Film News

ಶ್ರೀಜಾ ಕೊಣಿದೇಲಾ ಇನ್ಸ್ಟಾ ಸ್ಟೋರಿ ಸಖತ್ ವೈರಲ್, ಆತನೊಂದಿಗೆ ಸೆಲ್ಫಿ, ಹಗ್ ಕಿಸ್ ಎಂದ ಶ್ರೀಜಾ…!

ತೆಲುಗು ಸಿನಿರಂಗದ ಮೆಗಾಸ್ಟಾರ್‍ ಚಿರಂಜೀವಿ ಕಿರಿಯ ಮಗಳು ಶ್ರೀಜಾ ಕೊಣಿದೆಲಾ ಸಿನಿರಂಗಕ್ಕೆ ಪರಿಚಯವಾಗದೇ ಇದ್ದರೂ ಸಹ ವೈಯುಕ್ತಿಕ ವಿಚಾರಗಳ ಕಾರಣದಿಂದ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಮೊದಲು ಪ್ರೀತಿಸಿ ಮದುವೆಯಾಗಿ ಸುದ್ದಿಯಾದರು. ಬಳಿಕ ಆತನಿಂದ ದೂರವಾಗಿ ಮನೆಯವರ ನಿಶ್ಚಯದಂತೆ ಕಲ್ಯಾಣ್ ದೇವ್ ಎಂಬಾತನನ್ನು ಮದುವೆಯಾದರು. ಇದೀಗ ಕಲ್ಯಾಣ್ ದೇವ್ ರಿಂದಲೂ ಸಹ ಶ್ರೀಜಾ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನೂ ಶ್ರೀಜಾ ಮೂರನೇ ಮದುವೆಗೆ ಸಿದ್ದರಾಗಿದ್ದಾರೆ ಎಂಬ ಸುದ್ದಿ ಸಹ ಹರಿದಾಡುತ್ತಿದ್ದು, ಇದೀಗ ಆಕೆ ಹಂಚಿಕೊಂಡ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ.

ಶ್ರೀಜಾ ಹಾಗೂ ಕಲ್ಯಾಣ್ ದೇವ್ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಆದರೆ ಅವರ ನಡುವೆ ಭಿನ್ನಾಭಿಪ್ರಾಯಗಳು ಏರ್ಪಟ್ಟು ಕಳೆದ 2021 ರಿಂದ ಬೇರೆಯಾಗಿದ್ದಾರೆ. ಶ್ರೀಜಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ಕಲ್ಯಾಣ್ ದೇವ್ ಹೆಸರನ್ನು ತೆಗೆದುಹಾಕಿದ್ದಾರೆ. ಅಂದಿನಿಂದ ಇಬ್ಬರೂ ವಿಚ್ಚೇಧನಕ್ಕೆ ಮುಂದಾಗಿದ್ದಾರೆ ಎಂಬ ರೂಮರ್‍ ಗಳು ಹುಟ್ಟಿಕೊಂಡವು. ಬಳಿಕ ಶ್ರೀಜಾ ಸಹ ಕಲ್ಯಾಣ್ ದೇವ್ ರೊಂದಿಗೆ ಕಾಣಿಸಿಕೊಂಡಿರಲಿಲ್ಲ. ಇನ್ನೂ ಮಕ್ಕಳ ಹುಟ್ಟುಹಬ್ಬದ ಕಾರ್ಯಕ್ರಮಗಳಲ್ಲೂ ಸಹ ಕಲ್ಯಾಣ್ ದೇವ್ ಕಾಣಿಸಿಕೊಳ್ಳುತ್ತಿರಲಿಲ್ಲ. ಈ ಕಾರಣದಿಂದ ಅವರಿಬ್ಬರು ವಿಚ್ಚೇದನ ಪಡೆದುಕೊಂಡಿದ್ದಾರೆ ಎಂಬುದಾಗಿ ಸುದ್ದಿಗಳು ಹರಿದಾಡಿದವು. ಆದರೆ ಈ ಬಗ್ಗೆ ಎಲ್ಲೂ ಸಹ ಅಧಿಕೃತ ಮಾಹಿತಿ ಹೊರಬಂದಿಲ್ಲ. ಇನ್ನೂ ಶ್ರೀಜಾ ಹಾಗೂ ಕಲ್ಯಾಣ್ ದೇವ್ ಆಗಾಗ ಕೆಲವೊಂದು ಸೆನ್ಷೇಷನಲ್ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಶ್ರೀಜಾ ಹಂಚಿಕೊಂಡ ಪೋಸ್ಟ್ ಒಂದು ವೈರಲ್ ಆಗುತ್ತಿದೆ.

ಇನ್ನೂ ಶ್ರೀಜಾ ಇತ್ತಿಚಿಗೆ ತನ್ನ ಇನ್ಸ್ಟಾಖಾತೆಯಲ್ಲಿ ಸ್ಟೋರಿಯೊಂದನ್ನು ಶೇರ್‍ ಮಾಡಿದ್ದಾರೆ. ಖ್ಯಾತ ಫ್ಯಾಷನ್ ಡಿಸೈನರ್‍ ಪ್ರೀತಂ ಜಕಲ್ಕರ್‍ ಎಂಬಾತನೊಂದಿಗೆ ಇರುವ ಸೆಲ್ಫಿಯೊಂದು ಶೇರ್‍ ಮಾಡಿದ್ದಾರೆ. ಈ ಹಿಂದೆ ಸಮಂತಾ ವಿಚ್ಚೇಧನದ ಸಮಯದಲ್ಲಿ ಈತನ ಹೆಸರು ಜೋರಾಗಿಯೇ ಕೇಳಿಬಂತು. ಈತನಿಂದಲೇ ಸಮಂತಾ ವಿಚ್ಚೇದನ ಪಡೆದುಕೊಂಡರು ಎಂಬ ಸುದ್ದಿ ಸಹ ವೈರಲ್ ಆಗಿತ್ತು. ಇನ್ನೂ ಈತನ ಡಿಸೈನ್ ಗಳನ್ನು ರಾಶಿಖನ್ನಾ, ಸ್ನೇಹರೆಡ್ಡಿ, ಲಾವಣ್ಯ ತ್ರಿಪಾಠಿ ಸೇರಿದಂತೆ ಅನೇಕ ಸೆಲೆಬ್ರೆಟಿಗಳೂ ಸಹ ಫಾಲೋ ಆಗುತ್ತಿರುತ್ತಾರೆ. ಈ ಸಾಲಿನಲ್ಲಿ ಚಿರು ಪುತ್ರಿ ಶ್ರೀಜಾ ಕೋಣಿದೆಲಾ ಸಹ ಒಬ್ಬರಾಗಿದ್ದಾರೆ. ಇದೀಗ ಶ್ರೀಜಾ ಆತನೊಂದಿಗೆ ಇರುವ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಲವ್ ಸಿಂಬಲ್ಸ್  ಜೊತೆಗೆ ಹಗ್ ಅಂಡ್ ಕಿಸ್ ಎಂದು ಇನ್ಸ್ಟಾ ಸ್ಟೋರಿ ಶೇರ್‍ ಮಾಡಿದ್ದಾರೆ.

ಇನ್ನೂ ಈ ಸ್ಟೋರಿ ನೋಡಿದ ಅನೇಕರು ಶಾಕ್ ಆಗಿದ್ದಾರೆ. ಇನ್ನೂ ಆಕೆ ಸ್ಟೋರಿಗೆ ಅನೇಕ ವಿಮರ್ಶೆಗಳೂ ಸಹ ಕೇಳಿಬರುತ್ತಿವೆ. ಎಷ್ಟೇ ಫ್ಯಾಷನ್ ಡಿಸೈನರ್‍ ಆದರೂ ಸಹ ಆತನೊಂದಿಗೆ ಕಿಸ್ ಹಗ್ ಎಂದು ಪೋಸ್ಟ್ ಮಾಡಿದ್ದಾದರೂ ಏಕೆ ಎಂದು ಅನೇಕರು ಆಕ್ರೋಷ ಸಹ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಆ ಪೋಸ್ಟ್ ಸಹ ವೈರಲ್ ಆಗುತ್ತಿದೆ. ಇನ್ನೂ ಶ್ರೀಜಾ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದು, ಆಗಾಗ ಕೆಲವೊಂದು ಪೋಸ್ಟ್ ಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಾಗುತ್ತಿರುತ್ತಾರೆ.

Most Popular

To Top