ಜಯಂ ನಟಿ ಸದಾ ರವರನ್ನು ಚೈನಾ ಹುಡುಗಿಯಂತಿದ್ದೀಯಾ ಎಂದಿದ್ರಂತೆ ಆ ನಿರ್ದೇಶಕ, ಆ ನಿರ್ದೇಶಕ ಯಾರು ಗೊತ್ತಾ?

Follow Us :

ಸೌತ್ ಸಿನಿರಂಗದಲ್ಲಿ ಕೆಲವು ವರ್ಷಗಳ ಕಾಲ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದ ನಟಿಯರಲ್ಲಿ ಸದಾ ಸಹ ಒಬ್ಬರಾಗಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ತೇಜ ನಿರ್ದೇಶನದಲ್ಲಿ ಮೂಡಿಬಂದ ಜಯಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಜಯಂ ಸಿನೆಮಾದ ಮೂಲಕ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಸದಾಗೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಸದ್ಯ ಸದಾ ಸಿನೆಮಾಗಳು ಹಾಗೂ ಕಿರುತೆರೆಯ ಮೂಲಕ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ.

ಸೌತ್ ನಟಿ ಸದಾ ಹೋಮ್ಲಿ ಬ್ಯೂಟಿ ಎಂದೇ ಕ್ರೇಜ್ ಪಡೆದುಕೊಂಡಿದ್ದರು. ಆಕೆ ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ಹೋಮ್ಲಿಯಾಗಿಯೇ ಕಾಣಿಸಿಕೊಂಡಿದ್ದರು. ಇನ್ನೂ ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕ ಹಾಟ್ ಡೋಸ್ ಏರಿಸಿದ್ದಾರೆ. ತೆರೆದ ಪುಸ್ತಕದಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಜಯಂ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಟಿ ಸದಾ ಅನೇಕ ಸಿನೆಮಾಗಳಲ್ಲಿ ನಟಿಸಿದರು. ಈ ಸಿನೆಮಾದ ಮೂಲಕ ಆಕೆ ಓವರ್‍ ನೈಟ್ ಸ್ಟಾರ್‍ ಆದರು. ಸದಾ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬ್ಯುಸಿ ಹಿರೋಯಿನ್ ಆಗಿದ್ದರು. ಆದರೆ ಆಕೆಗೆ ಸರಿಯಾದ ಹಿಟ್ ಸಿಗಲಿಲ್ಲ ಎಂದೇ ಹೇಳಬಹುದು. ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸಿದರು. ಆಕೆಯ ಕೆರಿಯರ್‍ ನಲ್ಲಿ ವಿಕ್ರಂ ಜೊತೆಗೆ ನಟಿಸಿದ ಅಪರಿಚಿತುಡು ಸಿನೆಮಾ ಭಾರಿ ಸಕ್ಸಸ್ ತಂದುಕೊಟ್ಟಿತ್ತು. ಬಳಿಕ ಆಕೆಯ ಕೆರಿಯರ್‍ ಫೇಡ್  ಔಟ್ ಆಗಿತ್ತು. ಸದ್ಯ ಆಕೆ ಸಿನೆಮಾಗಳು ಹಾಗೂ ಕಿರುತೆರೆಯ ಜೊತೆಗೆ ಯೂಟ್ಯೂಬ್ ಚಾನಲ್ ನಲ್ಲಿ ಸಹ ಬ್ಯುಸಿಯಾಗಿದ್ದಾರೆ.

ನಟಿ ಸದಾ ತನ್ನ ಸ್ವಂತ ಯೂಟ್ಯೂಬ್ ಚಾನಲ್ ನಲ್ಲಿ ತನ್ನ ಜೀವಿನದಲ್ಲಿ ನಡೆದಂತಹ ಅನೇಕ ಸಂಘಟನೆಗಳು ಹಾಗೂ ಫನ್ನಿ ಘಟನೆಗಳನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಅಂತಹ ಘಟನೆಯೊಂದರ ಬಗ್ಗೆ ಹೇಳಿದ್ದಾರೆ. ತನ್ನನ್ನು ಓರ್ವ ನಿರ್ದೇಶಕ ಚೈನಾ ಹುಡುಗಿಯಂತೆ ಇದ್ದೀಯಾ ಎಂದು ಹೇಳಿದ್ದರಂತೆ. ಆತ ಬೇರೆ ಯಾರೂ ಅಲ್ಲ ನಿರ್ದೇಶಕ ತೇಜ. ಜಯಂ ಸಿನೆಮಾದ ಶೂಟಿಂಗ್ ಕಾಡಿನಲ್ಲಿ ನಡೆದಿದೆ. ಕ್ಲೈಮಾಕ್ಸ್ ಎಪಿಸೋಡ್ ಪೂರ್ಣ ಕಾಡಿನಲ್ಲೇ ಶೂಟ್ ಮಾಡಬೇಕಾಗಿತ್ತು. ನಿರ್ದೇಶಕ ತೇಜ ಹಿರೋ ಹಿರೋಯಿನ್ ಹಾಗೂ ಇತರೆ ಕಲಾವಿದರ ಅಪಿಯರೆನ್ಸ್ ವಿಚಾರದಲ್ಲಿ ತುಂಬಾನೆ ಎಚ್ಚರಿಕೆಯಿಂದ ಇರುತ್ತಿದ್ದರು. ಶೂಟಿಂಗ್ ಮಧ್ಯೆ ಗ್ಯಾಪ್ ದೊರೆತಾಗ ಭಾಸ್ಕರ್‍ ಎಂಬ ಮೇಕಪ್ ಮ್ಯಾನ್ ತನ್ನ ಐ ಬ್ರೋ ಕೊಂಚ ಚೇಂಜ್ ಮಾಡೋಣ ಎಂದು ಹೇಲಿದ್ದರಂತೆ. ಅದಕ್ಕೆ ಸದಾ ಸಹ ಒಪ್ಪಿದ್ದರಂತೆ.

ಈ ವೇಳೆ ಏನೋ ಮಾಡೋಕೆ ಹೋಗಿ ಏನೋ ಆಯ್ತು ಎಂಬಂತೆ, ಐ ಬ್ರೋ ತುಂಬಾ ಹೆಚ್ಚಾಗಿ ಕಟ್ ಮಾಡಿದ್ದರಂತೆ. ಈ ವೇಳೆ ಎರಡೂ ಐ ಬ್ರೋ ಬೇರೆಯಾಗಿತ್ತಂತೆ. ಅದರಿಂದ ಮತ್ತೊಂದು ಐ ಬ್ರೋ ಅಡ್ಜಸ್ಟ್ ಮಾಡೋಕೆ ಹೋದ್ರಂತೆ. ಇದಾದ ಬಳಿಕ ಸದಾ ರನ್ನು ನೋಡಿದ ತೇಜಾ ನೀನು ಚೈನೀಸ್ ಬೊಂಬೆಯಂತೆ ಇದ್ದೀಯಾ ಎಂದು, ನೀನು ಏನು ಮಾಡಿದ್ದೀಯಾ ಎಂದು ಕೋಪಗೊಂಡಿದ್ದರಂತೆ. ಅಲ್ಲಿಂದ ನಾನು ಈಗಲೂ ಸಹ ಐಬ್ರೋ ಸ್ವತಃ ಮಾಡಿಕೊಳ್ಳುತ್ತೇನೆ ಎಂದು ಸದಾ ಹೇಳಿದ್ದಾರೆ.