ಕಳೆದೆರಡು ದಿನಗಳ ಹಿಂದೆಯಷ್ಟೆ ಕಾಲಿವುಡ್ ನಟ ಕಂ ಮ್ಯೂಜಿಕ್ ಡೈರೆಕ್ಟರ್ ವಿಜಯ್ ಆಂಟೋನಿ ರವರ ಪುತ್ರಿ ಆತ್ಮಹತ್ಯೆಗೆ ಶರಣಾಗಿದ್ದರು. ವಿಜಯ್ ಆಂಟೋನಿರವರ 19 ವರ್ಷದ ಹಿರಿಯ ಮಗಳು ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದೇ ಇದೆ. ಮಗಳ ಮರಣದಿಂದ ವಿಜಯ್ ಆಂಟೋನಿ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಈ ನೋವಿನಲ್ಲೂ ತಮ್ಮ ಮುಂದಿನ ಸಿನೆಮಾಗಾಗಿ ಮನೆಯಿಂದ ಹೊರಬಂದು, ಸಿನೆಮಾ ಪ್ರಮೋಷನ್ ಹಾಗೂ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ವಿಚಾರವಾಗಿ ಸಿನೆಮಾ ನಿರ್ಮಾಪಕ ಸಹ ಎಮೋಷನ್ ಆಗಿದ್ದಾರೆ ಎನ್ನಲಾಗಿದೆ.
ನಟ ವಿಜಯ್ ಆಂಟೋನಿ ರತ್ತಂ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಸಹ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಸಿನೆಮಾಗೆ ಬಂಡವಾಳ ಹಾಕಿದಂತಹ ನಿರ್ಮಾಪಕರು, ಶ್ರಮ ವಹಿಸಿದ ಚಿತ್ರತಂಡವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ಸಿನೆಮಾ ಪ್ರಮೋಷನ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಮಗಳನ್ನು ಕಳೆದುಕೊಂಡ ಭಾರಿ ದುಃಖದ ನಡುವೆಯೂ ವಿಜಯ್ ಆಂಟೋನಿ ಸಿನೆಮಾ ಪ್ರಮೋಷನ್ ಗಳಲ್ಲಿ ಭಾಗಿಯಾಗಿದ್ದು, ಅವರ ವೃತ್ತಿಪರತೆಗೆ ಎಲ್ಲಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನೆಮಾಗಳಿಗೆ ಕೋಟಿ ಕೋಟಿ ಖರ್ಚು ಮಾಡಿದ ನಿರ್ಮಾಪಕರಿಗೆ ಯಾವುದೇ ಸಮಸ್ಯೆಯಿಲ್ಲದೇ ಸಪೋರ್ಟ್ ಮಾಡುತ್ತಿರುವುದಕ್ಕೆ ಹಾಗೂ ರತ್ತಂ ಸಿನೆಮಾ ಪ್ರಮೋಷನ್ ನಲ್ಲಿ ವಿಜಯ್ ಆಂಟೋನಿ ತನ್ನ ಕಿರಿಯ ಮಗಳಾದ ಲಾರಾ ಜೊತೆಗೆ ಹಾಜರಾಗಿತ್ತಿರುವುದು ಅನೇಕರು ಎಮೋಷನಲ್ ಆಗುತ್ತಿದ್ದಾರೆ.
ಇನ್ನೂ ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸಿನೆಮಾ ಪ್ರಮುಖರೂ ಸಹ ವಿಜಯ್ ಆಂಟೋನಿಯವರನ್ನು ಪ್ರಶಂಸೆ ಮಾಡುತ್ತಿದ್ದಾರೆ. ಇನ್ನೂ ಈ ಬಗ್ಗೆ ನಿರ್ಮಾಪಕ ಜಿ.ಧನಂಜಯನ್ ಎಮೋಷನ್ ಪೋಸ್ಟ್ ಮಾಡಿದ್ದಾರೆ. ವಿಜಯ್ ಆಂಟೋನಿ ಸರ್ ಕೆಲಸದ ಮೇಲಿನ ಕಾಳಜಿಗೆ ಇದೊಂದು ಉದಾಹರಣೆಯಾಗಿದೆ. ನಿರ್ಮಾಪಕರು ಹಾಗೂ ಆಡಿಯೆನ್ಸ್ ಗಾಗಿ ಪ್ರಮೋಷನ್ ಹಾಗೂ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ನಮ್ಮ ಸಿನೆಮಾ ರತ್ತಂ ಗೆ ಸಪೋರ್ಟ್ ಮಾಡುತ್ತಿದ್ದಾರೆ. ಕೆಲವೊಂದು ಚಾನಲ್ ಗಳಿಗೆ ಸಂದರ್ಶನ ಸಹ ನೀಡುತ್ತಿದ್ದಾರೆ. ವೈಯುಕ್ತಿಕವಾದ ವಿಷಾದವನ್ನು ಪಕ್ಕಕ್ಕಿಟ್ಟು ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಸಿನಿರಂಗಕ್ಕೆ ಪ್ರೇರಣೆಯಾಗಿದ್ದಾರೆ. ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಎಮೋಷನಲ್ ಆಗಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.
