News

ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್, ದರ್ಶನಕ್ಕೆ ಕ್ಯೂ ನಿಲ್ಲುವ ಅಗತ್ಯವಿಲ್ಲವಂತೆ, ಹೊಸ ಪ್ಲಾನ್ ಮಾಡಿದ ಟಿಟಿಡಿ….!

ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುತ್ತಾರೆ. ತಿಮ್ಮಪ್ಪನ ದರ್ಶನಕ್ಕೆ ತೆರಳುವಂತಹ ಭಕ್ತರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಗಿದೆ. ಈ ಕಾಯುವಿಕೆಯನ್ನು ತಪ್ಪಿಸಲು ಟಿಟಿಡಿ ಹೊಸ ಪ್ಲಾನ್ ಜಾರಿಗೆ ತರಲು ಸಿದ್ದತೆಗಳನ್ನು ನಡೆಸಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಟಿಟಿಡಿ ಮಾಡಿದ ಆ ಪ್ಲಾನ್ ಆದರೂ ಏನು ಎಂಬ ವಿಚಾರಕ್ಕೆ ಬಂದರೇ,

ಟಿಟಿಡಿ ಸದಾ ಒಂದಲ್ಲ ಒಂದು ರೀತಿಯ ಹೊಸ ತಂತ್ರಜ್ಞಾನವನ್ನು ಜಾರಿ ಮಾಡುತ್ತಿರುತ್ತದೆ. ವೆಬ್ ಸೈಟ್, ವರ್ಚುವಲ್ ಸೇವೆ ಹಾಗೂ ಯುಪಿಐ ಪಾವತಿ ವ್ಯವಸ್ಥೆಗಳನ್ನು ಸಹ ಜಾರಿಗೆ ತಂದಿದೆ. ಈ ಹಾದಿಯಲ್ಲೇ ಕಳೆದ ಜುಲೈ ಮಾಹೆಯಲ್ಲಿ ಪೇ ಲಿಂಕ್ ಎಸ್.ಎಂ.ಎಸ್  ವ್ಯವಸ್ಥೆಯನ್ನು ಸಹ ಜಾರಿಗೆ ತಂದಿದೆ. ಅದನ್ನು ಪ್ರಾಯೋಗಿಕವಾಗಿ ಸೆಂಟರ್‍ ರಿಸೆಪ್ಷನ್ ಆಫೀಸ್ ನಲ್ಲಿ ಲಕ್ಕಿ ಡಿಪ್ ಮೂಲಕ ಪಡೆದ ಸೇವಾ ಟಿಕೆಟ್ ಗಳನ್ನು ಪಡೆದಂತಹ ಭಕ್ತರಿಗೆ ಹೊಸ ವ್ಯವಸ್ಥೆಯಂತೆ ಎಸ್.ಎಂ.ಎಸ್ ಮೂಲಕ ಪಾವತಿ ಲಿಂಕ್ ಕಳುಹಿಸಲಾಗುತ್ತದೆ. ಲಿಂಕ್ ಪಡೆದುಕೊಂಡ ಭಕ್ತರು ಯುಪಿಐ ಅಥವಾ ಇತರೆ ಮಾರ್ಗದ ಮೂಲಕ ಆನ್ ಲೈನ್ ನಲ್ಲಿ ಹಣ ಪಾವತಿ ಮಾಡಿ ಸೇವಾ ಟಿಕೆಟ್ ಪ್ರಿಂಟ್ ತೆಗೆದುಕೊಳ್ಳಬಹುದಾಗಿದೆ.

ಇದೇ ಮಾದರಿಯಲ್ಲಿ ಟಿಟಿಡಿ ಮತಷ್ಟು ಕೇಂದ್ರಗಳಲ್ಲಿ ಜಾರಿಗೆ ತರಲು ಯೋಜನೆ ಮಾಡಿದೆಯಂತೆ. ಈ ವ್ಯವಸ್ಥೆ ಜಾರಿಯಾದರೇ ಭಕ್ತರು ನೇರವಾಗಿ ಕೌಂಟರ್‍ ಗೆ ಬಂದು ಟಿಕೆಟ್ ಖರೀದಿ ಮಾಡುವಂತಹುದು ತಪ್ಪುತ್ತದೆ. ಈ ಹಾದಿಯಲ್ಲೇ ಟಿಟಿಡಿ ತಾಂತ್ರಿಕ ತಂಡ ವಿಐಪಿ ಬ್ರೇಕ್ ದರ್ಶನ ಸೇರಿದಂತೆ ವಿವಿಧ ಸೇವೆಗಳು ಹಾಗೂ ಸಿ.ಆರ್‍.ಒ ಅಡಿಯಲ್ಲಿ ಕೊಠಡಿಗಳ ಹಂಚಿಕೆಯನ್ನು ಸಹ ಅನ್ವಯಿಸಲು ಪ್ಲಾನ್ ಮಾಡುತ್ತಿದೆ. ಪೇಲಿಂಕ್ ವ್ಯವಸ್ಥೆಯ ಜಾರಿಯಿಂದ ಭಕ್ತರಿಗೆ ಅನುಕೂಲವಾಗಲಿದೆ. ಭಕ್ತರಿಗೆ ಪೇ ಲಿಂಕ್ ಬಂದ ಬಳಿಕ ಅದನ್ನು ಕ್ಲಿಕ್ ಮಾಡಿ ಹಣ ಪಾವತಿ ಮಾಡಬಹುದಾಗಿದೆ. ಹಣ ಪಾವತಿಯಾದ ಬಳಿಕ ಆನ್ ಲೈನ್ ನಲ್ಲಿ ಟಿಕೆಟ್ ಪ್ರಿಂಟ್ ಮಾಡಿಕೊಂಡು ನೇರವಾಗಿ ದರ್ಶನಕ್ಕೆ ಹೋಗಬಹುದಾಗಿದೆ. ಇದೇ ವಿಧಾನವನ್ನು ಕೊಠಡಿ ಹಂಚಿಕೆ ಮಾಡಲು ಸಹ ಅನುಸರಿಸಲಾಗುತ್ತದೆ ಎನ್ನಲಾಗಿದೆ.

Most Popular

To Top