ಕಲಾತಪಸ್ವಿ, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಕೆ.ವಿಶ್ವನಾಥ್ ಇನ್ನಿಲ್ಲ, ಶೋಕ ಸಾಗರದಲ್ಲಿ ಸಿನಿರಂಗ…!

ಸೌತ್ ಸಿನಿರಂಗದ ಮೇರು ನಟ, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಲೆಜೆಂಡರಿ ಡೈರೆಕ್ಟರ್‍ ಕೆ.ವಿಶ್ವನಾಥ್ ಕಳೆದ ಗುರುವಾರ (ಜ.2) ರ ರಾತ್ರಿ ಇಹಲೋಕ ತ್ಯೆಜಿಸಿದ್ದಾರೆ. ತೆಲುಗು ಸಿನಿರಂಗದ ದೊಡ್ಡ ಕಲಾವಿದನನ್ನು ಕಳೆದುಕೊಂಡಿದೆ. ಇತ್ತಿಚಿಗೆ ತೆಲಗು ಸಿನಿರಂಗದಲ್ಲಿ ಅನೇಕ ವಿಷಾದಗಳು ಬರುತ್ತಿದೆ. ಇದೀಗ ವಿಶ್ವನಾಥ್ ರವರ ಮರಣ ಇಡೀ ಸಿನಿರಂಗವನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ. ಇನ್ನೂ ಸಿನೆಮಾ ಸ್ಟಾರ್‍ ಗಳೂ ಸೇರಿದಂತೆ ರಾಜಕೀಯ ಗಣ್ಯರೂ ಸಹ ತಮ್ಮ ಸಂತಾಪವನ್ನು ಸೂಚಿಸುತ್ತಿದ್ದಾರೆ.

ಲೆಜೆಂಡರಿ ಡೈರೆಕ್ಟರ್‍ ಕೆ.ವಿಶ್ವನಾಥ್ (92) ಗುರುವಾರ ರಾತ್ರಿ ಕೊನೆಯ ಉಸಿರನ್ನೇಳೆದಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯ ತುಂಬಾ ಕ್ಷೀಣಿಸಿದ ಕಾರಣದಿಂದ ಆತನ್ನನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯ ಉಸಿರನ್ನೇಳೆದಿದ್ದಾರೆ. ಇನ್ನೂ ಆತನ ಮರಣ ಸಿನಿರಂಗವನ್ನು ಶೋಕ ಸಾಗರಕ್ಕೆ ತಳ್ಳಿದೆ. 1930 ಫೆಬ್ರವರಿ 19 ರಂದು ಗುಂಟೂರು ಜಿಲ್ಲೆಯ ರೇಪಲ್ಲಿ ಎಂಬ ಗ್ರಾಮದಲ್ಲಿ ಜನಿಸಿದರು. ಗುಂಟೂರು ಹಿಂದೂ ಕಾಲೇಜಿನಲ್ಲಿ ಇಂಟರ್‍ ಮಿಡಿಯೇಟ್, ಆಂಧ್ರ ಯೂನಿವರ್ಸಿಟಿಯಲ್ಲಿ ಬಿ.ಎಸ್.ಸಿ ಪೂರ್ಣ ಗೊಳಿಸಿದರು. ಆದರೆ ಸಿನೆಮಾಗಳ ಮೇಲಿನ ಆಸಕ್ತಿಯ ಕಾರಣದಿಂದ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲಿಗೆ ಸೌಂಡ್ ಆರ್ಟಿಸ್ಟ್ ಆಗಿ ಕೆರಿಯರ್‍ ಪ್ರಾರಂಭಿಸಿದರು. ಬಳಿಕ ಆತ್ಮಗೌರವಂ ಎಂಬ ಸಿನೆಮಾದ ಮೂಲಕ 1965ರಲ್ಲಿ ನಿರ್ದೇಶಕರಾದರು.

ಇನ್ನೂ ಶಂಕರಾಭರಣಂ, ಸಪ್ತಪದಿ, ಸಾಗರಸಂಗಮಂ, ಸ್ವಾತಿ ಮುತ್ಯಂ, ಸ್ವಯಂ ಕೃಷಿ, ಸ್ವಾತಿಕಿರಣಂ ಸೇರಿದಂತೆ ಕ್ಲಾಸಿಕಲ್ ಹಿಟ್ ಸಿನೆಮಾಗಳ ಮೂಲಕ ಫೇಂ ಸಂಪಾದಿಸಿಕೊಂಡರು. ಇನ್ನೂ ನಿರ್ದೇಶಕರಾಗಿ, ನಟರಾಗಿಯೂ ಸಹ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕೆಲವೊಂದು ಹಿಂದಿ ಸಿನೆಮಾಗಳನ್ನು ಸಹ ನಿರ್ದೇಶನ ಮಾಡಿದ್ದಾರೆ. ಇನ್ನೂ ಚಿತ್ರಕಥೆಗಾರರಾಗಿಯೂ ಸಹ ಖ್ಯಾತಿ ಪಡೆದುಕೊಂಡ ವಿಶ್ವನಾಥ್ ರವರು ತೆಲುಗು ಸಿನಿರಂಗದಲ್ಲಿ ಕಲಾ ತಪಸ್ವಿ ಎಂದೇ ಪ್ರಖ್ಯಾತಿಯನ್ನು ಸಹ ಪಡೆದುಕೊಂಡಿದ್ದಾರೆ. ಜೊತೆಗೆ ಕಳೆದ 1992 ರಲ್ಲಿ ಪದ್ಮಶ್ರೀ, 5 ರಾಷ್ಟ್ರೀಯ ಪ್ರಶಸ್ತಿಗಳು, ಆಂಧ್ರ ಸರ್ಕಾರದಿಂದ 20 ನಂದಿ ಪ್ರಶಸ್ತಿಗಳು, 10 ಫಿಲಂ ಫೇರ್‍ ಪ್ರಶಸ್ತಿಗಳ ಜೊತೆಗೆ ಭಾರತೀಯ ಸಿನಿರಂಗದ ಅತಿ ದೊಡ್ಡ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಹ ದೊರೆತಿದೆ.

ಇನ್ನೂ ವಿಶ್ವನಾಥ್ ರವರ ಮರಣದ ವಿಚಾರ ತಿಳಿಯುತ್ತಿದ್ದಂತೆ ಸಿನಿಮಾ ಸೆಲೆಬ್ರೆಟಿಗಳು, ಅಭಿಮಾನಿಗಳು, ರಾಜಕೀಯ ಗಣ್ಯರು ಸಹ ಸಂತಾಪ ಸೂಚಿಸುತ್ತಿದ್ದಾರೆ. ಇನ್ನೂ ಅವರ ಮರಣದ ಕಾರಣದಿಂದ ಇಡೀ ತೆಲುಗು ಸಿನಿರಂಗ ಶೂಟಿಂಗ್ ಬಂದ್ ಮಾಡಿ ಅವರಿಗೆ ಸಂತಾಪ ಸೂಚಿಸಿದೆ. ವರ್ಷದ ಆರಂಭದಲ್ಲೇ ತೆಲುಗು ಸಿನಿರಂಗ ದೊಡ್ಡ ಕಲಾವಿದರನ್ನು ಕಳೆದುಕೊಂಡತಾಗಿದೆ.