Film News

ದೊಡ್ಡ ಪ್ರಮಾದಿಂದ ಪಾರಾದ ಜೂನಿಯರ್ ಎನ್.ಟಿ.ಆರ್, ಜಪಾನ್ ನ ಭೂಕಂಪದಿಂದ ಪರಾದ ನಟ…..!

ನಂದಮೂರಿ ಕುಟುಂಬದ ಸ್ಟಾರ್‍ ನಟ ಗ್ಲೋಬಲ್ ಸ್ಟಾರ್‍ ಜೂನಿಯರ್‍ ಎನ್.ಟಿ.ಆರ್‍ RRR ಸಿನೆಮಾದ ಬಳಿಕ ದೇವರ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ನಿಮಿತ್ತ ಎನ್.ಟಿ.ಆರ್‍, ಪತ್ನಿ ಪ್ರಣತಿ ಅವರ ಮಕ್ಕಳಾದ ಅಭಯ್ ಹಾಗೂ ಭಾರ್ಗವ್ ಜಪಾನ್ ಗೆ ಹಾರಿದ್ದರು. ಒಂದು ವಾರದ ಕಾಲ ಜಪಾನ್ ನಲ್ಲೇ ಸಂತೋಷದಿಂದ ಕಾಲ ಕಳೆದಿದ್ದಾರೆ. ಇದೀಗ ಆತ ದೊಡ್ಡ ಪ್ರಮಾದಿಂದ ಹೊರಬಂದಿದ್ದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಅವರ ಟ್ವೀಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಹೊಸ ವರ್ಷದ ವೆಕೇಷನ್ ಮುಗಿಸಿ ಜೂನಿಯರ್‍ ಎನ್.ಟಿ.ಆರ್‍ ತನ್ನ ಕುಟುಂಬದ ಸಮೇತವಾಗಿ ಇಂಡಿಯಾಗೆ ವಾಪಸ್ಸಾಗಿದ್ದಾರೆ. ಜೂನಿಯರ್‍ ಎನ್.ಟಿ.ಆರ್‍ ಜಪಾನ್ ನಿಂದ ಇಂಡಿಯಾ ವಿಮಾನವನ್ನು ಹತ್ತಿದ್ದ ಕೆಲವೇ ಗಂಟೆಗಳಲ್ಲಿ ಜಪಾನ್ ನಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಅನೇಕರು ಮೃತಪಟ್ಟಿದ್ದಾರೆ. 7.6 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ತೀರ ಪ್ರಾಂತಗಳನ್ನು ಸಹ ಮುಳುಗಿಸಿದೆ. ಈ ಬಗ್ಗೆ ಜೂನಿಯರ್‍ ಎನ್.ಟಿ.ಆರ್‍ ರಿಯಾಕ್ಟ್ ಆಗಿದ್ದಾರೆ. ಜಪಾನ್ ನಲ್ಲಿ ನಡೆದ ಭೂಕಂಪನ ನನ್ನು ದಿಗ್ಬ್ರಾಂತಿಗೆ ಗುರಿಮಾಡಿತ್ತು. ಒಂದು ವಾರ ನಾನು ಜಪಾನ್ ನಲ್ಲಿದ್ದೆ. ಜಪಾನ್ ಶೀಘ್ರ ಚೇತರಿಸಿಕೊಳ್ಳಬೇಕು. ನಿಮ್ಮ ಹೋರಾಟಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಜೂನಿಯರ ಎನ್.ಟಿ.ಆರ್‍ ರವರು ಗಂಟೆಗಳ ಅವಧಿಯಲ್ಲಿ ಭೂಕಂಪದ ಅಪಾಯದಿಂದ ಪಾರಾಗಿದ್ದಾರೆ. ಅವರು ಏನಾದರೂ ಭಾರತಕ್ಕೆ ವಾಪಸ್ಸು ಬರದೇ ಇದಿದ್ದರೇ ಅವರ ಕುಟುಂಬ ಭೂಕಂಪಕ್ಕೆ ಸಿಲುಕುತ್ತಿತ್ತು. ಸುರಕ್ಷಿತವಾಗಿ ಎನ್.ಟಿ.ಆರ್‍ ಕುಟುಂಬ ಪಾರಾಗಿದ್ದು, ಅವರ ಅಭಿಮಾನಿಗಳು ನಿಟ್ಟಿಸುರು ಬಿಟ್ಟಿದ್ದಾರೆ. ನಟ ಜೂನಿಯರ್‍ ಎನ್.ಟಿ.ಆರ್‍ ರವರಿಗೆ ಜಪಾನ್ ಎಂದರೇ ತುಂಬಾನೆ ಇಷ್ಟ. ಜಪಾನ್ ನಲ್ಲೂ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ತಿಂಗಳುಗಳ ಕಾಲ RRR ಸಿನೆಮಾ ಅಲ್ಲಿ ಪ್ರದರ್ಶನ ಆಗಿದ್ದು, ಉತ್ತಮ ಉದಾಹರಣೆಯಾಗಿದೆ ಎನ್ನಬಹುದು. ಸದ್ಯ ಜೂನಿಯರ್‍ ಎನ್.ಟಿ.ಆರ್‍ ಕೊರಟಾಲ ಶಿವ ನಿರ್ದೇಶನ ದೇವರ ಸಿನೆಮಾದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾ ಇದೇ ಏಪ್ರಿಲ್ 1 ರಂದು ಅದ್ದೂರಿಯಾಗಿ ತೆರೆಕಾಣಲಿದೆ. ಈ ಸಿನೆಮಾದಲ್ಲಿ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಎನ್.ಟಿ.ಆರ್‍ ರವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದು, ಈ ಸಿನೆಮಾದ ಮೇಲೆ ಅಭಿಮಾನಿಗಳು ತುಂಬಾನೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

Most Popular

To Top