ಹೆಚ್ಚಾದ ಟೊಮೋಟೊ ಕಳ್ಳರು, ಸಿಸಿ ಕ್ಯಾಮೆರಾ ಮೊರೆ ಹೋದ ಟೊಮೋಟೊ ಬೆಳೆಗಾರರು….!

Follow Us :

ದೇಶದಲ್ಲಿ ಇತ್ತೀಚಿಗೆ ಟೊಮೋಟೊ ದರಗಳು ಗಗನಕ್ಕೇರುತ್ತದೆ. ಟೊಮೋಟೊ ಬೆಲೆ ನಾಗಲೋಟ ಮುಂದುವರೆಯುತ್ತಲೇ ಇದೆ. ದುಬಾರಿ ವಸ್ತುಗಳ ಪಟ್ಟಿಯಲ್ಲಿ ಟೊಮೋಟೊ ಸಹ ಸೇರಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಳ್ಳರು ಬಂಗಾರ, ಹಣದ ಹಿಂದೆ ಬೀಳದೇ ಟೊಮೋಟೊ ಕಳ್ಳತನಕ್ಕಿಳಿದಿದ್ದಾರೆ. ಒಂದು ಜನರು ಹೇಗೆ ಖರೀದಿ ಮಾಡಬೇಕೆಂದು ತಿಳಿಯದೇ, ಮತ್ತೊಂದು ಕಡೆ ರೈತರು ತಮ್ಮ ಬೆಳೆಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ತಿಳಿಯದೇ ಪರದಾಡುತ್ತಿದ್ದಾರೆ. ಅನೇಕ ಕಡೆ ಟೊಮೋಟೊ ಕಳ್ಳತನ ಸಹ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಇದೀಗ ಸಿಸಿ ಕ್ಯಾಮೆರಾಗಳ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಟೊಮೋಟೊ ಇಲ್ಲದೇ ಯಾವುದೇ ಅಡುಗೆ ಆಗುವುದಿಲ್ಲ ಎಂದೇ ಹೇಳಬಹುದು. ಸದ್ಯ ಟೊಮೋಟೊ ಬೆಲೆ 150 ರ ಗಡಿ ದಾಟಿದೆ. ಕೆಲವೊಂದು ಕಡೆ 200 ರೂಪಾಯಿ ಸಹ ಆಗಿದೆ. ಎಲ್ಲಾ ತರಕಾರಿಗಳ ಪೈಕಿ ಟೊಮೋಟೊ ದರದಲ್ಲಿ ಟಾಪ್ ಸ್ಥಾನದಲ್ಲಿದೆ. ಜನರು ಟೊಮೋಟೊ ಖರೀದಿ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಖರೀದಿ ಮಾಡಲೇ ಬೇಕಾದ ಪರಿಸ್ಥಿತಿ ಸಹ ಇದೆ. ಕೆಲವೊಮ್ಮೆ ಬೆಲೆಯಿಲ್ಲದೇ ರಸ್ತೆಗೆ ಸುರಿದ ಟೊಮೋಟೊ ಬೆಳೆಗಾರರು ಇದೀಗ ಆ ಟಮೋಟೊ ಬೆಳೆಯನ್ನು ಕಾಪಾಡಿಕೊಳ್ಳಲು ತುಂಬಾನೆ ಪರದಾಡುವಂತಾಗಿದೆ. ಟಮೋಟೊ ಕಳ್ಳರು ತುಂಬಾನೆ ಹೆಚ್ಚಾಗಿದ್ದಾರೆ. ಟೊಮೋಟೊ ಕಳ್ಳತನ ಮಾಡುವಂತಹ ಅನೇಕ ವಿಡಿಯೋಗಳು ಸಹ ವೈರಲ್ ಆಗಿವೆ.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಮಹಾರಾಷ್ಟ್ರದಲ್ಲಿ ಅಂತಹ ಘಟನೆಯೊಂದು ನಡೆದಿದೆ. ಮಹಾರಾಷ್ಟ್ರದ ರೈತನೋರ್ವ ಟಮೋಟೊ ಮಾರಲು ವಾಹನದಲ್ಲಿ ಬರುತ್ತಿದ್ದಾನೆ. ಸುಮಾರು 400 ಕೆಜಿ ಟಮೋಟೊಗಳನ್ನು ವಾಹನದಲ್ಲಿಟ್ಟಿದ್ದಾನೆ. ಬೆಳಾಗುವುದರೊಳಗೆ ಆ ಟೊಮೋಟೊಗಳು ಸಂಪೂರ್ಣ ಮಾಯವಾಗಿದೆ. ಈ ಹಿನ್ನೆಲೆಯಲ್ಲಿ ಆತ ಪೊಲೀಸರನ್ನು ಆಶ್ರಯಿಸಿದ್ದಾನೆ. ಈ ರೀತಿಯಲ್ಲಿ ಇಡೀ ದೇಶದಾದ್ಯಂತ ಅನೇಕ ಕಡೆ ಅಂತಹ ಕಳ್ಳತನಗಳು ನಡೆದಿದ್ದು, ರೈತ ಏನು ಮಾಡಬೇಕೆಂಬ ಗೊಂದಲದಲ್ಲಿದ್ದಾನೆ. ಕೈಗೆ ಸಿಕ್ಕ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಂತಹ ಸಮಯದಲ್ಲಿ ರೈತರ ಕಾಟದಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ನೂ ಕರ್ನಾಟಕದಲ್ಲೂ ಸಹ ಮೈಸೂರು ಮೂಲದ ಇಬ್ಬರು ರೈತರು ಹೊಲದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದರು. ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ತಮ್ಮ ಬೆಳೆಯನ್ನು ರಕ್ಷಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಟೊಮೋಟೊ ಬೆಳೆ ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲದೇ ಬೆಳೆದಂತಹ ರೈತರಿಗೂ ಸಹ ತುಂಬಾ ಟೆನ್ಷನ್ ಕೊಡುತ್ತಿದೆ ಎಂದೇ ಹೇಳಬಹುದಾಗಿದೆ.