News

ಟಿಟಿಡಿಯಿಂದ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಫ್ರೀ ದರ್ಶನ, ಫ್ರೀ ಬಸ್, ಫ್ರೀ ಊಟ……!

ಕೋಟ್ಯಂತರ ಜನತೆಯ ಆರಾಧ್ಯ ದೈವ, ಪ್ರತಿನಿತ್ಯ ಲಕ್ಷಾಂತರ ಮಂದಿಗೆ ದರ್ಶನ ಕೊಡುವ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಾಲಯದಲ್ಲಿ ಕೆಲವೇ ದಿನಗಳಲ್ಲಿ ಬ್ರಹ್ಮೋರಥೋತ್ಸವ ನಡೆಯಲಿದೆ. ಈಗಾಗಲೇ ಎಲ್ಲಾ ಸಿದ್ದತೆಗಳೂ ಭರದಿಂದ ಸಾಗುತ್ತಿವೆ. ಅಧಿಕ ಮಾಸ ಹಿನ್ನೆಲೆಯಲ್ಲಿ ಈ ಬಾರಿ ಎರಡು ಭಾರಿ ಬ್ರಹ್ಮೋತ್ಸವ ನಡೆಯಲಿದೆ. ಈ ಸಂಬಂಧ ಟಿಟಿಡಿ ಅಧಿಕಾರಿಗಳು ಸಭೆಗಳನ್ನು ಸಹ ನಡೆಸಿದ್ದಾರೆ.

ಇನ್ನೂ ಈ ಕುರಿತು ಟಿಟಿಡಿ ಇ.ಒ ಧರ್ಮರೆಡ್ಡಿ ಪ್ರಮುಖ ಪರಿಶೀಲನಾ ಸಭೆ ನಡೆಸಿದ್ದಾರೆ. ಈ ಬಾರಿ ಎರಡು ಬ್ರಹ್ಮೋತ್ಸವಗಳು ನಡೆಯಲಿದೆ. ಸೆಪ್ಟೆಂಬರ್‍ ಹಾಗೂ ಅಕ್ಟೋಬರ್‍ ಮಾಹೆಗಳಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಬ್ರಹ್ಮೋತ್ಸವದಂದು ದಿನಕ್ಕೆ ಸಾವಿರ ಮಂದಿಗೆ ಉಚಿತ ದರ್ಶನ ನೀಡಲಾಗುತ್ತದೆ. ಅವರಿಗೆ ಉಚಿತ ಸಾರಿಗೆ, ಊಟ, ವಸತಿ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತದೆ. ಇನ್ನೂ ಬ್ರಹ್ಮರಥೋತ್ಸವದ ವೇಳೆ ತಿಮ್ಮಪ್ಪನ ದರ್ಶನಕ್ಕೆ ಸಾಮಾನ್ಯ ಭಕ್ತರಿಗೆ ಮಾತ್ರ ಆದ್ಯೆತೆ ನೀಡಲಾಗುತ್ತದೆ. ಯಾವುದೇ ಶೀಫಾರಸ್ಸು ಪತ್ರಗಳನ್ನು ಸ್ವೀಕಾರ ಮಾಡುವುದಿಲ್ಲ. ಭಕ್ತರ ಅನುಕೂಲಕ್ಕಾಗಿ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನೂ ಇದೇ ವೇಳೆ ಮುಖ್ಯಮಂತ್ರಿ ಜಗನ್ ರವರ ಕೈಯಲ್ಲಿ ಶ್ರೀನಿವಾಸ ಸೇತು. ಎಸ್.ವಿ.ಕಲಾ ಕಾಲೇಜು ಹಾಸ್ಟಲ್ ಭವನ, ತಿರುಮಲದಲ್ಲಿ ವಿಶ್ರಾಂತಿ ಗೃಹಗಳನ್ನು ಸಹ ಉದ್ಘಾಟಿಸಲು ಪ್ಲಾನ್ ಮಾಡಲಾಗಿದೆ. ಶ್ರೀವಾರಿ ಟ್ರಸ್ಟ್ ನಿಧಿಯಿಂದ ದೇವಾಲಯಗಳನ್ನು ನಿರ್ಮಿಸಿದ ಎಸ್.ಸಿ, ಎಸ್.ಟಿ ಹಾಗೂ ಬಿಸಿ ಭಕ್ತರಿಗೆ ಬ್ರಹ್ಮೋತ್ಸವ ದರ್ಶನ ನೀಡಲಾಗುತ್ತದೆ. ಸಾಮಾನ್ಯ ಭಕ್ತರಿಗೆ ಅನ್ನಸಂತರ್ಪಣೆ ಮಾಡಿ, ಸಂತೃಪ್ಟವಾಗುವಂತೆ ವಾಹನ ಸೇವೆಯ ಜೊತೆಗೆ ಮೂಲ ಮೂರ್ತಿಯ ದರ್ಶನದ ಸೌಲಭ್ಯ ಒದಗಿಸಲಾಗುತ್ತದೆ. ಇನ್ನೂ ಇತರೆ ವಿಶೇಷ ದರ್ಶಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಒಂಬತ್ತು ದಿನಗಳ ಕಾಲ ನಡೆಯುವಂತಹ ಈ ಬ್ರಹ್ಮೋತ್ಸವ 9 ದಿನಗಳ ಕಾಲ ನಡೆಯಲಿದ್ದು, 9 ರಾಜ್ಯಗಳ ಕಲಾವಿದರನ್ನು ಆಹ್ವಾನಿಸಿ ಕಲಾ ಪ್ರದರ್ಶನ ಏರ್ಪಡಿಸಲಾಗುತ್ತದೆ. ಬ್ರಹ್ಮೋತ್ಸವ ಸಾಗುವ ವಾಹನಗಳ ಮುಂದೆ ಕಲಾತಂಡಗಳ ಜೊತೆಗೆ ವಿಶೇಷ ಅಲಂಕಾರದಲ್ಲಿ ಆನೆ, ಕುದುರೆ ಹಾಗೂ ಗೂಳಿಗಳೂ ಸಹ ಪಾಲ್ಗೊಳ್ಳುತ್ತಿವೆ. ಅದಕ್ಕಾಗಿ ಕೇರಳದಿಂದ ತಜ್ಞರನ್ನು ಸಹ ಕರೆತರಲಾಗುತ್ತಿದೆಯಂತೆ. ಸಾಕಷ್ಟು ಭದ್ರತೆಯೊಂದಿಗೆ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Most Popular

To Top