Film News

ಪೋಷಕರ ಒತ್ತಡಕ್ಕೆ ಮಣಿದು ಎರಡನೇ ಮದುವೆಗೆ ಸಿದ್ದವಾದ್ರಾ ಸ್ಟಾರ್ ನಟಿ ಸಮಂತಾ, ವೈರಲ್ ಆದ ರೂಮರ್…..!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಕೆಲವು ವರ್ಷಗಳ ಹಿಂದೆಯಷ್ಟೆ ಅಕ್ಕಿನೇನಿ ನಾಗಚೈತನ್ಯರಿಂದ ವಿಚ್ಚೇದನ ಪಡೆದು ಸಿಂಗಲ್ ಆಗಿ ಜೀವನ ಸಾಗಿಸುತ್ತಿದ್ದಾರೆ. ವಿಚ್ಚೇದನ ಪಡೆದುಕೊಂಡ ಬಳಿಕ ಸಮಂತಾ ತುಂಬಾನೆ ಡಿಪ್ರೇಷನ್ ಗೆ ಜಾರಿದ್ದರು. ವಿಚ್ಚೇದನಕ್ಕೆ ಕಾರಣ ಸಮಂತಾ ರವರೇ ಎಂಬ ವಾದ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಚರ್ಚೆಯಾಗಿತ್ತು. ಇದಾದ ಬಳಿಕ ಆಕೆ ಮಯೋಸೈಟೀಸ್ ಎಂಬ ವ್ಯಾಧಿಗೂ ಸಹ ಗುರಿಯಾಗಿದ್ದರು. ಸಂಪೂರ್ಣವಾಗಿ ಆರೋಗ್ಯ ಪಡೆದುಕೊಳ್ಳಲು ಆಕೆ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಸಹ ಪಡೆದುಕೊಂಡಿದ್ದಾರೆ. ಇದೀಗ ಸಮಂತಾ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

ನಟಿ ಸಮಂತಾ ಏಂ ಮಾಯ ಚೇಸ್ಯಾವೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಆಕೆ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿ ಸ್ಟಾರ್‍ ನಟಿಯಾದರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಅಕ್ಕಿನೇನಿ ನಾಗಚೈತನ್ಯರನ್ನು ಪ್ರೀತಿಸಿ ವಿವಾಹವಾದರು. ಮದುವೆಯಾಗಿ ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿ ಅನ್ಯೋನ್ಯ ದಂಪತಿಯಾಗಿದ್ದರು. ಆದರೆ ಅವರ ಜೀವನದಲ್ಲಿ ಕೆಲವೊಂದು ವಿಬೇದಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಂಡರು. ಈ ಕಾರಣದಿಂದ ಆಕೆ ಅನಾರೋಗ್ಯಕ್ಕೆ ಗುರಿಯಾದರು. ಮಯೋಸೈಟೀಸ್ ವ್ಯಾಧಿಗೆ ಗುರಿಯಾಗಿ ಕೆಲವು ತಿಂಗಳುಗಳ ಕಾಲ ತುಂಬಾನೆ ನೋವು ಪಟ್ಟರು. ಬಳಿಕ ಆಕೆ ಈ ವ್ಯಾಧಿಯಿಂದ ಚೇತರಿಸಿಕೊಂಡು ಸಿನೆಮಾಗಳಲ್ಲಿ ನಟಿಸಿದರು. ಇದೀಗ ಮತ್ತೆ ಆಕೆ ಸಂಪೂರ್ಣವಾಗಿ ಆರೋಗ್ಯ ಕಾಪಾಡಿಕೊಳ್ಳಲು ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ಆಕೆ ಮತ್ತೆ ದೊಡ್ಡ ಪರದೆಯ ಮೇಲೆ ಸಿನಿರಸಿಕರನ್ನು ರಂಜಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೀಗ ನಟಿ ಸಮಂತಾ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಹಿಂದೆ ಸಹ ಸಮಂತಾ ಎರಡನೇ ಮದುವೆಯ ಬಗ್ಗೆ ಅನೇಕರ ರೂಮರ್‍ ಗಳು ಕೇಳಿಬಂದಿತ್ತು. ಅವುಗಳನ್ನು ಆಕೆ ತಳ್ಳಿಹಾಕಿದ್ದರು. ಇದೀಗ ಮತ್ತೆ ಸಮಂತಾ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಸಮಂತಾ ರವರ ಪೋಷಕರು ಆಕೆಯನ್ನು ಮದುವೆಯಾಗುವಂತೆ ಒತ್ತಡ ಏರುತ್ತಿದ್ದಾರಂತೆ. ಒತ್ತಡ ಹೆಚ್ಚಾಗುತ್ತಿದ್ದಂತೆ ಸಮಂತಾ ಸಹ ಒಪ್ಪಿಗೆ ನೀಡಿದ್ದಾರಂತೆ. ಸಮಂತಾ ಮದುವೆಗೆ ದೂರವಾಗಿ ಒಂಟಿಯಾಗಿಯೇ ಜೀವನ ಸಾಗಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದೀಗ ಪೋಷಕರ ಒತ್ತಡದಿಂದ ಮತ್ತೆ ಮದುವೆಯಾಗಲು ಒಪ್ಪಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಯಲ್ಲಿ ನಿಜವೆಷ್ಟು ಎಂಬುದರ ಬಗ್ಗೆ ಸಮಂತಾ ರವರೇ ರಿಯಾಕ್ಷನ್ ಕೊಡಬೇಕಿದೆ.

ಇನ್ನೂ ನಟಿ ಸಮಂತಾ ತನ್ನ ಸಂಬಂಧಿಕರ ಕುಟುಂಬದಿಂದಲೇ ವ್ಯಕ್ತಿಯನ್ನು ಮದುವೆಯಾಗಲಿದ್ದಾರಂತೆ. ಈ ಬಾರಿ ಆಕೆ ಕುಟುಂಬ ಜೀವನವನ್ನು ಖಾಸಗಿಯಾಗಿಯೇ ಇಟ್ಟುಕೊಳ್ಳಲು ಯತ್ನಿಸುತ್ತಿದ್ದಾರಂತೆ. ಈ ಎಲ್ಲಾ ಕಂಡಿಷನ್ ಗಳನ್ನು ಒಪ್ಪಿಕೊಂಡ ಬಳಿಕ ಸಮಂತಾ ಮದುವೆಗೆ ಒಪ್ಪಿದ್ದಾರಂತೆ. ಕೊನೆಯದಾಗಿ ಸಮಂತಾ ಖುಷಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಜೊತೆಗೆ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ಸಹ ನಟಿಸಿದ್ದು, ಶೀಘ್ರದಲ್ಲೇ ಇದು ಸಹ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ.

Most Popular

To Top