Film News

ವಾರ್-2 ಸೆಟ್ ಗೆ ಎಂಟ್ರಿ ಕೊಟ್ಟ ಯಂಗ್ ಟೈಗರ್ ಎನ್.ಟಿ.ಆರ್, ನ್ಯೂ ಗೆಟಪ್ ನಲ್ಲಿ ಮಿಂಚಿದ ನಟ, ವೈರಲ್ ಆದ ಪೊಟೋಸ್…..!

RRR ಸಿನೆಮಾದ ಬಳಿಕ ಗ್ಲೋಬಲ್ ಲೆವೆಲ್ ನಲ್ಲಿ ಕ್ರೇಜ್ ಪಡೆದುಕೊಂಡ ಜೂನಿಯರ್‍ ಎನ್.ಟಿ.ಆರ್‍ ರವರ ಮುಂದಿನ ಸಿನೆಮಾಗಳ ಮೇಲೆ ಭಾರಿ ನಿರೀಕ್ಷೆ ಹುಟ್ಟಿದೆ. ಶೀಘ್ರದಲ್ಲೇ ಜೂನಿಯರ್‍ ಎನ್.ಟಿ.ಆರ್‍ ದೇವರ ಎಂಬ ಸಿನೆಮಾದ ಮೂಲಕ ಆರ್ಭಟಿಸಲಿದ್ದಾರೆ. ಇದರ ಜೊತೆಗೆ ವಾರ್‍-2 ಸಿನೆಮಾದ ಮೂಲಕ ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ. ಇದೀಗ ವಾರ್‍-2 ಸಿನೆಮಾ ಶೂಟಿಂಗ್ ಸೆಟ್ ಗೆ ಜೂನಿಯರ್‍ ಎನ್.ಟಿ.ಆರ್‍ ಎಂಟ್ರಿ ಕೊಟ್ಟಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಖ್ಯಾತ ನಿರ್ಮಾಣ ಸಂಸ್ಥೆ ಯಷ್ ರಾಜ್ ಫಿಲಂಸ್ ನಿರ್ಮಾಣ ಮಾಡಲಿರುವ ಸ್ಪೈ ಯೂನಿವರ್ಸ್‌ನ ವಾರ್‍ ಎಂಬ ಸಿನೆಮಾ ಭಾರಿ ಸಕ್ಸಸ್ ಕಂಡಿತ್ತು. ವಾರ್‍ ಮೊದಲ ಭಾಗದಲ್ಲಿ ಬಾಲಿವುಡ್ ಸ್ಟಾರ್‍ ಗಳಾದ ಹೃತಿಕ್ ರೋಷನ್ ಹಾಗೂ ಟೈಗರ್‍ ಶ್ರಾಫ್ ನಟಿಸಿದ್ದರು. ಇದೀಗ ಅದರ ಸೀಕ್ವೆಲ್ ವಾರ್‍-2 ಸಿನೆಮಾದಲ್ಲಿ ಹೃತಿಕ್ ರೋಷನ್ ನಟಿಸಲಿದ್ದಾರೆ. ಆದರೆ ಟೈಗರ್‍ ಶ್ರಾಫ್ ಬದಲಿಗೆ ಯಂಗ್ ಟೈಗರ್‍ ಎನ್.ಟಿ.ಆರ್‍ ನಟಿಸಲಿದ್ದಾರೆ. ಈ ಸಿನೆಮಾವನ್ನು ಅಯಾನ್ ಮುಖರ್ಜಿ ನಿರ್ದೇಶನ ವಹಿಸಲಿದ್ದಾರೆ. ಈ ಹಿಂದೆ ವಾರ್‍-2 ಸಿನೆಮಾಗೆ ಪ್ರಭಾಸ್ ಹಾಗೂ ವಿಜಯ್ ದೇವರಕೊಂಡ ಹೆಸರುಗಳು ಕೇಳಿಬಂದಿದ್ದವು. ಆದರೆ ಕೊನೆಗೆ ಈ ಸಿನೆಮಾಗಾಗಿ ಜೂನಿಯರ್‍ ಎನ್.ಟಿ.ಆರ್‍ ರವರನ್ನು ಫೈನಲ್ ಮಾಡಲಾಗಿತ್ತು. ಇದೀಗ ಮುಂಬೈನಲ್ಲಿ ನಡೆಯುತ್ತಿರುವ ಶೂಟಿಂಗ್ ಸ್ಪಾಟ್ ಗೆ ಜೂನಿಯರ್‍ ಎನ್.ಟಿ.ಆರ್‍ ಎಂಟ್ರಿ ಕೊಟ್ಟಿದ್ದು, ಈ ವಿಡಿಯೋ ಹಾಗೂ ಪೊಟೋಗಳು ವೈರಲ್ ಆಗುತ್ತಿವೆ.

ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಹಾಗೂ ಪೊಟೋಗಳಲ್ಲಿ ಜೂನಿಯರ್‍ ಎನ್.ಟಿ.ಆರ್‍ ಸ್ಕೈ ಬ್ಲೂ ಶರ್ಟ್, ಜೀನ್ಸ್ ಧರಿಸಿದ್ದಾರೆ. ತಲೆಯ ಮೇಲೆ ಕ್ಯಾಪ್ ಧರಿಸಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಅವರನ್ನು ತಮ್ಮ ಕ್ಯಾಮೆರಾಗಳಲ್ಲಿ ಪೊಟೋ ತೆಗೆಯಲು ಬಾಲಿವುಡ್ ಮಿಡಿಯಾ ಪೈಪೋಟಿಗೆ ಬಿದ್ದಿದ್ದರು. ಎನ್.ಟಿ.ಆರ್‍ ಗಾಗಿ ಸಿನೆಮಾ ತಂಡ ಸಹ ಭಾರಿ ವ್ಯವಸ್ಥೆ ಮಾಡಿತ್ತು. ಮುಂಬೈಗೆ ಎಂಟ್ರಿ ಕೊಟ್ಟ ಜೂನಿಯರ್‍ ಎನ್.ಟಿ.ಆರ್‍ ಬಾಲಿವುಡ್ ಶೇಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಎನ್.ಟಿ.ಆರ್‍  ವಾರ್‍-2 ಪಾತ್ರವನ್ನು ಹತ್ತು ದಿನಗಳ ಕಾಲ ಶೂಟ್ ಮಾಡಲಿದ್ದಾರಂತೆ. ಹೃತಿಕ್ ರೋಷನ್ ಹಾಗೂ ಎನ್.ಟಿ.ಆರ್‍ ಸೇರಿದಂತೆ ಹಲವರ ಮಧ್ಯೆ ಆಕ್ಷನ್ ದೃಶ್ಯಗಳಲ್ಲಿ ನಟಿಸುತ್ತಿದ್ದಾರಂತೆ. ಹೃತಿಕ್ ರೋಷನ್ ಹಿರೋ ಆಗಿ ನಟಿಸುತ್ತಿದ್ದು, ಎನ್.ಟಿ.ಆರ್‍ ರವರು ನೆಗೆಟೀವ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನೆಮಾ ಮುಂದಿನ ವರ್ಷ ಆಗಸ್ಟ್ 14 ರಂದು ತೆರೆಗೆ ತರಲು ಪ್ಲಾನ್ ಮಾಡಲಿದೆ.

ಇನ್ನೂ ಜೂನಿಯರ್‍ ಎನ್.ಟಿ.ಆರ್‍ ಹಾಗೂ ನಿರ್ದೇಶಕ ಕೊರಟಾಲ ಶಿವ ಸಾರಥ್ಯದಲ್ಲಿ ದೇವರ ಎಂಬ ಸಿನೆಮಾ ಸೆಟ್ಟೇರಿದ್ದು, ಈ ಸಿನೆಮಾದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎನ್ನಲಾಗಿದೆ. ಈ ಸಿನೆಮಾದಲ್ಲಿ ಎನ್.ಟಿ.ಆರ್‍ ಗೆ ಜೋಡಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್‍ ನಟಿಸಿದ್ದಾರೆ. ಈ ಸಿನೆಮಾ ಅ.10 ರಂದು ದಸರಾ ಹಬ್ಬದ ಅಂಗವಾಗಿ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ಬಿಡುಗಡೆ ಫಸ್ಟ್ ಗ್ಲಿಂಪ್ಸ್ ಸಿನೆಮಾದ ಮೇಲೆ ಮತಷ್ಟು ಹೈಪ್ ಕ್ರಿಯೇಟ್ ಮಾಡಿದೆ ಎಂದು ಹೇಳಬಹುದಾಗಿದೆ.

Most Popular

To Top