Film News

ಕೇರಳದಲ್ಲಿ 13 ಹಸುಗಳ ಮರಣ, ಯುವ ರೈತರಿಗೆ ಸಹಾಯಾಸ್ಥ ಚಾಚಿದ ನಟ ಜಯರಾಂ ಹಾಗೂ ಕೆಲ ಸ್ಟಾರ್ ಗಳು….!

ವಿಷಯುಕ್ತ ಆಹಾರ ಸೇವನೆ ಮಾಡಿದ ಹಿನ್ನೆಲೆಯಲ್ಲಿ ಕೇರಳದಲ್ಲಿ 13 ಹಸುಗಳು ಸತ್ತಿವೆ. ಆ ಹಸುಗಳನ್ನು ಹದಿನೈದು ವರ್ಷದ ಯುವಕರು ಪೋಷಣೆ ಮಾಡುತ್ತಿದ್ದಾರೆ. ತಾವು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಹಸುಗಳು ಮೃತಪಟ್ಟ ಹಿನ್ನೆಲೆಯಲ್ಲಿ ಆ ಯುವಕರು ಶೋಕಸಾಗರದಲ್ಲಿ ಮುಳುಗಿದ್ದರು. ಈ ವಿಚಾರ ತಿಳಿದಂತಹ ಮಾಲಿವುಡ್ ನ ಕೆಲ ನಟರು ಸಹಾಯಾಸ್ತ ಚಾಚಿದ್ದಾರೆ. ನಟ ಜಯರಾಮ್ ಸೇರಿದಂತೆ ಹಲವು ನಟರು ಸಹಾಯ ಮಾಡಿದ್ದಾಗಿ ತಿಳಿದುಬಂದಿದೆ.

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ರವರ ಅಲಾ ವೈಕುಂಠಪುರಂಲೋ ಸಿನೆಮಾದಲ್ಲಿ ತಂದೆಯ ಪಾತ್ರ ಪೋಷಣೆ ಮಾಡಿದ್ದ ಜಯರಾಮ್ ಎಲ್ಲರಿಗೂ ಸುಪರಿಚಿತರು. ಕಳೆದ ಸೋಮವಾರ ಕೇರಳದ ವೆಲ್ಲಿಯಮಟ್ಟಂ ಎಂಬ ಪ್ರದೇಶದಲ್ಲಿ ಒಣಗಿದ ಹಸಿ ಮೆಣಸಿನಕಾಯಿಯ ಹೊಟ್ಟು ತಿಂದು 13 ಹಸುಗಳು ಮೃತಪಟ್ಟಿದ್ದವು. ಈ ಹಸುಗಳನ್ನು ಜಾರ್ಜ್ ಹಾಗೂ ಮಾಥ್ಯೂ ಎಂಬ ಯುವಕರು ಪೋಷಣೆ ಮಾಡುತ್ತಿದ್ದರು. ಈ ಇಬ್ಬರೂ ಈ ಹಿಂದೆ ಉತ್ತಮ ಬಾಲ ರೈತರಾಗಿ ರಾಷ್ಟ್ರೀಯ ಮಟ್ಟದ ಅವಾರ್ಡ್ ಸಹ ಪಡೆದುಕೊಂಡಿದ್ದರು. ಇದೀಗ ಅವರ 13 ಹಸುಗಳು ಮೃತಪಟ್ಟಿದ್ದು, 5 ಹಸುಗಳ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇನ್ನೂ ಸಂಬಂಧಪಟ್ಟ ಅಧಿಕಾರಿಗಳೂ ಸಹ ಸರ್ಕಾರದಿಂದ ಸಿಗುವಂತಹ ಪರಿಹಾರ ನೀಡುವುದಾಗಿ ಭರವಸೆ ಸಹ ನೀಡಿದ್ದಾರೆ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮಾಲಿವುಡ್ ನ ಕೆಲ ಕಲಾವಿದರೂ ಸ್ಪಂಧಿಸುತ್ತಿದ್ದಾರೆ. ಇದೀಗ ನಟ ಜಯರಾಮ್ 5 ಲಕ್ಷ ಆರ್ಥಿಕ ಸಹಾಯ ಮಾಡಿದ್ದಾರೆ. ಯುವ ರೈತರ ಮನೆಗೆ ಹೋಗಿ 5 ಲಕ್ಷ ನೀಡಿದ್ದಾರೆ. ಮತ್ತೋರ್ವ ಸ್ಟಾರ್‍ ನಟ ಮುಮ್ಮುಟಿ ಲಕ್ಷ ರೂಪಾಯಿ, ನಟ ಪೃಥ್ವಿರಾಜ್ ಎರಡು ಲಕ್ಷ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಜಯರಾಮ್ ತಿಳಿಸಿದ್ದಾರೆ. ಇನ್ನೂ ನಟ ಜಯರಾಮ್ ಹೊಸ ಸಿನೆಮಾ ಟ್ರೈಲರ್‍ ಲಾಂಚ್ ನಿಮಿತ್ತ ಬಂದಂತಹ ಹಣವನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ತಾವು ಸಾಕಿದಂತಹ ಹಸುಗಳೂ ಸಹ ಇದೇ ರೀತಿ ಸಾವನ್ನಪ್ಪಿದಾಗ ನಾನು, ನನ್ನ ಪತ್ನಿ ತುಂಬಾನೆ ಅತ್ತಿದ್ದೇವೆ. ಅದು ನೆನಪಿಗೆ ಬಂದು ಸಹಾಯ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಕೇರಳ ಪಶು ಸಂಗೋಪನಾ ಶಾಖೆಯ ಮಂತ್ರಿ ಚಿಂಚು ರಾಣಿ ಸೇರಿದಂತೆ ಅನೇಕರು ಯುವರೈತರ ಮನೆಗೆ ತೆರಳಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಒಂದು ತಿಂಗಳ ಕಾಲ ಉಚಿತ ಆಹಾರ ಹಾಗೂ ತಕ್ಷಣ ಸಹಾಯವಾಗಿ 45 ಸಾವಿರ ಹಣ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಟ ಜಯರಾಮ್ ಮಾಡಿದ ಈ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Most Popular

To Top