Film News

ಆ ಕಾರಣದಿಂದಲೇ ಮತ್ತೆ ಮತ್ತೆ ನಿನ್ನ ಪ್ರೀತಿಗೆ ಬೀಳುತ್ತಿರುತ್ತೇನೆ, ರಾಣಾ ಪತ್ನಿ ಮಿಹಿಕಾ ರೊಮ್ಯಾಂಟಿಕ್ ಪಿಕ್ ವಿತ್ ವಿಶ್….!

ತೆಲುಗು ಸಿನಿರಂಗದಲ್ಲಿ ಸ್ಟಾರ್‍ ಜೋಡಿಗಳಲ್ಲಿ ಒಂದಾದ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ಜೋಡಿ ಸಹ ಒಂದಾಗಿದೆ. ಕಳೆದ 2020 ರಲ್ಲಿ ರಾಣಾ ಹಾಗೂ ಮಿಹಿಕಾ ಬಜಾಜ್ ಪ್ರೀತಿಸಿ ಮದುವೆಯಾದರು. ಇನ್ನೂ ಮಿಹಿಕಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ.  ಮಿಹಿಕಾ ಹಾಗೂ ತನ್ನ ಪತಿ ರಾಣಾ ಜೊತೆಗೆ ಇರುವಂತಹ ಪೊಟೊಗಳನ್ನು ಆಗಾಗ ಶೇರ್‍ ಮಾಡುತ್ತಲೇ ಇರುತ್ತಾರೆ. ಇದೀಗ ಲವರ್ಸ್ ಡೇ ಅಂಗವಾಗಿ ಮಿಹಿಕಾ ತನ್ನ ಪ್ರೀತಿಯ ಪತಿಗೆ ಶುಭಾಷಯ ತಿಳಿಸುತ್ತಾ ಪೋಸ್ಟ್ ಒಂದನ್ನು ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ.

ತೆಲುಗು ಸ್ಟಾರ್‍ ನಟ ರಾಣಾ ದಗ್ಗುಬಾಟಿ ಹಾಗೂ ಮಹಿಕಾ ಬಜಾಜ್ ಪ್ರೀತಿಸಿ 2020 ರಲ್ಲಿ ಮದುವೆಯಾದರು. ಇಬ್ಬರ ಮದುವೆ ಅದ್ದೂರಿಯಾಗಿ ಕುಟುಂಬಸ್ಥರು ಸೇರಿದಂತೆ ಅನೇಕರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಇನ್ನೂ ಈ ಹಿಂದೆ ಮಿಹಿಕಾ ಹಾಗೂ ರಾಣಾ ಬೇರೆಯಾಗುತ್ತಿದ್ದಾರೆ. ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿದ್ದು, ವಿಚ್ಚೇದನ ಪಡೆಯಲಿದ್ದಾರೆ. ಈ ಕಾರಣದಿಂದಲೇ ರಾಣಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ಎಲ್ಲ ಪೋಸ್ಟ್ ಗಳನ್ನು ಡಿಲೀಟ್ ಮಾಡಿ ಸೋಷಿಯಲ್ ಮಿಡಿಯಾದಿಂದ ದೂರವೇ ಉಳಿದಿದ್ದಾರೆ ಎಂಬೆಲ್ಲಾ ರೂಮರ್‍ ಗಳು ಹುಟ್ಟಿಕೊಂಡಿತ್ತು. ಆದರೆ ಈ ರೂಮರ್‍ ಹುಟ್ಟಿಕೊಂಡ ಕೆಲವೇ ದಿನಗಳಲ್ಲಿ ಮಿಹಿಕಾ ತನ್ನ ಪತಿಯೊಂದಿಗೆ ಇರುವಂತಹ ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಂಡು ಎಲ್ಲಾ ರೂಮರ್‍ ಗಳಿಗೂ ತೆರೆ ಎಳೆದರು.

ಇನ್ನೂ ಲವರ್ಸ್ ಡೇ ಅಂಗವಾಗಿ ಮಿಹಿಕಾ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಟೋದಲ್ಲಿ ಮಿಹಿಕಾ ಶಾರ್ಟ್ ರೆಡ್ ಕಲರ್‍ ಡ್ರೆಸ್ ಧರಿಸಿ ರಾಣಾ ರನ್ನು ತಬ್ಬಿಕೊಂಡಿದ್ದಾರೆ. ಇನ್ನೂ ಈ ಪೊಟೋ ಜೊತೆಗೆ ತನ್ನ ಪ್ರೀತಿಯ ಕಾಮೆಂಟ್ ಗಳನ್ನು ಸಹ ಮಾಡಿದ್ದಾರೆ. ನಾನು ಸ್ಟ್ರಾಂಗ್, ಸ್ವೀಟ್, ವೈಲ್ಡ್ ಅಂಡ್ ವಂಡರ್‍ ಪುಲ್. ಈ ರೀತಿಯಾಗಿ ನನ್ನ ಬಗ್ಗೆ ಹೇಳಿಕೊಂಡರೇ ಪದಗಳೇ ಸಾಲದು. ಅದಕ್ಕಾಗಿ ನೀನು ನನ್ನ ಅಷ್ಟರ ಮಟ್ಟಿಗೆ ಪ್ರೀತಿಸುವುದರಲ್ಲಿ ಆಶ್ಚರ್ಯವಿಲ್ಲ ಜಸ್ಟ್ ಕಿಡ್ಡಿಂಗ್. ಪ್ರತಿನಿತ್ಯ ನಾನು ಬೇಸರಗೊಂಡರೂ ಸಹ ನಿನ್ನ ಕ್ಯೂಟ್ ಸ್ಮೈಲ್ ಮತ್ತೆ ನನ್ನನ್ನು ನಿನ್ನ ಪ್ರೀತಿಗೆ ಬೀಲುವಂತೆ ಮಾಡುತ್ತದೆ. ಹ್ಯಾಪಿ ವಾಲೆಂಟೈನ್ಸ್ ಡೇ ಎಂದು ಮಿಹಿಕಾ ತನ್ನ ಪತಿಯ ಮೇಲಿನ ಪ್ರೀತಿಯನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇನ್ನೂ ಮಿಹಿಕಾ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ರಾಣಾ ಕೊನೆಯದಾಗಿ  ಭೀಮ್ಲಾ ನಾಯಕ್, ವಿರಾಟಪರ್ವಂ ಸಿನೆಮಾದಲ್ಲಿ ನಟಿಸಿದ್ದರು. ರಾಣಾ ತೆಲುಗು ಸಿನಿರಂಗದಲ್ಲಿ ವಿಭಿನ್ನ ನಾಯಕ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಸದ್ಯ ರಾಣಾ ವಿಕ್ಟರಿ ವೆಂಕಟೇಶ್ ಜೊತೆಗೆ ರಾಣಾ ನಾಯುಡು ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ.

Most Popular

To Top