ಅರ್ಚಕರ ಬಳಿ ಸಣ್ಣ ತಿಲಕವಿಡಿ ಎಂದ ರಾಹುಲ್ ಗಾಂಧಿ, ವೈರಲ್ ಆದ ವಿಡಿಯೋ, ಚುನಾವಣಾ ಹಿಂದೂ ಎಂದ ಬಿಜೆಪಿ…..!

Follow Us :

ಸದ್ಯ ದೇಶದಲ್ಲಿ ಲೋಕಸಭಾ ಚುನಾವಣಾ ಕಾವು ದಿನೇ ದಿನೇ ರಂಗೇರುತ್ತಿದೆ. ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ದೇಶದಾದ್ಯಂತೆ ಮಿಂಚಿನ ಓಡಾಟ ನಡೆಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಅವಿರಥವಾಗಿ ಶ್ರಮಪಡುತ್ತಿದ್ದಾರೆ.ಇದೀಗ ಒಡಿಶಾದ ರೊರ್ಕೆಲಾದಲ್ಲಿನ ವೇದವ್ಯಾಸ್ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅಲ್ಲಿನ ಅರ್ಚಕರಿಗೆ ಸಣ್ಣ ತಿಲಕ ಇಡುವಂತೆ ರಾಹುಲ್ ಕೇಳಿದ್ದು, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಸದಾ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಾಗುತ್ತಿದ್ದಾರೆ. ಇದೀಗ ಒಡಿಶಾದ ವೇದವ್ಯಾಸ್ ದೇವಾಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಅರ್ಚಕರಿಗೆ ಸಣ್ಣ ತಿಲಕ ಇಡುವಂತೆ ರಾಹುಲ್ ಗಾಂಧಿ ಕೇಳಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಹ ಹಂಪಿ ಉತ್ಸವದಲ್ಲಿ ಕುಂಕುಮ ಇಟ್ಟುಕೊಳ್ಳಲು ನಿರಾಕರಿಸಿದ್ದರು. ಇದೀಗ ರಾಹುಲ್ ಗಾಂಧಿ ಸಹ ಸಣ್ಣ ತಿಲಕ ಇಡುವಂತೆ ಹೇಳಿ ವಿಪಕ್ಷಗಳಿಗೆ ಆಹಾರವಾಗಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ನಾಯಕರು ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಾಹುಲ್ ಗಾಂಧಿ ವೇದವ್ಯಾಸ್ ದೇವಾಲಯದ ಅರ್ಚಕರಿಗೆ ಛೋಟಾ ಟಿಕಾ ಲಗಾನಾ ಎಂದು ಹೇಳಿದ್ದಾರೆ. ಅಂದರೇ ಸಣ್ಣ ತಿಲಕ ಇಡಿ ಎಂದು ಅರ್ಚಕರಿಗೆ ಕೇಳಿದ್ದಾರೆ. ಈ ವಿಡಿಯೋ ಹಂಚಿಕೊಂಡಂತಹ ಬಿಜೆಪಿ ನಾಯಕರು ರಾಹುಲ್ ಗಾಂಧಿಯವರು ಚುನಾವಣೆ ಸಮಯದಲ್ಲಿ ಮಾತ್ರ ಹಿಂದೂ ಧರ್ಮ ಪಾಲಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ. ಜೊತೆಗೆ ಚುನಾವಿ ಹಿಂದೂ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣಾ ಹಿಂದೂ ರಾಹುಲ್ ಗಾಂಧಿಯವರನ್ನು ಸರಿಯಾಗಿ ನೋಡಿ. ಚುನಾವಣಾ ಸಮಯದಲ್ಲಿ ಮಾತ್ರ ಹಿಂದೂ ದೇವಸ್ಥಾನಗಳಲ್ಲಿ ಏಕೆ ಹೋಗುತ್ತೀರಿ ಎಂದು ಪ್ರಶ್ನಿಸಿದ್ದಾರೆ.