News

ಹಾವೇರಿಯ ರಾಕ್ ಸ್ಟಾರ್ ಹೋರಿ ಇನ್ನಿಲ್ಲ, ಸ್ಟಾರ್ ನಟರಿಗಿಂತಲೂ ಕಡಿಮೆಯಿಲ್ಲ ಹೋರಿಯ ಕ್ರೇಜ್…..!

ಈ ಹೋರಿಗೆ ಸ್ಟಾರ್‍ ನಟರಂತೆ ಭಾರಿ ಫ್ಯಾನ್ ಫಾಲೋಯಿಂಗ್ ಇದೆ. ಈ ಹೋರಿಯನ್ನು ರಾಕ್ ಸ್ಟಾರ್‍ ಎಂದೇ ಬಿರುದು ಕೊಡಲಾಗಿದೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಫಾಲೋಯಿಂಗ್ ಹೊಂದಿರುವ ಈ ಹೋರಿ ಮೃತಪಟ್ಟಿದ್ದು, ಸಾವಿರಾರು ಸಂಖ್ಯೆಯ ಅಭಿಮಾನಿಗಳು ಈ ಹೋರಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಅಷ್ಟಕ್ಕೂ ಆ ಹೋರಿ ಯಾವುದು ಎಂಬ ಸುದ್ದಿ ತಿಳಿಯಲು ಮುಂದೆ ಓದಿ.

ಕರ್ನಾಟಕದ ಹಾವೇರಿ ತಾಲೂಕಿನ ನಾಗೇಂದ್ರ ಮಟ್ಟಿಯಲ್ಲಿ ರೈತರ ಒಡನಾಡಿ ರಾಕ್ ಸ್ಟಾರ್‍ ಹೋರಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ. ಇದೇ ಹೋರಿ ಮೃತಪಟ್ಟಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಹಾವೇರಿಗೆ ಆಗಮಿಸಿತ್ತು. ಯಾವ ಸಿನೆಮಾ ಸೆಲೆಬ್ರೆಟಿಗಳಿಗೂ ಕಡಿಮೆಯಿಲ್ಲ ಎಂಬಂತೆ ಅಭಿಮಾನಿಗಳನ್ನು ಸಂಪಾದಿಸಿಕೊಂಡಿತ್ತು ಈ ರಾಕ್ ಸ್ಟಾರ್‍ ಹೋರಿ. ಈ ಹೋರಿಯ ಅಂತ್ಯಕ್ರಿಯೆ ನಾಗೇಂದ್ರ ಮಟ್ಟಿಯಲ್ಲಿ ನೆರವೇರಿದೆ. ವಿವಿಧ ವಾದ್ಯ ಮೇಳದೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ಹೂ, ಬಲೂನ್ ಗಳಿಂದ ಹೋರಿಯ ಮೃತದೇಹವನ್ನು ಟ್ರಾಕ್ಟರ್‍ ನಲ್ಲಿ ಮೆರವಣಿಗೆ ಮಾಡಲಾಗಿತ್ತು.

ಹೋರಿ ಹಬ್ಬ ಇತಿಹಾಸದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹೋರಿ ಇದಾಗಿದೆ ಎನ್ನಲಾಗಿದೆ. ಹಾವೇರಿ ನಗರದ ಚಿಕ್ಕಪ್ಪ, ಅಜಪ್ಪ ಹಾಗೂ ಮಾರುತಿ ಎನ್ನುವರರಿಗೆ ಸೇರಿದ್ದಾಗಿದೆ. ಈ ಹೋರಿಗೆ ಅನ್ನದಾತರು ರಾಕ್ ಸ್ಟಾರ್‍ ಹೋರಿ ಎಂದು ಬಿರುದು ಕೊಟ್ಟಿದ್ದಾರೆ. ಈ ಹೋರಿ ಯಾವುದೇ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರೂ ಬಹುಮಾನ ಪಕ್ಕಾ ಎಂಬ ನಂಬಿಕೆ ಹೋರಿಯ ಅಭಿಮಾನಿಗಳಲ್ಲಿತ್ತು. ಹೋರಿ ಹಬ್ಬದಲ್ಲಿ ಈ ರಾಕ್ ಸ್ಟಾರ್‍ ಹೋರಿ ಭಾಗವಹಿಸುತ್ತದೆ ಎಂದು ತಿಳಿದರೇ ಸಾಕು ಸಾವಿರಾರು ಅಭಿಮಾನಿಗಳು ಈ ಹಬ್ಬದಲ್ಲಿ ಭಾಗಿಯಾಗುತ್ತಿದ್ದರು. ಈ ಹೋರಿ ಇದೀಗ ಮೃತಪಟ್ಟಿದ್ದು, ಲಕ್ಷಾಂತರ ಅಭಿಮಾನಿಗಳಿಗೆ ಅತೀವ ನೋವು ತಂದುಕೊಟ್ಟಿದೆ ಎನ್ನಲಾಗಿದ್ದು, ಹೋರಿಯ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿದೆ.

Most Popular

To Top