ನಟ ಗುರ್ಮಿತ್ ಚೌದರಿಯನ್ನು ಕೊಂಡಾಡಿದ ನೆಟ್ಟಿಗರು, ರಸ್ತೆಯಲ್ಲಿ ಕುಸಿದು ಬಿದ್ದ ವ್ಯಕ್ತಿಯ ಪ್ರಾಣ ಕಾಪಾಡಿದ ನಟ…!

Follow Us :

ಸಿನಿರಂಗದ ಸೆಲೆಬ್ರೆಟಿಗಳು ಏನಾದರು ತಪ್ಪು ಮಾಡಿದಾಗ ದೊಡ್ಡ ಮಟ್ಟದಲ್ಲೇ ವಿಮರ್ಶೆ ಮಾಡುತ್ತಾರೆ. ಅದೇ ಮಾದರಿಯಲ್ಲಿ ಒಳ್ಳೆಯ ಕೆಲಸ ಮಾಡಿದರೇ ನೆಟ್ಟಿಗರು ಅವರನ್ನು ದೊಡ್ಡ ಮಟ್ಟದಲ್ಲೇ ಪ್ರಶಂಸೆ ಮಾಡುತ್ತಾರೆ. ಇದೀಗ ಖ್ಯಾತ ನಟ ಗುರ್ಮಿತ್ ಚೌದರಿ ನಡು ರಸ್ತೆಯಲ್ಲಿ ಬಿದ್ದಂತಹ ವ್ಯಕ್ತಿಯ ಪ್ರಾಣವನ್ನು ಕಾಪಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರೀಲ್ ಹಿರೋ ಇದೀಗ ರೀಯಲ್ ಹಿರೋ ಎಂದು ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ.

ಬಾಲಿವುಡ್ ನ ಖ್ಯಾತ ನಟ, ಕಿರುತೆರೆ ಸ್ಟಾರ್‍, ಟೆಲಿವಿಜನ್ ಆಂಕರ್‍ ಆಗಿ ಫೇಂ ಪಡೆದುಕೊಂಡ ಗುರ್ಮಿತ್ ಚೌದರಿ ಒಳ್ಳೆಯ ಮನಸ್ಸನ್ನು ಪ್ರದರ್ಶನ ಮಾಡಿದ್ದಾರೆ. ಪ್ರಾಣಾಪಯ ಸ್ಥಿತಿಯಲ್ಲಿರುವ ಓರ್ವ ವ್ಯಕ್ತಿಗೆ ಸಿಪಿಆರ್‍ ಮಾಡಿ ಆಸ್ಪತ್ರೆಗೆ ಕಳುಹಿಸಲು ಸಹಾಯ ಮಾಡಿದ್ದಾರೆ. ಅದಿ ತನ್ನ ಶೂಟಿಂಗ್ ಗೆ ಸಂಬಂಧಿಸಿದ ವ್ಯಕ್ತಿಯೋ ಅಥವಾ ಬೇರೆ ವ್ಯಕ್ತಿನಾ ಎಂಬುದು ತಿಳಿಯದು. ಬೀದಿಯಲ್ಲಿ ಹೋಗುತ್ತಿದ್ದ ಆ ವ್ಯಕ್ತಿ ಏಕಾಏಕಿ ಕುಸಿದು ಬಿದಿದ್ದಾನೆ. ಕೂಡಲೇ ಅವನ ಬಳಿ ತೆರಳಿದ ಗುರ್ಮಿತ್ ಸಿಪಿಆರ್‍ ಮಾಡಿದ್ದಾರೆ. ಅಂಬ್ಯುಲೆನ್ಸ್ ಬರುವವರೆಗೂ ಕಾದು, ಸ್ವತಃ ಆತನೇ ಅಂಬ್ಯುಲೆನ್ಸ್ ಗೆ ಹತ್ತಿಸಿದ್ದಾರೆ. ಇನ್ನೂ ಈ ಸಂಬಂಧ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಮುಂಬೈನ ರಸ್ತೆಯಲ್ಲಿ ಹೋಗುತ್ತಿದ್ದ ಓರ್ವ ವ್ಯಕ್ತಿ ಇದ್ದಕ್ಕಿಂದ್ದಂತೆ ಕುಸಿದು ಬಿದ್ದಿದ್ದಾರೆ. ಅಲ್ಲಿದ್ದ ಕೆಲವರು ಆತನನ್ನು ಮೇಲೆತ್ತಲು ಪ್ರಯತ್ನಗಳನ್ನು ಮಾಡಿದ್ದಾರೆ. ಅದೇ ಸಮಯದಲ್ಲಿ ಗುರ್ಮಿತ್ ಸಹ ಹೋಗುತ್ತಿದ್ದು, ಅದನ್ನು ನೋಡಿದ ಆತ ಕೂಡಲೇ ಆತನ ಬಳಿ ತೆರಳಿ ಸಿಪಿಆರ್‍ ಮಾಡಿದ್ದಾರೆ. ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದು, ಅನೇಕರು ಆತನ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಿಜವಾದ ರಿಯಲ್ ಹಿರೋ ಎಂದು ಕೊಂಡಾಡುತ್ತಿದ್ದಾರೆ. ಇನ್ನೂ ಗುರ್ಮಿತ್ ಚೌದರಿ ರಾಮಾಯಣ್ ಸೀರಿಯಲ್ ಮೂಲಕ ತುಂಬಾನೆ ಪಾಪ್ಯುಲರ್‍ ಆದರು. ಈ ಸೀರಿಯಲ್ ನಲ್ಲಿ ಗುರ್ಮಿತ್ ತುಂಬಾ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಕೆರಿಯರ್‍ ಬಗ್ಗೆ ಸಹ ಅಪ್ಡೇಟ್ ನೀಡುತ್ತಿರುತ್ತಾರೆ.