Film News

ಮುದ್ದಿನ ಮಗಳೊಂದಿಗೆ ರೀಲ್ಸ್ ಮಾಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ವೈರಲ್ ಆದ ರುದ್ರಾಕ್ಷಿ ವಿಡಿಯೋ…..!

ಕನ್ನಡ ಸಿನಿರಂಗದ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದುಕೊಂಡಿರುವ ಧ್ರುವ ಸರ್ಜ ಜ.22 ರಂದು ತಮ್ಮ ಇಬ್ಬರೂ ಮಕ್ಕಳಿಗೆ ಅದ್ದೂರಿಯಾಗಿ ನಾಮಕರಣ ಮಾಡಿದ್ದರು. ಕಳೆದ ವರ್ಷ ಅ.2 ರಂದು ಹೆಣ್ಣು ಮಗುವಿಗೆ ತಂದೆಯಾದರು. ಧ್ರುವಾ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಮುದ್ದಾದ ಹೆಣ್ಣು ಮಗಳ ಜನನವಾಯಿತು. ತಮ್ಮ ಇಬ್ಬರೂ ಮಕ್ಕಳಿಗೆ ದೇವರ ಹೆಸರುಗಳನ್ನಿಟ್ಟರು. ಮಗಳಿಗೆ ರುದ್ರಾಕ್ಷಿ ಮಗನಿಗೆ ಹಯಗ್ರೀವ ಎಂದು ಹೆಸರನ್ನಿಟ್ಟರು. ಈ ನಾಮಕರಣ ಮಹೋತ್ಸವಕ್ಕೆ ಕನ್ನಡ ಸ್ಟಾರ್‍ ಗಳು ಸೇರಿದಂತೆ ಬಾಲಿವುಡ್ ಸ್ಟಾರ್‍ ಸಂಜಯ್ ದತ್ ಸಹ ಆಗಮಿಸಿ ಮಕ್ಕಳಿಗೆ ಶುಭಾಷಯಗಳನ್ನು ಕೋರಿದ್ದರು.

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಟಾಪನೆ ದಿನದಂದೆ ಹನುಮ ಭಕ್ತನಾದ ಧ್ರುವ ಸರ್ಜಾ ಮಕ್ಕಳಿಗೆ ಹೆಸರುಗಳನ್ನಿಟ್ಟಿದ್ದಾರೆ. 2019 ನವೆಂಬರ್‍ 24 ರಂದು ಧ್ರುವಾ ಸರ್ಜಾ ಹಾಗೂ ಪ್ರೇರಣಾ ಶಂಕರ್‍ ರವರ ಮದುವೆ ನಡೆದಿತ್ತು. ಮದುವೆಯಾದ ಮೂರು ವರ್ಷಗಳ ಬಳಿಕ ಮೊದಲ ಮಗು ಅ.2, 2022 ರಂದು ಹೆಣ್ಣು ಮಗುವಿಗೆ ಹಾಗೂ ಸೆ.18, 2023 ರಂದು ಎರಡನೇ ಮಗುವಿಗೆ ಜನ್ಮ ಕೊಟ್ಟರು. ಇನ್ನೂ ಧ್ರುವಾ ಸರ್ಜಾ ತಮ್ಮ ಮಕ್ಕಳ ಪೊಟೋಗಳನ್ನು ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡುತ್ತಿರುತ್ತಾರೆ. ಜೊತೆಗೆ ರೀಲ್ಸ್ ಸಹ ಮಾಡುತ್ತಿರುತ್ತಾರೆ. ಇದೀಗ ಧ್ರುವಾ ಸರ್ಜಾ ತನ್ನ ಮಗಳಾದ ರುದ್ರಾಕ್ಷಿ ಜೊತೆಗೆ ರೀಲ್ಸ್ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ನಟ ಧ್ರುವ ಸರ್ಜಾ ಸೋಷಿಯಲ್ ಮಿಡಿಯಾದಲ್ಲಿ ತನ್ನ ಮುದ್ದಿನ ಮಗಳಾದ ರುದ್ರಾಕ್ಷಿ ಜೊತೆಗೆ ರೀಲ್ಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತನ್ನ ಮಗಳು ಅಪ್ಪನನ್ನು ನೋಡಿ ನೋಡುತ್ತಿದ್ದಾಳೆ. ಒಂದು ಹುಡುಗಿ ಪ್ರಪಂಚದಲ್ಲಿ ಬೇರೆ ಹುಡುಗಿಯರು ಇದ್ದಾರೆ ಅನ್ನೋದನ್ನೆ ಮರೆಸಿಬಿಟ್ಟಿದ್ದಾಳೆ ಎಂದು ಮಗಳನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾರ್ಟ್ ಎಮೋಜಿಗಳು, ಲೈಕ್ ಗಳ ಸುರಿಮಳೆಗೈದಿದ್ದಾರೆ.

ಇನ್ನೂ ಧ್ರುವ ಸರ್ಜಾ ತಮ್ಮ ಮಕ್ಕಳಿಗೆ ರುದ್ರಾಕ್ಷಿ ಹಾಗೂ ಹಯಗ್ರೀವ ಎಂದು ಹೆಸರಿಟ್ಟಿದ್ದಾರೆ. ನಾಮಕರಣದ ಪೊಟೋಗಳು ಹಾಗೂ ವಿಡಿಯೋಗಳು ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ, ಪ್ರೇಮ್ ಹಾಗೂ ರಕ್ಷಿತಾ ದಂಪತಿ, ಬಾಲಿವುಡ್ ಸ್ಟಾರ್‍ ನಟ ಸಂಜಯ್ ದತ್ ಸೇರಿದಂತೆ ಅನೇಕ ಕಲಾವಿದರು, ಕುಟುಂಬಸ್ಥರು ಭಾಗಿಯಾಗಿದ್ದರು.

Most Popular

To Top