ಅದು ನನ್ನ ಡ್ರೀಮ್ ಪಾತ್ರ ಎಂದ ಜೂನಿಯರ್ ಎನ್.ಟಿ.ಆರ್, ಆದರೇ ಆ ಪಾತ್ರ ಮಾಡೋಕೆ ಭಯ ಸಹ ಇದೆಯಂತೆ…..!

Follow Us :

ಟಾಲಿವುಡ್ ಸಿನಿರಂಗದ ಯಂಗ್ ಟೈಗರ್‍ ಎನ್.ಟಿ.ಆರ್‍ RRR ಸಿನೆಮಾದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಂ ಪಡೆದುಕೊಂಡರು. ಸಿನಿರಂಗದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬ ನಟನಿಗೂ ಚಾಲೆಂಜಿಂಗ್ ರೋಲ್ಸ್ ಎಂದರೇ ತುಂಬಾನೆ ಇಷ್ಟ ಇರುತ್ತದೆ. ಕೆಲವರಿಗಂತೂ ಅದು ಡ್ರೀಮ್ ಎಂದೇ ಹೇಳಬಹುದಾಗಿದೆ. ಈ ಹಾದಿಯಲ್ಲೇ ಜೂನಿಯರ್‍ ಎನ್.ಟಿ.ಆರ್‍ ರವರಿಗೆ ಆ ಪಾತ್ರ ಡ್ರೀಮ್ ಪಾತ್ರವಂತೆ. ಆದರೆ ಆ ಪಾತ್ರ ಮಾಡೋಕೆ ಅಷ್ಟೇ ಭಯ ಸಹ ಇದೆಯಂತೆ ಎಂಬ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ಯಂಗ್ ಟೈಗರ್‍ ಎನ್.ಟಿ.ಆರ್‍ ತೆಲುಗು ಸಿನೆಮಾಗಳಿಂದ ಇದೀಗ ಹಾಲಿವುಡ್ ರೇಂಜ್ ಗೆ ಹಾರಿದ್ದಾರೆ. ತನ್ನದೇ ಆದ ಕ್ರೇಜ್ ಸಹ ಪಡೆದುಕೊಂಡಿದ್ದಾರೆ. RRR ಸಿನೆಮಾದ ಮೂಲಕ ಗ್ಲೊಬಲ್ ಸ್ಟಾರ್‍ ಸಹ ಆಗಿದ್ದಾರೆ. ಅನೇಕ ಸಿನೆಮಾಗಳ ಮೂಲಕ ಆತ ಸೂಪರ್‍ ಹಿಟ್ ಸಹ ಪಡೆದುಕೊಂಡಿದ್ದಾರೆ. ಆತ ಎಷ್ಟೇ ಸಿನೆಮಾಗಳಲ್ಲಿ ನಟಿಸಿದರೂ ಸಹ ಇನ್ನೂ ತನಗೆ ಸಂತೃಪ್ತಿ ನೀಡುವಂತಹ ಪಾತ್ರ ಇನ್ನೂ ಮಾಡಬೇಕಿದೆಯಂತೆ. ಒಂದು ವಿಭಿನ್ನವಾದ ಪಾತ್ರದಲ್ಲಿ ನಟಿಸೋಕೆ ಸುಮಾರು ದಿನಗಳಿಂದ ಅಂದುಕೊಳ್ಳುತ್ತಿದ್ದಾರಂತೆ. ಆದರೆ ಅಂತಹ ಪಾತ್ರ ಮಾಡಲು ಇನ್ನೂ ಅವಕಾಶ ಬರಲಿಲ್ಲವಂತೆ. ಜೊತೆಗೆ ಆ ಪಾತ್ರ ಮಾಡೋಕೆ ಕೊಂಚ ಹಿಂದೇಟು ಸಹ ಹಾಕುತ್ತಿದ್ದಾರಂತೆ ಜೂನಿಯರ್‍ ಎನ್.ಟಿ.ಆರ್‍. ಅಷ್ಟಕ್ಕೂ ಆ ಪಾತ್ರ ಯಾವುದು ಎಂಬ ವಿಚಾರಕ್ಕೆ ಬಂದರೇ,

ಟಾಲಿವುಡ್ ನಲ್ಲಿ ಶ್ರೀಕೃಷ್ಣ, ರಾಮನ ಪಾತ್ರ ಎಂದ ಕೂಡಲೇ ತೆಲುಗು ಪ್ರೇಕ್ಷಕರ ಮುಂದೆ ಬರುವಂತಹ ಒಂದೇ ಹೆಸರು ದಿವಂಗತ ನಂದಮೂರಿ ತಾರಕರಾಮಾರಾವ್. ಅದೇ ಮಾದರಿಯಲ್ಲಿ ಜೂನಿಯರ್‍ ಎನ್.ಟಿ.ಆರ್‍ ಸಹ ತಾತನಂತೆ ಕೃಷ್ಣನ ಪಾತ್ರದಲ್ಲಿ ಒಂದು ಬಾರಿಯಾದರು ನಟಿಸಬೇಕೆಂದು ಆಸೆ ಪಟ್ಟಿದ್ದರಂತೆ. ಆದರೆ ಆ ಪಾತ್ರ ಮಾಡಬೇಕಾದರೇ ತನ್ನ ತಾತನಿಗಿಂತ ಚೆನ್ನಾಗಿ ಎಕ್ಸ್ ಪ್ರೆಷನ್ ಮಾಡಬೇಕು. ಅದು ಮಾಡದೇ ಇದ್ದರೇ ತಾತನ ಹೆಸರು ಕೆಡಿಸಿದಂತಾಗುತ್ತದೆ ಎಂದು ಜೂನಿಯರ್‍ ಎನ್.ಟಿ.ಆರ್‍ ರವರ ಭಾವನೆಯಂತೆ. ಅದು ನನ್ನ ಡ್ರೀಮ್ ರೋಲ್ ಆಗಿದೆ, ಆದರೇ ಇನ್ನೂ ಟ್ರೈ ಮಾಡಲಿಲ್ಲ ಎಂದು ಜೂನಿಯರ್‍ ಎನ್.ಟಿ.ಆರ್‍ ಹೇಳಿದ್ದಾರೆ ಎನ್ನಲಾಗಿದೆ. ಜೊತೆಗೆ ಅಂತಹ ಪಾತ್ರದಲ್ಲಿ ನಟಿಸುವಂತಹ ಅವಕಾಶ ಸಹ ಇನ್ನೂ ಬಂದಿಲ್ಲವಂತೆ. ಅವಕಾಶ ಬಂದರೇ, ಸಮಯ ತೆಗೆದುಕೊಂಡಾದರೂ ಪರ್ಫೆಕ್ಟ್ ಆಗಿ ಮಾಡಬೇಕೆಂಬ ನಿರೀಕ್ಷೆಯಲ್ಲಿದ್ದಾರಂತೆ ಜೂನಿಯರ್‍ ಎನ್.ಟಿ.ಆರ್‍.

ಸದ್ಯ ಜೂನಿಯರ್‍ ಎನ್.ಟಿ.ಆರ್‍ ಬಹುನಿರೀಕ್ಷಿತ ದೇವರ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾದಲ್ಲಿ ಬಾಲಿವುಡ್‌ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ನಟಿಯಾಗಿ, ಸೀನಿಯರ್‍ ಸ್ಟಾರ್‍ ಗಳಾದ ಸೈಫ್ ಅಲಿಖಾನ್, ರಮ್ಯಕೃಷ್ಣ, ಶ್ರೀಕಾಂತ್ ಸೇರಿದಂತೆ ಅನೇಕ ದೊಡ್ಡ ಕಲಾವಿದರು ಈ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಮೊದಲ ಭಾಗ ಏಪ್ರಿಲ್ 5 ರಂದು ತೆರೆಕಾಣಲಿದೆ.