News

ಹಿಂದೂ ಧರ್ಮಕ್ಕೆ ಸ್ವಯಂ ಪ್ರೇರಣೆಯಿಂದ ಬರುವವರಿಗೆ ತಿರುಮಲದಲ್ಲಿ ವಿಶೇಷ ವ್ಯವಸ್ಥೆ, ಟಿಟಿಡಿಯಿಂದ ಘೋಷಣೆ…..!

ಟಿಟಿಡಿಯಿಂದ ಹೊಸ ಘೋಷಣೆಯೊಂದು ಹೊರಬಂದಿದೆ, ಹಿಂದೂ ಧರ್ಮಕ್ಕೆ ವಾಪಸ್ಸಾಗುವವರಿಗೆ ಅಥವಾ ಸ್ವಯಂ ಪ್ರೇರಣೆಯಿಂದ ಮತಾಂತರಗೊಳ್ಳುವರಿಗೆ ತಿರುಮಲದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುವುದು ಎಂದು ಟಿಟಿಡಿ ಅಧ್ಯಕ್ಷ ಕರುಣಾಕರರೆಡ್ಡಿ ಈ ಬಗ್ಗೆ ತಿಳಿಸಿದ್ದಾರೆ. ಮೂರು ದಿನಗಳ ಕಾಲ ತಿರುಪತಿಯಲ್ಲಿ ನಡೆದ ಧಾರ್ಮಿಕ ಸಮ್ಮೇಳದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಮೂರು ದಿನಗಳ ಕಾಲ ತಿರುಪತಿಯಲ್ಲಿ ನಡೆದ ಧಾರ್ಮಿಕ ಸಮ್ಮೇಳನದಲ್ಲಿ ಸನಾತನ ಧರ್ಮದತ್ತ ಒಲವು ತೋರುವಂತಹ ಅನ್ಯ ಧರ್ಮದವರಿಗೆ ಹಾಗೂ ಬೇರೆ ಧರ್ಮಕ್ಕೆ ಹೋಗಿ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾಗುವವರಿಗೆ ತಿರುಮಲದಲ್ಲಿ ಹೊಸ ವ್ಯವಸ್ಥೆ ಮಾಡುವ ಬಗ್ಗೆ ತೀರ್ಮಾಣ ತೆಗೆದುಕೊಳ್ಳಲಾಗಿದೆ. ಈ ಕುರಿತು ಟಿಟಿಡಿ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ಸಮ್ಮೇಳನದಲ್ಲಿ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕಾರ ರೆಡ್ಡಿ, ಇ.ಒ ಎ.ವಿ.ಧರ್ಮರೆಡ್ಡಿ, ಮಠಾಧೀಶರು, ಪೀಠಾಧಿಪತಿಗಳು ಭಾಗಿಯಾಗಿದ್ದರು. ಈ ವೇಳೆ ಹಿಂದೂ ಮತಾಂತರವನ್ನು ತಡೆಗಟ್ಟಲು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಜೊತೆಗೆ ಹಿಂದೂ ಧರ್ಮಕ್ಕೆ ಮರಳುವವರಿಗೆ ಮಹತ್ವದ ಸುದ್ದಿಯನ್ನು ಸಹ ನೀಡಲಾಗಿದೆ.

ಸಮ್ಮೇಳದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಸ್ವಯಂಪ್ರೇರಣೆಯಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಬಯಸುವವರಿಗೆ ಟಿಟಿಡಿ ತಿರುಮಲದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆಯಂತೆ. ಇದಕ್ಕೆ ಸಮ್ಮೇಳದಲ್ಲಿದ್ದ ಅನೇಕ ಸ್ವಾಮೀಜಿಗಳು ಸಹಮತ ವ್ಯಕ್ತಪಡಿಸಿದ್ದರು. ಮೂರು ದೇವಾಲಯಗಳು ಸಂಗಮಿಸುವಂತಹ ತಿರುಮಲ ಸ್ವಾಮಿಯ ಪುಷ್ಕರಣಿಯ ಪವಿತ್ರ ಜಲವನ್ನು ಮತ್ತೆ ಹಿಂದೂ ಧರ್ಮಕ್ಕೆ ಮರಳುವ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ. ಶಾಸ್ತ್ರೋಕ್ತವಾಗಿ ಹಿಂದೂ ಧರ್ಮಕ್ಕೆ ಮರಳಿ ಸೇರಿಸಿಕೊಳ್ಳಲಾಗುತ್ತದೆ ಎಂದು ಟಿಟಿಡಿ ಅಧ್ಯಕ್ಷ ಕರುಣಾಕರ್‍ ರೆಡ್ಡಿ ತಿಳಿಸಿದ್ದಾರೆ.

Most Popular

To Top