್ತು. ಈ ಕಾರಣದಿಂದ ಭಕ್ತರು ಕಾಲ್ನಡಿಗೆಯಲ್ಲಿ ಹೋಗಲು ಭಯಪಡುವಂತಾಗಿದೆ. ಇದರಿಂದ ಟಿಟಿಡಿ ಕಾಲ್ನಿಡಿಗೆಯಲ್ಲಿ ಹೋಗಲು ಕೆಲವೊಂದು ಹೊಸ ನಿಯಮಗಳನ್ನೂ ಸಹ ಜಾರಿ ಮಾಡಿದೆ. ಇನ್ನೂ ಟಿಟಿಡಿ ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಹೋಗಿ ಪರಿಶೀಲನೆ ಸಹ ನಡೆಸಿದ್ದಾರೆ. ತಿಮ್ಮಪ್ಪನ ದರ್ಶನಕ್ಕೆ ಕಾಲ್ನಡಿಗೆ ಮೂಲಕ ಹೋಗುವಂತಹ ಭಕ್ತರಿಗೆ ದೊಣ್ಣೆಯೊಂದನ್ನು ನೀಡಲು ಸಹ ಕ್ರಮ ಕೈಗೊಳ್ಳಲಾಗುತ್ತಿದೆ. ಮೆಟ್ಟಿಲುಗಳ ಬಳಿ ದೊಡ್ಡ ಬೇಲಿ ಸಹ ನಿರ್ಮಾಣ ಮಾಡುವ ಬಗ್ಗೆ ಸಹ ಚರ್ಚೆ ನಡೆಯುತ್ತಿದೆ.