ನನ್ನನ್ನು ಪಬ್ಲಿಕ್ ಪ್ರಾಪರ್ಟಿ ಎಂದುಕೊಂಡ್ರಾ, ನಾನು ಪಬ್ಲಿಕ್ ಫಿಗರ್ ಮಾತ್ರ ಎಂದ ಉರ್ಫಿ, ಕಿರುಕುಳದ ಬಗ್ಗೆ ಉರ್ಫಿ ಕಾಮೆಂಟ್ಸ್…….!

Follow Us :

ವಿಚಿತ್ರ ಬಟ್ಟೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಏಕೈಕ ನಟಿ ಎಂದರೇ ಉರ್ಫಿ ಜಾವೇದ್ ಎಂದು ಹೇಳಬಹುದು. ವಿಚಿತ್ರ ಬಟ್ಟೆಗಳನ್ನು ಧರಿಸುತ್ತಾ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಾರೆ. ಆಕೆ ಧರಿಸುವ ಬಟ್ಟೆಗಳು ಯಾವ ಡಿಸೈನರ್‍ ಯಾರೇಂದು ಸೋಷಿಯಲ್ ಮಿಡಿಯಾದಲ್ಲೂ ಸಹ ಕೆಲವರು ಹುಡುಕುತ್ತಾರಂತೆ. ಇದೀಗ ಆಕೆಗೆ ಹದಿಹರೆಯದ ಹುಡುಗರು ಸಹ ಕಿರುಕುಳ ಕೊಡುತ್ತಿದ್ದಾರಂತೆ. ಈ ಹಾದಿಯಲ್ಲೇ ಆಕೆ ಕಿರುಕುಳದ ಬಗ್ಗೆ ಕಾಮೆಂಟ್ಸ್ ಮಾಡಿದ್ದಾರೆ. ನಾನು ಪಬ್ಲಿಕ್ ಪ್ರಾಪರ್ಟಿಯಲ್ಲ, ಪಬ್ಲಿಕ್ ಫಿಗರ್‍ ಎಂದಿದ್ದಾರೆ ಉರ್ಫಿ.

ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಾಗುವಂತಹ ನಟಿ ಉರ್ಫಿ ಜಾವೇದ್. ಅದರಲ್ಲೂ ಆಕೆ ವಿಭಿನ್ನ ಹಾಗೂ ವಿಚಿತ್ರವಾದ ಬಟ್ಟೆಗಳನ್ನು ಧರಿಸುತ್ತಾ ಸಂಚಲನ ಸೃಷ್ಟಿ ಮಾಡುತ್ತಿರುತ್ತಾರೆ. ಇನ್ನೂ ಆಕೆಯ ಈ ನಡೆಗೆ ಕೆಲವರು ಆಶ್ವರ್ಯ ಪಡುತ್ತಾರೆ, ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಮತ್ತೆ ಕೆಲವರು ವಿಮರ್ಶೆ ಟೀಕೆಗಳನ್ನು ಮಾಡುತ್ತಾರೆ. ಹೆಚ್ಚಾಗಿ ಆಕೆಯನ್ನು ಟೀಕೆ, ವಿಮರ್ಶೆ ಮಾಡುವಂತಹವರೇ ಹೆಚ್ಚಾಗಿದ್ದಾರೆ ಎನ್ನಬಹುದಾಗಿದೆ. ನಟಿ ಉರ್ಫಿ ಜಾವೇದ್ ಎಂದು ಸರ್ಚ್ ಮಾಡಿದರೇ ಸಾಕು ಆಕೆಗ ಅರೆಬರೆ ಪೊಟೋಗಳೇ ಹೆಚ್ಚು ಕಾಣಿಸಿಕೊಳ್ಳುತ್ತವೆ. ಜೊತೆಗೆ ಆಕೆ ವಿರುದ್ದ ಅನೇಕ ಟ್ರೋಲ್ ಗಳೂ ಸಹ ನಡೆಯುತ್ತಿರುತ್ತವೆ. ಆಕೆ ಧರಿಸುಂತಹ ಬಟ್ಟೆಗಳ ಕಾರಣದಿಂದ ಆಕೆಗೆ ಕಿರುಕುಳ ಸಹ ಹೆಚ್ಚಾಗಿದೆಯಂತೆ. ಈ ಬಗ್ಗೆ ಉರ್ಫಿ ಅನೇಕ ಬಾರಿ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ನೋವನ್ನು ಹೊರಹಾಕಿದ್ದಾರೆ. ಇದೀಗ ಮತ್ತೊಮ್ಮೆ ಆಕೆ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ.

ಇತ್ತೀಚಿಗೆ ಉರ್ಫಿಗೆ ವಿಮಾನದಲ್ಲಿ ಕಹಿ ಅನುಭವವೊಂದು ಎದುರಾಗಿತ್ತಂತೆ. ಕಳೆದ ಗುರುವಾರ ರಾತ್ರಿ ಆಕೆ ವಿಮಾನದಲ್ಲಿ ಮುಂಬೈನಿಂದ ಗೋವಾಗೆ ಹೋಗುತ್ತಿದ್ದಾಗ ಕುಡುಕನೋರ್ವ ಆಕೆಗೆ ಕಿರುಕುಳ ಕೊಟ್ಟನಂತೆ. ಎಕಾನಮಿ ಕ್ಸಾಸ್ ನಲ್ಲಿದ್ದ ಉರ್ಫಿಗೆ ಆತ ಟೀಜ್ ಮಾಡಲು ಶುರು ಮಾಡಿದನಂತೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ಸಹ ಆಕೆ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟಟ್ ನಲ್ಲಿ ಆಕೆ ತನ್ನ ಆವೇದನೆಯನ್ನು ಹಂಚಿಕೊಂಡಿದ್ದಾರೆ. ನನ್ನನ್ನು ಕೆಲವರು ಟೀಸಿಂಗ್ ಮಾಡಿದ್ದಾರೆ. ಮುಂಬೈ ನಿಂದ ಗೋವಾಗೆ ಹೋಗುವಾಗ ಈ ಕಹಿ ಘಟನೆ ನಡೆದಿದೆ. ಟೀಸಿಂಗ್ ಮಾಡುತ್ತಾ ವಿವಿಧ ಹೆಸರುಗಳನ್ನು ಕೊಟ್ಟು ಕಿರುಕುಳ ನೀಡುತ್ತಿದ್ದಾರೆ. ಆದರೆ ನಾನು ಅವರೊಂದಿಗೆ ಗಲಾಟೆ ಮಾಡಿಕೊಳ್ಳುವುದು ಇಷ್ಟ ಇರಲಿಲ್ಲ. ಪಕ್ಕದಲ್ಲಿದ್ದವರನ್ನು ಕೇಳಿದರೇ ಆತ ಕುಡಿದಿದ್ದಾನೆ ಎಂದು ಹೇಳಿದ್ದಾರೆ. ಕುಡಿದರೂ ಸರಿ ಮಹಿಳೆಯರೊಂದಿಗೆ ಆ ರೀತಿ ನಡೆದುಕೊಳ್ಳಬಾರದು ಎಂದು ಆಕ್ರೋಷ ಹೊರಹಾಕಿದ್ದಾರೆ.

ಅಷ್ಟೇಅಲ್ಲದೇ ನಾನು ಪಬ್ಲಿಕ್ ಫಿಗರ್‍ ಅಷ್ಟೇ ಪಬ್ಲಿಕ್ ಪ್ರಾಪರ್ಟಿಯಲ್ಲ ಎಂದು ಆಕ್ರೋಷ ಹೊರಹಾಕಿದ್ದಾರೆ. ಇನ್ನೂ ಉರ್ಫಿ ಸದಾ ವಿವಿಧ ರೀತಿಯ ಡ್ರೆಸ್ ಗಳ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಆಕೆ ಧರಿಸುವ ಡ್ರೆಸ್ ಗಳ ಬಗ್ಗೆ ಅನೇಕ ವಿಮರ್ಶೆಗಳು ಎದುರಾದರೂ ಸರಿ ಆಕೆ ಡ್ರೆಸ್ ಗಳನ್ನು ಧರಿಸುವುದು ಮಾತ್ರ ಬಿಟ್ಟಿಲ್ಲ.