Film News

ಟಾಕ್ಸಿಕ್ ಸಿನೆಮಾದಲ್ಲಿ ಇಬ್ಬರು ಸ್ಟಾರ್ ನಟಿಯರು? ಯಶ್ ಸಿನೆಮಾದ ಮೇಲೆ ದುಪ್ಪಟ್ಟು ನಿರೀಕ್ಷೆ……!

ಕೆಜಿಎಫ್ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದ ಯಶ್ ರವರು ಕೆಜಿಎಫ್ ಸಿನೆಮಾದ ಬಳಿಕ ಯಾವುದೇ ಸಿನೆಮಾ ಬಂದಿಲ್ಲ. ಸದ್ಯ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಸಿನೆಮಾ ಭಾರಿ ಸುದ್ದಿ ಮಾಡುತ್ತಿದ್ದಾರೆ. ಈ ಸಿನೆಮಾವನ್ನು ಮಲಯಾಳಂ ನಿರ್ದೇಶಕಿ ಗೀತೂ ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಈ ಸಿನೆಮಾದ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದ್ದು, ಈ ಸಿನೆಮಾದಲ್ಲಿ ಇಬ್ಬರು ಸೌತ್ ಸಿನಿರಂಗದ ಸ್ಟಾರ್‍ ನಟಿಯರನ್ನು ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮಲಯಾಳಂ ನಿರ್ದೇಶಕಿ ಗೀತೂ ಮೋಹನ್ ದಾಸ್ ಕೆಜಿಎಫ್ ಸ್ಟಾರ್‍ ಯಶ್ ಜೊತೆಗೆ ಟಾಕ್ಸಿಕ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನೆಮಾದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಶೂಟಿಂಗ್ ನಿಂದ ಕೆಲವೊಂದು ಪೊಟೋಗಳು ಲೀಕ್ ಆಗಿ‌ತ್ತು. ಕೆಲವು ದಿನಗಳ ಹಿಂದೆಯಷ್ಟೆ ಟಾಕ್ಸಿಕ್ ಸಿನೆಮಾದ ಟೈಟಲ್ ಟೀಸರ್‍ ಸಹ ಬಿಡುಗಡೆಯಾಗಿದ್ದು, ಸಿನೆಮಾದ ಮೇಲೆ ಭಾರಿ ನೀರಿಕ್ಷೆ ಹುಟ್ಟಿಸಿತ್ತು. ಇದಿಗ ಈ ಸಿನೆಮಾದಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಈಗಾಗಲೇ ಟಾಕ್ಸಿಕ್ ಸಿನೆಮಾದಲ್ಲಿ ಬಾಲಿವುಡ್ ಸ್ಟಾರ್‍ ನಟಿ ಕರೀನಾ ಕಪೂರ್‍ ನಟಿಸುತ್ತಿದ್ದಾರೆ. ಈ ಕುರಿತು ಕರೀನಾ ಕಪೂರ್‍ ಸಹ ದಕ್ಷಿಣ ಭಾರತದ ಸಿನೆಮಾಗಳಲ್ಲಿ ನಟಿಸುವುದಾಗಿ ಹೇಳಿಕೊಂಡಿದ್ದರು. ಆ ಸಿನೆಮಾ ಟಾಕ್ಸಿಕ್ ಎಂದು ಹೇಳಲಾಗುತ್ತಿದೆ. ಇದೀಗ ಮತ್ತೊರ್ವ ನಟಿ ಟಾಕ್ಸಿಕ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

ಬಹುನಿರೀಕ್ಷಿತ ಟಾಕ್ಸಿಕ್ ಸಿನೆಮಾದಲ್ಲಿ ದಕ್ಷಿಣದ ಸ್ಟಾರ್‍ ನಟಿಯೊಬ್ಬರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದಲ್ಲಿ ಸ್ಟಾರ್‍ ನಟಿ ಶ್ರುತಿ ಹಾಸನ್ ನಟಿಸಲಿದ್ದಾರೆ ಎಂಭ ಸುದ್ದಿ ಭಾರಿ ವೈರಲ್ ಆಗುತ್ತಿದೆ. ಶ್ರುತಿ ಹಾಸನ್ ಟಾಕ್ಸಿಕ್ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಟಾಕ್ಸಿಕ್ ಸಿನೆಮಾದಲ್ಲಿ ಇಬ್ಬರು ಸ್ಟಾರ್‍ ನಟಿಯರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಕಳೆದ ವರ್ಷ ಟಾಕ್ಸಿಕ್ ಸಿನೆಮಾದ ಟೀಸರ್‍ ಕಳೆದ ಡಿಸೆಂಬರ್‍ ಮಾಹೆಯಲ್ಲಿ ರಿಲೀಸ್ ಆಗಿತ್ತು. ಟೀಸರ್‍ ನಲ್ಲಿರುವ ಧ್ವನಿ ಶ್ರುತಿ ಹಾಸನ್ ಧ್ವನಿ ಎಂದೇ ಹೇಳಲಾಗುತ್ತಿದೆ. ಈ ಕಾರಣದಿಂದಲೇ ಶ್ರುತಿ ಹಾಸನ್ ಈ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಎಂಬ ರೂಮರ್‍ ಕೇಳಿಬರುತ್ತಿದೆ.

ಇನ್ನೂ ಈ ಸಿನೆಮಾವನ್ನು ಮಲಯಾಳಂ ನಟಿ ಕಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದು, ಈ ಸಿನೆಮಾ ವಿಶ್ವದ ಸಿನಿ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾಗಾಗಿ ನಾಲ್ಕು ವರ್ಷಗಳ ಕಾಲ ಚಿತ್ರತಂಡ ಕಷ್ಟಪಟ್ಟಿದೆ ಎನ್ನಲಾಗಿದೆ. ಈ ಸಿನೆಮಾ ಏಪ್ರಿಲ್ 10, 2025 ರಂದು ಬಿಡುಗಡೆಯಾಗಲಿದ್ದು, ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ.

Most Popular

To Top