ನಾನು ಅವರನ್ನು ಕೊಲೆ ಮಾಡಿದ್ದೀನಿ, ಶವ ತಗೊಂಡು ಬನ್ನಿ ಎಂದು ಗನ್ ಕೈಯಲ್ಲಿಟ್ಟುಕೊಂಡು ಬಂದ ಮಹಿಳೆ, ಶಾಕ್ ಆದ ಪೊಲೀಸರು…..!

Follow Us :

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ತನ್ನ ಪತಿ ಹಾಗೂ ಆತನ ಸಹೋದರನನ್ನು ಗನ್ ಮೂಲಕ ಶೂಟ್ ಮಾಡಿ ಕೊಲೆ ಮಾಡಿದ್ದು, ಬಳಿಕ ಗನ್ ಹಿಡಿದು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ. ಗಂಡ ಹಾಗೂ ಮೈದುನನ್ನು ಕೊಲೆ ಮಾಡಿದ್ದೀನಿ, ಇಬ್ಬರ ಶವಗಳನ್ನು ಎತ್ತಿಕೊಂಡು ಹೋಗಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆಕೆಯ ಮಾತುಗಳನ್ನು ಕೇಳಿದ ಪೊಲೀಸರು ದಂಗಾಗಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಉಜ್ಜಯನಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಮಧ್ಯಪ್ರದೇಶದ ಉಜ್ಜಯನಿ ಜಿಲ್ಲಾ ವ್ಯಾಪ್ತಿಯ ಇಂಗೋರಿಯಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿ ಸವಿತಾ ಎಂಬಾಕೆ ಆಕೆಯ ಪತಿ ರಾಧೇಶ್ಯಾಮ್ (41) ಹಾಗೂ ಆತನ ಸಹೋದರ ದಿನೇಶ್ (47) ರವರನ್ನು ಶೂಟ್ ಮಾಡಿ ಕೊಲೆ ಮಾಡಿದ್ದಾಳೆ. ಬುಲೆಟ್ ದಾಳಿಯಿಂದ ರಾಧೇಶ್ಯಾಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಿನೇಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ಸವಿತಾ ಗನ್ ಸಮೇತ ಬಂದು ಪೊಲೀಸರಿಗೆ ಶರಣಾಗಿದ್ದಾಳೆ. ಆಕೆ ಮೊದಲು ತನ್ನ ಪತಿ ಹಾಗೂ ತನ್ನ ಸೋದರ ಮಾವನ ಮೇಲೆ ಗುಂಡು ಹಾರಿಸಿದ್ದಾಳಂತೆ. ಇದು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ಘಟನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಲಾಗುತ್ತಿದೆ.

ಅಂಗನವಾಡಿ ಕಾರ್ಯಕರ್ತೆಯಾದ ಆರೋಪಿ ಮಹಿಳೆ ಹೆದ್ದಾರಿಯಲ್ಲಿದ್ದ ಐದು ಕೋಟಿ ಮೌಲ್ಯದ ಜಮೀನನ್ನು ಮೈದುನ ಕಬಳಿಸಲು ಬಯಸಿದ್ದ. ಈ ಕಾರಣದಿಂದ ನನ್ನ ಪತಿಗೆ ನಶೆ ಏರಿಸುತ್ತಿದ್ದ. ಸೋದರ ಮಾವನ ಪ್ರಭಾವದಿಂದ ಪ್ರತಿನಿತ್ಯ ನನಗೆ ಕಿರುಕುಳ ನೀಡುತ್ತಿದ್ದ. ಈ ಕಾರಣದಿಂದ ಹಾಸಿಗೆಯ ಕೆಳಗಿದ್ದ ಗನ್ ನಿಂದ ಶೂಟ್ ಮಾಡಿದೆ. ಪ್ರತಿನಿತ್ಯ ಕಿರುಕುಳ ತಾಳಲಾರದೆ ಬೇಸತ್ತು ಈ ಕ್ರಮ ತೆಗೆದುಕೊಂಡಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾರಂತೆ. ಇನ್ನೂ ಈ ಪ್ರಕರಣವನ್ನು ತನಿಖೆ ನಡೆಸಿ ಆದಷ್ಟು ಶೀಘ್ರವಾಗಿ ಆರೋಪಿ ಮಹಿಳೆಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮೃತರ ಕುಟುಂಬಸ್ಥರು ಆಗ್ರಹಿಸಿದ್ದಾರೆ.