ನಟಿ ಸಮೀರಾರೆಡ್ಡಿ ಗೆ ಬ್ರೆಸ್ಟ್ ಸೈಜ್ ಹೆಚ್ಚು ಮಾಡಿಕೊ ಎಂದಿದ್ದರಂತೆ, ಸಂಚಲನಾತ್ಮಕ ವಿಚಾರಗಳನ್ನು ಹಂಚಿಕೊಂಡ ನಟಿ….!

Follow Us :

ಸಿನಿರಂಗಕ್ಕೆ ಅನೇಕ ನಟಿಯರು ಬರುತ್ತಾರೆ, ಅವರಲ್ಲಿ ಕೆಲವು ಮಂದಿ ಮಾತ್ರ ಸಕ್ಸಸ್ ಆಗುತ್ತಾರೆ. ಅದರಲ್ಲಿ ಕೆಲವರಿಗಂತೂ ಬ್ಯೂಟಿ, ಫಿಟ್ ನೆಸ್, ಅಭಿನಯ ಎಲ್ಲವೂ ಇದ್ದರೂ ಸಹ ಸಕ್ಸಸ್ ಕಂಡುಕೊಳ್ಳುವುದರಲ್ಲಿ ವಿಫಲರಾಗಿರುತ್ತಾರೆ. ಈ ಸಾಲಿಗೆ ಹಾಟ್ ನಟಿ ಸಮೀರಾರೆಡ್ಡಿ ಸಹ ಸೇರುತ್ತಾರೆ. ಟಾಲಿವುಡ್ ನಲ್ಲಿ ಸಾಲು ಸಾಲು ಅಪಜಯಗಳಿಂದ ಆಕೆ ಡಿಜಾಸ್ಟರ್‍ ನಟಿಯಾಗಿ ಉಳಿದರು. ಕೆರಿಯರ್‍ ಪರವಾಗಿ ಆಕೆ ಸಕ್ಸಸ್ ಕಾಣದೇ ಇದ್ದರೂ ಸಹ ವೈಯುಕ್ತಿಕ ಜೀವನ ಮಾತ್ರ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಆಕೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಟಿ ಸಮೀರಾ ರೆಡ್ಡಿ ಹಸರಿಗೆ ತೆಲುಗು ಹುಡುಗಿಯಾದರೂ ಸಹ ದೇಶವ್ಯಾಪಿ ಖ್ಯಾತಿಯನ್ನು ಗಳಿಸಿಕೊಂಡರು. ಸಮೀರಾರೆಡ್ಡಿ ಓದುವ ಸಮಯದಲ್ಲೇ ಮಾಡಲಿಂಗ್ ಆಗಿ ಕೆರಿಯರ್‍ ಅನ್ನು ಪ್ರಾರಂಭ ಮಾಡಿದ್ದರು. ಮೈನೇ ದಿಲ್ ತುಜಕೋ ದಿಯಾ ಎಂಬ ಬಾಲಿವುಡ್ ಸಿನೆಮಾದ ಮೂಲಕ ನಟಿಯಾಗಿ ಪರಿಚಯವಾದರು. ಬಳಿಕ ಆಕೆಗೆ ದಕ್ಷಿಣದ ಸಿನೆಮಾಗಳಲ್ಲೂ ಸಹ ಆಫರ್‍ ಗಳನ್ನು ದಕ್ಕಿಸಿಕೊಂಡರು. ಇನ್ನೂ ನಟಿ ಸಮೀರಾರೆಡ್ಡಿ ತೆಲುಗಿನಲ್ಲಿ ಜೂನಿಯರ್‍ ಎನ್.ಟಿ.ಆರ್‍ ಜೊತೆಗೆ ನರಸಿಂಹುಡು ಎಂಬ ಸಿನೆಮಾದ ಮೂಲಕ ಕಾಲಿಟ್ಟರು. ಈ ಸಿನೆಮಾ ಆಕೆ ನಿರೀಕ್ಷೆಯನ್ನು ಹುಸಿ ಮಾಡಿತ್ತು. ಬಳಿಕ ಮೆಗಾಸ್ಟಾರ್‍ ಚಿರಂಜೀವಿ ಜೊತೆ ಜೈ ಚಿರಂಜೀವ ಎಂಬ ಸಿನೆಮಾದಲ್ಲೂ ಕಾಣಿಸಿಕೊಂಡರು. ಬಳಿಕ ಸಮೀರಾ ಟಾಲಿವುಡ್ ಬಿಟ್ಟು ಹಿಂದಿ, ಕನ್ನಡ, ತಮಿಳು ಹಾಗೂ ಬೆಂಗಾಲಿ ಸಿನೆಮಾಗಳಲ್ಲಿ ನಟಿಸಿದರು. ಈ ಭಾಷೆಗಳಲ್ಲಿ ಆಕೆ ನಟಿಸುತ್ತಾ ಸಾಲು ಸಾಲು ಆಫರ್‍ ಗಳನ್ನು ದಕ್ಕಿಸಿಕೊಂಡು ಬ್ಯುಸಿಯಾದರು. ಇನ್ನೂ ಕೃಷ್ಣಂ ವಂದೇ ಜಗದ್ಗುರಂ ಎಂಬ ಸಿನೆಮಾದಲ್ಲಿ ಐಟಂ ಸಾಂಗ್ ಒಂದಕ್ಕೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು.

ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸಮೀರಾ ರೆಡ್ಡಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತನ್ನ ಕೆರಿಯರ್‍ ಆರಂಭದ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಕೆ ತನ್ನ ಫಿಜಿಕ್ ಮೈಂಟೈನ್ ಮಾಡಲು ಪ್ರತಿ ದಿನ ಬೆಳಿಗ್ಗೆ ಒಂದು ಇಡ್ಲಿ ಮಾತ್ರ ತಿನ್ನುತ್ತಿದ್ದರಂತೆ. ಇನ್ನೂ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟಾಗ ಅನೇಕರು ನನ್ನ ಎದೆಯ ಸೈಜ್ ಕಡಿಮೆಯಾಗಿದೆ ಎಂದು ಹೇಳುತ್ತಿದ್ದರು. ಜೊತೆಗೆ ಅದರ ಸೈಜ್ ಹೆಚ್ಚು ಮಾಡಿಕೊಳ್ಳಲು ಸರ್ಜರಿ ಮಾಡಿಸಿಕೊ ಎಂದು ಸಹ ಸಲಹೆ ಗಳನ್ನು ನೀಡುತ್ತಿದ್ದರಂತೆ. ಈ ಸಮಯದಲ್ಲಿ ನನಗೆ ತುಂಬಾ ಒತ್ತಡ ಸಹ ಆಗುತ್ತಿತ್ತು. ಬಳಿಕ ನಾನು ಸಹ ಸರ್ಜರಿ ಮಾಡಿಸಿಕೊಳ್ಳಲು ಸಿದ್ದವಾದೆ. ಸರ್ಜರಿಯ ವರೆಗೂ ತೆರಳಿ ಬಳಿಕ ಬೇಡ ಎಂದು ಸುಮ್ಮನಾದೆ. ಆದರೆ ಬ್ರೆಸ್ಟ್ ದೊಡ್ಡದಾಗಿ ಕಾಣಲು ನಾನು ಪ್ಯಾಡ್ಸ್ ಸಹ ಬಳಸುತ್ತಿದೆ. ಒಂದು ವೇಳೆ ನಾನು ಸರ್ಜರಿ ಮಾಡಿಸಿಕೊಂಡಿದ್ದರೇ ಇದೀಗ ನಾನು ಸಂತೋಷವಾಗಿ ಇರುತ್ತಿರಲಿಲ್ಲವೇನೋ. ಇದೀಗ ನಾನು ಸರ್ಜರಿ ಬೇಡ ಎಂದು ಹೇಳುತ್ತಿಲ್ಲ. ಅವರ ಇಷ್ಟ ಅವರದ್ದು. ಈ ವಿಚಾರದಲ್ಲಿ ನಾನು ಯಾವುದೇ ರೀತಿಯ ಸಲಹೆಗಳನ್ನು ನೀಡಲಾರೆ ಎಂದು ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನೂ ಬಾಡಿ ಶೇಮಿಂಗ್ ಬಗ್ಗೆ ಸಹ ಮಾತನಾಡಿದ್ದಾರೆ. ನನ್ನ ದೇಹ ಅಂದರೇ ನನಗೆ ಇಷ್ಟ. ನನ್ನ ಶರೀರವನ್ನು ನಾನು ಇಷ್ಟಪಡುತ್ತೇನೆ. ನಾನು ಹೇಗೆ ಇದ್ದೀನಿ, ಬೇರೆಯವರು ಏನು ಎಂದುಕೊಳ್ಳುತ್ತಾರೋ ಎಂದು ಸುಮಾರು ದಿನಗಳ ಕಾಲ ಆಲೋಚನೆ ಮಾಡಿ ತುಂಬಾ ಟೈಂ ವೇಸ್ಟ್ ಮಾಡಿಬಿಟ್ಟೆ. ಇದೀಗ ನಾನು ಚೆನ್ನಾಗಿಯೇ ಕಾಣಿಸುತ್ತಿದ್ದೇನೆ. ನನಗೆ ಚೆನ್ನಾಗಿದೆ. ಆದರೆ ಬೇರೆಯವರ ಬಗ್ಗೆ ಆಲೋಚನೆ ಮಾಡುವ ಅವಸರವಿಲ್ಲ ಎಂದು ಸಮೀರಾ ಹೇಳಿದ್ದಾರೆ. ಸದ್ಯ ಆಕೆಯ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.