ಸಂಚಲನಾತ್ಮಕ ಕಾಮೆಂಟ್ಸ್ ಮಾಡಿದ ಜೆನಿಲಿಯಾ, ಮಕ್ಕಳೊಂದಿಗೆ ಸಿನೆಮಾಗಳನ್ನು ನೋಡಲಾಗುತ್ತಿಲ್ಲ ಎಂದ ನಟಿ…..!

Follow Us :

ನಟಿ ಜೆನಿಲಿಯಾ ತನ್ನ ಖಾತೆಯಲ್ಲಿ ಅನೇಕ ಬ್ಲಾಕ್ ಬ್ಲಸ್ಟರ್‍ ಸಿನೆಮಾಗಳನ್ನು ಹಾಕಿಕೊಂಡಿದ್ದಾರೆ. ಬೊಮ್ಮರಿಲ್ಲು, ಸೈ, ರೆಡಿ, ಢೀ ಮೊದಲಾದ ಸೂಪರ್‍ ಡೂಪರ್‍ ಹಿಟ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು.  ತೆಲುಗು ಸಿನಿರಂಗದಲ್ಲಿ ಅನೇಕ ವರ್ಷಗಳ ಕಾಲ ಸ್ಟಾರ್‍ ನಟಿಯಾಗಿ ಸ್ಟಾರ್‍ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದರು. ಇದೀಗ ಆಕೆ ಸಿನೆಮಾಗಳನ್ನು ಮಕ್ಕಳೊಂದಿಗೆ ನೋಡಲು ಆಗುತ್ತಿಲ್ಲ ಎಂದು ಸಂಚಲನಾತ್ಮಕ ಕಾಮೆಂಟ್ಸ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ವರ್ಷಗಳ ಹಿಂದೆ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ಹೊಂದಿದ್ದ ನಟಿಯರಲ್ಲಿ ಜೆನಿಲಿಯಾ ಸಹ ಒಬ್ಬರಾಗಿದ್ದಾರೆ. ಆಕೆ ಮದುವೆಯಾದ ಬಳಿಕ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಯಿತು. ಆಕೆಯ ಕೆರಿಯರ್‍ ನಲ್ಲಿ ಫ್ಯಾಷನ್ ಡ್ರೆಸ್ ಗಳನ್ನು ಧರಿಸಿದ್ದರು ಆದರೆ ವಲ್ಗರ್‍ ಆಗಿ ಅಥವಾ ರೊಮ್ಯಾಂಟಿಕ್ ದೃಶ್ಯಗಳು, ಬೆಡ್ ಸೀನ್ಸ್, ಹಾಟ್ ಸೀನ್ಸ್, ಲಿಪ್ ಲಾಕ್ ಗಳಂತ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆಕೆಯ ಖಾತೆಗಳಲ್ಲಿ ಅನೇಕ ಹಿಟ್ ಸಿನೆಮಾಗಳಿವೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಅನೇಕ ಒಳ್ಳೆಯ ಸಿನೆಮಾಗಳ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ರವರನ್ನು ಮದುವೆಯಾದರು. ಸದ್ಯ ಮದುವೆಯ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

ಇತ್ತೀಚಿಗೆ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವಂತ ವೆಬ್ ಸಿರೀಸ್ ಗಳನ್ನು ಮಕ್ಕಳೊಂದಿಗೆ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕಾಮೆಂಟ್ಸ್ ಮಾಡಿದ್ದಾರೆ. ಮತ್ತೆ ಆಕೆ ಸಿನೆಮಾಗಳಲ್ಲಿ ಎಂಟ್ರಿ ಕೊಡಲು ಸಿದ್ದರಾಗುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಟ್ರಯಲ್ ಪಿರಿಯಡ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಈ ಸಿರೀಸ್ ನಿಮಿತ್ತ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ. ನಾನು ಏನಾದರೂ ಒಂದು ಸಿನೆಮಾ ಒಪ್ಪಿಗೆ ಮಾಡಲು ನಾನು ಆ ಕಥೆಯನ್ನು ಒದಲು ತುಂಬಾ ಸಮಯ ತೆಗೆದುಕೊಳ್ಳುತ್ತೇನೆ. ಆದರೆ ಈ ವೆಬ್ ಸಿರೀಸ್ ಓದಿದಿ ಒಂದೇ ಗಂಟೆಯಲ್ಲಿ ಒಪ್ಪಿಕೊಂಡೆ. ನನ್ನ ರೀ ಎಂಟ್ರಿ ಒಂದು ಅದ್ಬುತವಾದ ಕಥೆಯೊಂದಿಗೆ ಆರಂಭವಾಗಲು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ.

ಈ ಸಿರೀಸ್ ನಲ್ಲಿ ನಾನು ಒಂಟಿ ಮಹಿಳೆಯಾಗಿ ಕಾಣಿಸಿಕೊಳ್ಳುತ್ತೇನೆ. ಈ ವೆಬ್ ಸಿರೀಸ್ ಇಡೀ ಕುಟುಂಬ ಸೇರಿ ನೋಡುವಂತಿದೆ. ಅಂತಹ ವೆಬ್ ಸಿರೀಸ್ ಗಳು ತುಂಬಾನೆ ಕಡಿಮೆ ಬರುತ್ತಿವೆ. ಇತ್ತೀಚಿಗೆ ತುಂಬಾ ಅಸಭ್ಯಕರವಾದ ಒಟಿಟಿಗಳು ಹೆಚ್ಚಾಗಿದೆ ಎಂದು ಆಕೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ. ಈ ವೆಬ್ ಸಿರೀಸ್ ಇದೇ ಜು.21 ರಿಂದ ಒಟಿಟಿ ಜಿಯೋ ಸಿನೆಮಾ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ.