ಮೊದಲ ಬಾರಿಗೆ ಬಿಕಿನಿಯಲ್ಲಿ ಕಾಣಿಸಿಕೊಂಡ ತೆಲುಗು ಬ್ಯೂಟಿ ಈಷಾ ರೆಬ್ಬಾ, ವೈರಲ್ ಆದ ಬೋಲ್ಡ್ ಲುಕ್ಸ್……..!

Follow Us :

ತೆಲುಗು ಬ್ಯೂಟಿ ಈಷಾ ರೆಬ್ಬಾ ಲೈಫ್ ಈಸ್ ಬ್ಯೂಟಿಪುಲ್ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಪರಿಚಯವಾದ ಈಕೆ ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ಸಂಪಾದಿಸಿಕೊಂಡರು. ಸಿನೆಮಾಗೂ ಎಂಟ್ರಿ ಕೊಡುವ ಮುಂಚೆ ಆಕೆ ಮಾಡಲಿಂಗ್ ಮೂಲಕ ರಂಜಿಸುತ್ತಿದ್ದರು. ಇತ್ತೀಚಿಗೆ  ಆಕೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ಬಿಕಿನಿಯಲ್ಲಿ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ಆಕೆಯ ಲೇಟೆಸ್ಟ್ ಪೊಟೋಗಳು ಇದೀಗ ಇಂಟರ್‍ ನೆಟ್  ಶೇಕ್ ಮಾಡುತ್ತಿದೆ.

ಸೌಂದರ್ಯ ಅಭಿನಯ ಎರಡೂ ಇದ್ದರೂ ಕೆಲವು ನಟಿಯರು ಸ್ಟಾರ್‍ ಡಂ ಗಿಟ್ಟಿಸಿಕೊಳ್ಳಲು ವಿಫಲರಾಗುತ್ತಾರೆ. ಆ ಸಾಲಿನಲ್ಲಿ ತೆಲುಗು ಮೂಲದ ನಟಿ ಈಷಾ ರೆಬ್ಬಾ ಸಹ ಸೇರುತ್ತಾರೆ. ನೋಡಿದ ಕೂಡಲೇ ಮತ್ತೆ ನೋಡಬೇಕು ಎನ್ನಿಸುವ ಸೌಂದರ್ಯ, ತುಂಬಾ ಅದ್ಬುತವಾದ ನಟನೆಯೊಂದಿಗೆ ಕಡಿಮೆ ಸಮಯದಲ್ಲೇ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡರು. ಆದರೆ ಸರಿಯಾದ ಹಿಟ್ ಪಡೆದುಕೊಂಡು ಸ್ಟಾರ್‍ ನಟಿಯರ ಸಾಲಿಗೆ ಸೇರಲು ವಿಫಲರಾದರು. ಬಂದಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ರಂಜಿಸುತ್ತಿದ್ದಾರೆ.

ಇನ್ನೂ ಈಷಾ ರೆಬ್ಬಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಇತ್ತೀಚಿಗೆ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳ ಮೂಲಕ ಇಂಟರ್‍ ನೆಟ್ ಗೆ ಬೆಂಕಿ ಹಚ್ಚಿದ್ದಾರೆ. ಮೊದಲ ಬಾರಿಗೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲೂ ಕಲರ್‍ ಬಿಕಿನಿಯಲ್ಲಿ ಮೊದಲ ಬಾರಿಗೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕೊನೆಯದಾಗಿ ಆಕೆ ದಯಾ ಎಂಬ ಸಿನೆಮಾದಲ್ಲಿ ಜೆಡಿ ಚಕ್ರವರ್ತಿ ಜೊತೆಗೆ ನಟಿಸಿದ್ದರು. ಇದೀಗ ತಮಿಳು ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ವಿಕ್ರಮ್ ಪ್ರಭು ಜೊತೆಗೆ ಆಕೆ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಈಷಾ ರೆಬ್ಬಾ ತೆಲುಗು ಮೂಲದ ನಟಿಯರಿಗೆ ತೆಲುಗು ಸಿನಿರಂಗದಲ್ಲಿ ಅವಕಾಶಗಳು ಕೊಡುತ್ತಿಲ್ಲ ಎಂದು ಆಕ್ರೋಷ ಹೊರಹಾಕಿದ್ದರು.