ಪುಷ್ಪಾ-2 ಸಿನೆಮಾದಿಂದ ರಶ್ಮಿಕಾ ಲುಕ್ ಲೀಕ್, ಕೆಂಪು ಸೀರೆ, ಮೈತುಂಬಾ ಒಡವೆ, ತಲೆಯಲ್ಲಿ ಕನಕಾಂಬರ ಹೂ ಮುಡಿದ ರಶ್….!

ತೆಲುಗು ಸಿನಿರಂಗದಲ್ಲಿ ಭಾರಿ ನಿರೀಕ್ಷೆಯಿಂದ ತೆರೆಗೆ ಬಂದು ಭಾರಿ ಸಕ್ಸಸ್ ಕಂಡುಕೊಂಡ ಸಿನೆಮಾಗಳಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನೆಮಾ ಒಂದಾಗಿದೆ. ಪ್ಯಾನ್ ಇಂಡಿಯಾ ಸಿನೆಮಾ ಆಗಿ ತೆರೆಗೆ ಬಂದ ಪುಷ್ಪಾ ಕೇವಲ ತೆಲುಗಿನಲ್ಲಿ ಮಾತ್ರವಲ್ಲದೇ ಎಲ್ಲಾ ಭಾಷೆಗಳಲ್ಲೂ ಭಾರಿ ಸಕ್ಸಸ್ ಕಂಡಿತ್ತು. ಸದ್ಯ ಪುಷ್ಪಾ-2 ಸಿನೆಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿದೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದ್ದು, ಪುಷ್ಪಾ-2 ಸಿನೆಮಾದಲ್ಲಿನ ರಶ್ಮಿಕಾ ಲುಕ್ ಲೀಕ್ ಆಗಿದೆ. ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

2024ರಲ್ಲಿ ತೆರೆಕಾಣಲಿರುವ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಪುಷ್ಪಾ-2 ಸಹ ಒಂದಾಗಿದೆ. ಈಗಾಗಲೇ ಈ ಸಿನೆಮಾದ ಒಂದೊಂದು ಅಪ್ಡೇಟ್ ಸಿನೆಮಾದ ಮೇಲೆ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಅಭಿನಯ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದೆ. ಈ ಸಿನೆಮಾದ ಮೂಲಕವೇ ರಶ್ಮಿಕಾ ಸಹ ಪ್ಯಾನ್ ಇಂಡಿಯಾ ಸ್ಟಾರ್‍ ಆದರು ಎಂದೇ ಹೇಳಬಹುದು. ಈ ಸಿನೆಮಾದಲ್ಲಿ ರಶ್ಮಿಕಾ ಶ್ರೀವಲ್ಲಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಪುಷ್ಪಾ-2 ಸಿನೆಮಾ ಶೂಟಿಂಗ್ ಆರಂಭವಾದಾಗಿನಿಂದ ಒಂದಲ್ಲ ಒಂದು ರೀತಿಯ ಸುದ್ದಿಗಳು ಕೇಳಿಬರುತ್ತಲೇ ಇದೆ. ಇದೀಗ ರಶ್ಮಿಕಾ ಮಂದಣ್ಣ ಲುಕ್ ಒಂದು ಲೀಕ್ ಆಗಿದೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಪುಷ್ಪಾ-2 ಸಿನೆಮಾ ಘೋಷಣೆಯಾದಾಗಿನಿಂದ ರಶ್ಮಿಕಾ ಲುಕ್ ಹೇಗಿರುತ್ತದೆ ಎಂದು ತಿಳಿದಿರಲಿಲ್ಲ. ಇದೀಗ ಪುಷ್ಪಾ-2 ವಿಡಿಯೋ ಕ್ಲಿಪ್ ಒಂದು ಲೀಕ್ ಆಗಿದೆ. ಈ ವಿಡಿಯೋದಲ್ಲಿ ರಶ್ಮಿಕಾ ಲೇಟೆಸ್ಟ್ ಲುಕ್ ರಿವೀಲ್ ಆಗಿದೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಶ್ಮಿಕಾ ಲುಕ್ ರಿವೀಲ್ ಆಗಿದೆ. ಶ್ರೀವಲ್ಲಿ ಸಿಗ್ನೇಷರ್‍ ಲುಕ್ ಎಂದೇ ಕರೆಯಲಾಗುವ ರೆಡ್ ಕಲರ್‍ ಟ್ರೆಡಿಷನಲ್ ಸೀರೆಯಲ್ಲಿ ಮೈತುಂಬಾ ಆಭರಣಗಳನ್ನು ಹಾಕಿಕೊಂಡಿದ್ದಾರೆ. ಜೊತೆಗೆ ತಲೆ ತುಂಬಾ ಕನಕಾಂಬರ ಹೂವು ಮುಡಿದುಕೊಂಡು ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಶ್ರೀವಲ್ಲಿಯ ಈ ಲೇಟೆಸ್ಟ್ ಲುಕ್ ಕಂಡ ರಶ್ ಫ್ಯಾನ್ಸ್ ಪುಲ್ ಖುಷಿಯಾಗಿದ್ದಾರೆ. ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ವಿಡಿಯೋ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಪುಷ್ಪಾ-2 ಸಿನೆಮಾ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟಿದೆ. ಈ ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ಸಹ ಒಂದಿರಲಿದ್ದು, ಈ ಹಾಡಿಗಾಗಿ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ರವರನ್ನು ಕರೆತರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಬಂದಿಲ್ಲ. ಇದೀಗ ಶ್ರೀವಲ್ಲಿ ಲುಕ್ಸ್ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.