Film News

ಕ್ಯೂಟ್ ನೆಸ್ ಓವರ್ ಲೋಡೆಡ್, ಆರೆಂಜ್ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ…..!

ಸೌತ್ ಅಂಡ್ ನಾರ್ತ್ ಸಿನಿರಂಗದಲ್ಲಿ ಬಹುಬೇಡಿಕೆ ಹೊಂದಿರುವ ನಟಿಯಾದ ರಶ್ಮಿಕಾ ಮಂದಣ್ಣ ಸದಾ ಸೋಷಿಯಲ್ ಮಿಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಮೊದಲನೇ ಸಿನೆಮಾದ ಮೂಲಕ ಭಾರಿ ಫೇಂ ಪಡೆದುಕೊಂಡ ರಶ್ಮಿಕಾ ಇದೀಗ ಸ್ಟಾರ್‍ ನಟರ ಜೊತೆಗೆ ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ತನ್ನ ಅಸಿಸ್ಟೆಂಟ್ ಮದುವೆಗೆ ಹಾಜರಾಗಿದ್ದು, ಈ ವೇಳೆ ಆಕೆ ಆರೆಂಜ್ ಕಲರ್‍ ಸೀರೆಯಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದು, ಪೊಟೋಗಳು ವೈರಲ್ ಆಗಿದೆ.

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅತ್ಯಂತ ವೇಗವಾಗಿ ಸ್ಟಾರ್‍ ಆದ ನಟಿಯಾಗಿದ್ದಾರೆ. ಸದ್ಯ ಆಕೆ ಎರಡು ಪ್ಯಾನ್ ಇಂಡಿಯಾ ಸಿನೆಮಾ ಹಾಗೂ ಒಂದು ಲೇಡಿ ಓರಿಯೆಂಟೆಡ್ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ನ್ಯಾಷನಲ್ ಕ್ರಷ್ ಆಗಿ ಫೇಂ ಪಡೆದುಕೊಂಡ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಪಡೆದುಕೊಂಡರು. ಜೊತೆಗೆ ಬಾಲಿವುಡ್ ನಲ್ಲೂ ಸಹ ಅವಕಾಶಗನ್ನು ಪಡೆದುಕೊಂಡರು. ಬಾಲಿವುಡ್ ಗೆ ಹಾರಿದ ಬಳಿಕ ಆಕೆ ಮತಷ್ಟು ಹಾಟ್ ಆಗುತ್ತಿದ್ದಾರೆ. ದಿನೇ ದಿನೇ ಬೋಲ್ಡ್ ಅವತಾರ ತಾಳುತ್ತಿದ್ದಾರೆ. ಇನ್ನೂ ತನ್ನ ಪರ್ಸನಲ್ ಅಸಿಸ್ಟೆಂಟ್ ಸಾಯಿ ಮದುವೆಯಲ್ಲಿ ರಶ್ಮಿಕಾ ಹಾಜರಾಗಿದ್ದಾರೆ. ಈ ವೇಳೆ ರಶ್ಮಿಕಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ನಟಿ ರಶ್ಮಿಕಾ ತನ್ನ ಪರ್ಸನಲ್ ಅಸಿಸ್ಟೆಂಟ್ ಸಾಯಿ ಎಂಬುವವರ ಮದುವೆಗೆ ಹಾಜರಾಗಿದ್ದಾರೆ. ಆರೆಂಜ್ ಕಲರ್‍ ಸೀರೆಯಲ್ಲಿ ಕಲರ್‍ ಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಆಕೆ ಭಾಗಿಯಾಗಿದ್ದಾರೆ. ತನ್ನ ಅಸಿಸ್ಟೆಂಡ್ ಮದುವೆಗಾಗಿ ಆಕೆ ಬಂದಿದ್ದು, ಸಾಯಿ ಗೆ ತುಂಬಾ ಸಂತೋಷವಾಗಿದೆ ಎನ್ನಲಾಗಿದೆ. ಆರೆಂಜ್ ಕಲರ್‍ ಸೀರೆಯಲ್ಲಿ ರಶ್ಮಿಕಾ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ಕ್ಯೂಟ್ ನೆಸ್ ಓವರ್‍ ಲೋಡ್ ಎಂಬಂತೆ ಕ್ಯೂಟ್ ಸ್ಮೈಲ್ ನೊಂದಿಗೆ ಎಲ್ಲರನ್ನೂ ಕಟ್ಟಿಹಾಕಿದ್ದಾರೆ. ಇನ್ನೂ ನೂತನ ವಧುವರರನ್ನು ಆರ್ಶಿವಾದ ಮಾಡಿ ಅವರಿಗೆ ಶುಭಕೋರಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಸದ್ಯ ರಶ್ಮಿಕಾ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಜತೆಗೆ ಪುಷ್ಪಾ-2, ಹಿಂದಿಯಲ್ಲಿ ರಣಬೀರ್‍ ಕಪೂರ್‍ ಜೊತೆಗೆ ಯಾನಿಮಲ್, ಧನುಷ್ ಜೊತೆಗೆ D51 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ರೈನ್ ಬೋ ಎಂಬ ಲೇಡಿ ಓರಿಯೆಂಟೆಡ್ ಸಿನೆಮಾದಲ್ಲೂ ಸಹ ಆಕೆ ನಟಿಸುತ್ತಿದ್ದಾರೆ. ಹಿಂದಿ ಸಿನೆಮಾಗಳ ಮೇಲಿನ ವ್ಯಾಮೋಹದಿಂದ ಆಕೆ ತೆಲುಗಿನ ನಿತಿನ್ ಸಿನೆಮಾದಿಂದ ದೂರವಾದರು ಎಂದು ಸಹ ಹೇಳಲಾಗುತ್ತಿದೆ.

Most Popular

To Top