Film News

ಲವರ್ಸ್ ಡೇ ಸ್ಪೇಷಲ್ ರೊಮ್ಯಾಂಟಿಕ್ ಪಿಕ್ ಹಂಚಿಕೊಂಡ ಶ್ರುತಿ ಹಾಸನ್, ಪ್ರಿಯಕರನ್ನು ಮನಸಾರೆ ಹೊಗಳಿದ ನಟಿ…..!

ಸೌತ್ ಸಿನಿರಂಗದ ಸ್ಟಾರ್‍ ನಟಿ ಶ್ರುತಿ ಹಾಸನ್ ಗೆ ಈ ವರ್ಷ ಒಳ್ಳೆಯ ಒಪೆನಿಂಗ್ ಕೊಟ್ಟಿದೆ. ವೀರಸಿಂಹಾರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಸಿನೆಮಾಗಳ ಮೂಲಕ ಭರ್ಜರಿ ಹಿಟ್ ಪಡೆದುಕೊಂಡಿದ್ದಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ವಿಚಾರ ತಿಳಿದೇ ಇದೆ. ಸುಮಾರು ವರ್ಷಗಳಿಂದ ಶ್ರುತಿ ಹಾಸನ್ ಹಾಗೂ ಶಾಂತಾನು ಹಜಾರಿಕಾ ಡೇಟಿಂಗ್ ಮಾಡುತ್ತಿದ್ದಾರೆ. ಲವರ್ಸ್ ಡೇ ಅಂಗವಾಗಿ ರೊಮ್ಯಾಂಟಿಕ್ ಪೊಟೋ ಶೇರ್‍ ಮಾಡಿ ತನ್ನ ಪ್ರಿಯಕರ ಶಾಂತಾನು ರನ್ನು ಹೊಗಳಿ ಶುಭಾಷಯ ಕೋರಿದ್ದಾರೆ. ಇನ್ನೂ ಈ ರೊಮ್ಯಾಂಟಿಕ್ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಶ್ರುತಿ ಹಾಸನ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕವೇ ತಮ್ಮ ಸಿನೆಮಾಗಳ ಬಗ್ಗೆ ಅಪ್ಡೇಟ್ ಗಳು, ಪೊಟೋಶೂಟ್ಸ್ ಗಳೂ ಸೇರಿದಂತೆ ಆಗಾಗ ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ಸುದ್ದಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇನ್ನೂ ಶ್ರುತಿ ಹಾಸನ್ ಕಳೆದ ಎರಡು ವರ್ಷಗಳ ಹಿಂದೆಯೇ ತನ್ನ ಬಾಯ್ ಫ್ರೆಂಡ್ ಖ್ಯಾತ ಡೂಡುಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ರನ್ನು ಪರಿಚಯ ಮಾಡಿದರು. ಅಂದಿನಿಂದ ಅವರು ಒಪೆನ್ ಆಗಿಯೇ ಟೂರ್‍, ಈವೆಂಟ್ ಗಳಲ್ಲಿ ಜೊತೆಯಾಗಿ ಭಾಗಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಶ್ರುತಿ ಹಾಸನ್ ಲವರ್ಸ್ ಡೇ ಅಂಗವಾಗಿ ತನ್ನ ಮುದ್ದಿನ ಪ್ರಿಯಕರನ್ನು ಮನಸಾರೆ ಹೊಗಳಿ ರೊಮ್ಯಾಂಟಿಕ್ ಪೊಟೋ ಒಂದನ್ನು ಶೇರ್‍ ಮಾಡಿದ್ದಾರೆ.

ಫೆ.14 ವ್ಯಾಲೆಂಟೈನ್ ದಿನಾಚರಣೆ ಅಂಗವಾಗಿ ಶ್ರುತಿ ಹಾಗೂ ಶಾಂತಾನು ರವರ ರೊಮ್ಯಾಂಟಿಕ್ ಪೊಟೋ ಒಂದನ್ನು ಶೇರ್‍ ಮಾಡಿದ್ದಾರೆ. ಈ ಪೊಟೋ ನೋಡಿದ ಕೂಡಲೇ ಧನುಷ್ ಹಾಗೂ ಶ್ರುತಿ ಹಾಸನ್ ಅಭಿನಯದ 3 ಸಿನೆಮಾ ನೆನಪಿಗೆ ಬರುವಂತಿದೆ. ಇನ್ನೂ ಇಬ್ಬರೂ ಒಬ್ಬರ ಕಣ್ಣಲ್ಲಿ ಒಬ್ಬರನ್ನು ನೋಡಿಕೊಳ್ಳುತ್ತಾ ರೊಮ್ಯಾಂಟಿಕ್ ಫೀಲ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಈ ಪೊಟೋ ಹಂಚಿಕೊಂಡ ಶ್ರುತಿ ತನ್ನ ಪ್ರಿಯಕರ ಶಾಂತಾನು ರನ್ನು ಮನಸಾರೆ ಹೊಗಳಿದ್ದಾರೆ. ಇನ್ನೂ ಶ್ರುತಿ ಹಾಸನ್ ತಾನು ಶಾಂತಾನು ರನ್ನು ಎಷ್ಟರ ಮಟ್ಟಿಗೆ ಪ್ರೀತಿ ಮಾಡುತ್ತಿದ್ದಾಳೆ ಎಂಬುದನ್ನು ತಿಳಿಸಿದ್ದಾರೆ. ನೀನು ನನ್ನ ಬೆಸ್ಟ್, ನೀನು ಸದಾ ನನ್ನ ಮನದಲ್ಲೇ ಇರುತ್ತಾರೆ. ನೀನು ನನ್ನ ಬೆಳಕು, ನೀನೇ ನನ್ನ ಕತ್ತಲು, ಈ ವಿಚಾರದಲ್ಲಿ ನಾನು ತುಂಬಾ ಅದೃಷ್ಟವಂತೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಶ್ರುತಿ ಹಾಸನ್ ರವರ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಶ್ರುತಿ ಹಾಸನ್ ಸದ್ಯ ಸಲಾರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಲಾರ್‍ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ಶ್ರುತಿ ಹಾಸನ್ ಆದ್ಯ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನೆಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶ್ರುತಿ ಹಾಸನ್ ಮತಷ್ಟು ಸಿನೆಮಾಗಳಲ್ಲಿ ಸಹ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top