News

ಮೋದಿ, ಯೋಗಿ, ಅಮಿತ್ ಶಾ ಹಾಗೂ ಮೋಹನ್ ಭಾಗವತ್ ಗೆ ರಾಖಿ ಕಳುಹಿಸಿದ ಸೀಮಾ ಹೈದರ್….!

ತಾನು ಪ್ರೀತಿಸಿದ ಗೆಳೆಯನಿಗಾಗಿ ಪಾಕಿಸ್ತಾನದಿಂದ ಬಂದ ಸೀಮಾ ಹೈದರ್‍ ಲವ್ ಸ್ಟೋರಿ ತಿಳಿದೇ ಇದೆ. ಆನ್ ಲೈನ್ ಗೇಂ ಮೂಲಕ ಪರಿಚಯವಾದ ಗೆಳೆಯನನ್ನು ವರಿಸಲು ಆಕೆ ಇಂಡಿಯಾಗೆ ಬಂದರು. ಅವರ ಲವ್ ಸ್ಟೋರಿ ದೇಶದಾದ್ಯಂತ ಜೋರಾಗಿಯೇ ಸದ್ದು ಮಾಡಿತ್ತು. ಇದೀಗ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್‍ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಆರ್‍.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಸಿಎಂ ಯೋಗಿ ರವರಿಗೆ ರವರಿಗೆ ರಾಖಿಗಳನ್ನು ಕಳುಹಿಸಿದ್ದಾರೆ.

 

ಆಗಸ್ಟ್ 30 ರಂದು ಸಹೋದರ ಸಹೋದರಿಯರ ಮಧುರ ಬಾಂಧ್ಯದ ಸಂಕೇತವಾದ ರಕ್ಷಾ ಬಂಧನ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಅಲಂಕಾರ ಮಾಡಿದ ಮಣಿಗಳು ದಾರಗಳು ಸೇರಿದಂತೆ ವಿವಿಧ ರೀತಿಯ ರಾಖಿಗಳನ್ನು ಸಹೋದರರಿಗೆ ಕಟ್ಟುವ ಮೂಲಕ ಸಹೋದರಿಯರು ವಿಶೇಷ ಹಬ್ಬವನ್ನು ಆಚರಿಸುತ್ತಾರೆ. ಈ ರಾಖಿ ಹಬ್ಬ ರಕ್ಷಣೆಯ ಸಂಕೇತವನ್ನು ಸಹ ಬಿಂಬಿಸುತ್ತದೆ. ಇದೀಗ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್‍ ಪ್ರಧಾನಿ ಮೋದಿ ಸೇರಿದಂತೆ ಹಲವರಿಗೆ ರಾಖಿ ಕಳುಹಿಸಿದ್ದು, ಆಕೆ ರಾಖಿಗಳನ್ನು ಪ್ಯಾಕ್ ಮಾಡುತ್ತಿರುವ ವಿಡಿಯೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಇನ್ನೂ ಈ ಬಗ್ಗೆ ಪೋಸ್ಟ್ ಮಾಡಿರುವ ಸೀಮಾ ಹೈದರ್‍ ಭಾರತ ದೇಶದ ಜವಾಬ್ದಾರಿಯನ್ನು ಹೊತ್ತಿರುವ ನನ್ನ ಆತ್ಮೀಯ ಸಹೋದದರಿಗೆ ಸರಿಯಾದ ಸಮಯಕ್ಕೆ ತಲುಪಿಸಲು ರಾಖಿಗಳನ್ನು ಮುಂಚಿತವಾಗಿಯೇ ಪೋಸ್ಟ್ ಮಾಡುತ್ತಿದ್ದೇನೆ. ಇದು ನನಗೆ ತುಂಬಾ ಸಂತೋಷವಾದ ವಿಚಾರವಾಗಿದೆ. ಜೈ ಶ್ರೀರಾಮ್, ಜೈ ಹಿಂದ್, ಹಿಂದೂಸ್ಥಾನ್ ಜಿಂದಾಬಾದ್ ಎಂದು ವಿಡಿಯೋದಲ್ಲಿ ಸೀಮಾ ಹೈದರ್‍ ಹೇಳಿದ್ದಾರೆ. ಜೊತೆಗೆ ಈ ವಿಡಿಯೋದಲ್ಲಿ ಸೀಮಾ ಹಾಗೂ ಆಕೆ ತಮ್ಮ ಮಕ್ಕಳೊಂದಿಗೆ ರಾಖಿಗಳನ್ನು ಪ್ಯಾಕ್ ಮಾಡುತ್ತಿರುವುದು, ಹಿನ್ನೆಲೆಯಲ್ಲಿ ಭಾಯ್ ಮೇರೆ ರಾಖಿ ಕೇ ಬಂಧನ್ ಕೋ ನಿಭಾನಾ ಎಂಬ ಹಿಂದಿ ಹಾಡು ಸಹ ಬರುತ್ತಿರುತ್ತದೆ.

ಇನ್ನೂ ಸೀಮಾ ಹೈದರ್‍ ಲವ್ ಸ್ಟೋರಿಯನ್ನು ಸಿನೆಮಾ ರೂಪದಲ್ಲಿ ಹೊರತರಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ. ಈಗಾಗಲೇ ಸಿನೆಮಾ ಕೆಲಸಗಳೂ ಸಹ ಶುರುವಾಗಿದೆ ಎಂದೂ ಸಹ ಹೇಳಲಾಗುತ್ತಿದೆ. ಸದ್ಯ ಸೀಮಾ ಹೈದರ್‍ ಪ್ರಧಾನಿ ಸೇರಿದಂತೆ ಹಲವರಿಗೆ ರಾಖಿ ಕಳುಹಿಸುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Most Popular

To Top