14ನೇ ವಯಸ್ಸಿನಲ್ಲೇ ಆ ರೀತಿಯ ಸನ್ನಿವೇಶ ಎದುರಾಗಿತ್ತು ಎಂದ ಭೂಮಿ ಪಡ್ನೇಕರ್, ಶಾಕಿಂಗ್ ವಿಚಾರ ಹಂಚಿಕೊಂಡ ಬೋಲ್ಡ್ ಬ್ಯೂಟಿ…..!

Follow Us :

ದೇಶದ ಸಿನಿರಂಗದಲ್ಲಿ ಗ್ಲಾಮರ್‍ ಸಿನಿರಂಗವಾಗಿ ಬಾಲಿವುಡ್ ಸಿನಿರಂಗ ತುಂಬಾನೆ ಫೇಮಸ್ ಆಗಿದೆ. ಇಲ್ಲಿ ಅನೇಕ ನಟಿಯರು ವಯಸ್ಸಾದರೂ ಸಹ ಗ್ಲಾಮರ್‍ ಮೂಲಕವೇ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಕಳೆದ 2015ರಲ್ಲೇ ಹಿಂದಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಭೂಮಿ ಪಡ್ನೇಕರ್‍ ಕ್ರೇಜಿ ನಟಿಯಾಗಿ ಮುನ್ನುಗ್ಗುತ್ತಿದ್ದಾರೆ. ಬಾಲಿವುಡ್ ರಂಗದ ಬೋಲ್ಡ್ ನಟಿಯರಲ್ಲಿ ಭೂಮಿ ಸಹ ಒಬ್ಬರಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆಯ ಬಾಲ್ಯದಲ್ಲಿ ಎದುರಾದಂತಹ ಕಹಿ ಘಟನೆಯ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ.

ನಟಿ ಭೂಮಿ ಪಡ್ನೇಕರ್‍ ಟಾಯ್ಲೆಟ್ ಏಕ್ ಪ್ರೇಮ ಕಥ, ಶುಭ ಮಂಗಳ್ ಸಾವಧಾನ್, ಬದಾಯಿ ಹೋ ಮೊದಲಾದ ಸಿನೆಮಾಗಳ ಮೂಲಕ ಒಳ್ಳೆಯ ಖ್ಯಾತಿ ಪಡೆದುಕೊಂಡರು. ಇನ್ನೂ ಆಕೆ ನೇರ ನುಡಿಗಳನ್ನಾಡುವ ಸ್ವಭಾವನ್ನು ಹೊಂದಿದ್ದು, ಸಿನಿರಂಗದಲ್ಲಿ ಮಹಿಳಾ ಕಲಾವಿದರ ಸಮಸ್ಯೆಗಳ ಬಗ್ಗೆ ಆಗಾಗ ಮಾತನಾಡುತ್ತಿರುತ್ತಾರೆ. ನೇರವಾಗಿ ಆಕೆ ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಸಿನೆಮಾಗಳಲ್ಲೂ ಸಹ ಭೂಮಿ ಬೋಲ್ಡ್ ಆಗಿಯೇ ನಟಿಸುತ್ತಾರೆ. ಆಕೆಯ ಪಾತ್ರ ಬೋಲ್ಡ್ ಆಗಿದ್ದರೂ ಪರವಾಗಿಲ್ಲ. ಅದರಲ್ಲಿ ವೈವಿಧ್ಯತೆ ಇರಬೇಕೆಂದು ಬಯಸುತ್ತಾರೆ. ನಟಿ ಭೂಮಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ.

ಸದ್ಯ ಭೂಮಿ ಪಡ್ನೇಕರ್‍ ಭಕ್ಷಕ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದ ಪ್ರಮೋಷನ್ ನಿಮಿತ್ತ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಆಕೆ ತನ್ನ ಬಾಲ್ಯದಲ್ಲಿ ಎದುರಾದಂತಹ ಕೆಲವೊಂದು ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಭೂಮಿ, ಆ ದಿನ ನನಗೆ ಇನ್ನೂ ನೆನಪಿದೆ. ಬಾಂದ್ರಾದಲ್ಲಿ ಒಂದು ಜಾತ್ರೆ ನಡೆಯುತ್ತಿತ್ತು. ಆಗ ನಾನು ತುಂಬಾ ಚಿಕ್ಕವಳಾಗಿದ್ದೆ. ನನ್ನ ವಯಸ್ಸು 14 ವರ್ಷ ಆಗಿತ್ತು. ನಾನು ನಮ್ಮ ಕುಟುಂಬಸ್ಥರ ಜೊತೆಗೆ ಆ ಜಾತ್ರೆಗೆ ಹೋಗಿದ್ದೆ. ಜಾತ್ರೆಯಲ್ಲಿ ನಾನು ನಡೆಯುತ್ತಿದ್ದಾಗ ಯಾರೋ ನನ್ನ ಬೆನ್ನಿನ ಮೇಲೆ ಕೈಹಾಕಿದ್ದರು. ಗಟ್ಟಿಯಾಗಿ ನನ್ನ ತಬ್ಬಿಕೊಂಡ, ಆಗ ನನಗೆ ಏನು ಆಗುತ್ತಿದೆ ಎಂಬುದು ನನಗೆ ತಿಳಿಯಿತು. ಹಿಂದೆ ತಿರುಗಿ ನೋಡಿದರೇ ಯಾರೂ ಇರಲಿಲ್ಲ. ಈ ಬಗ್ಗೆ ನಾನು ಯಾರಿಗೂ ಹೇಳಿಲ್ಲ. ಏಕೆಂದರೇ ಆ ಸಮಯದಲ್ಲಿ ನಾನು ಶಾಕ್ ಆಗಿದ್ದೆ. ಆಗ ಸರಿಯಾಗಿ ಏನಾಯ್ತು ಎಂಬುದು ನನಗೆ ತಿಳಿಯದು. ಆದರೆ ಆತ ನನ್ನನ್ನು ಮುಟ್ಟಿದ್ದು ಇಂದಿಗೂ ಸಹ ನನಗೆ ನೆನಪಿದೆ ಎಂದಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಭೂಮಿ ಪಡ್ನೇಕರ್‍ ಅಭಿನಯದ ಭಕ್ಷಕ್ ಸಿನೆಮಾ ಇದೇ ಫೆ.9 ರಂದು ತೆರೆಕಾಣಲಿದೆ. ಈ ಸಿನೆಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಒಂದು ನೈಜ ಸಂಘಟನೆಯನ್ನು ಆಧರಿಸಿ ಈ ಸಿನೆಮಾ ನಿರ್ಮಾಣವಾಗಿದ್ದು, ಈ ಸಿನೆಮಾದಲ್ಲಿ ಭೂಮಿ ಲೇಡಿ ರಿಪೋರ್ಟರ್‍ ಆಗಿ ನಟಿಸಿದ್ದಾರೆ ಎನ್ನಲಾಗಿದೆ.