Film News

ಮಕ್ಕಳ ವಿಚಾರದಲ್ಲಿ ಶಾಕಿಂಗ್ ವಿಚಾರ ತೆಗೆದುಕೊಂಡ ರಾಣಾ ಅಂಡ್ ಮಿಹಿಕಾ, ವೈರಲ್ ಆದ ಸುದ್ದಿ……!

ತೆಲುಗು ಸಿನಿರಂಗದಲ್ಲಿ ಸ್ಟಾರ್‍ ಜೋಡಿಗಳಲ್ಲಿ ಒಂದಾದ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ಜೋಡಿ ಸಹ ಒಂದಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಈ ಜೋಡಿ ಶೀಘ್ರದಲ್ಲೇ ಗುಡ್ ನ್ಯೂಸ್ ನೀಡಲಿದ್ದಾರೆ ಎಂಬ ರೂಮರ್‍ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು. ಇದೀಗ ಈ ಜೋಡಿಯ ಬಗ್ಗೆ ಮತ್ತೊಂದು ಸುದ್ದಿ ಸಖತ್ ವೈರಲ್ ಆಗುತ್ತಿದೆ. ಮಕ್ಕಳನ್ನು ಪಡೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯೊಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಈ ಸುದ್ದಿ ದಗ್ಗುಬಾಟಿ ಕುಟುಂಬಕ್ಕೆ ಶಾಕ್ ಎಂದೇ ಹೇಳಲಾಗುತ್ತಿದೆ.

ಟಾಲಿವುಡ್ ನಟ ರಾಣಾ ದಗ್ಗುಬಾಟಿ ಪ್ರತ್ಯೇಕವಾದ ನಟ ಎಂದೇ ಹೇಳಲಾಗುತ್ತಿದೆ. ರೊಮ್ಯಾಂಟಿಕ್ ಹಿರೋ ಆಗಿಯೂ ಸಹ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ. ಸಿನಿರಂಗದಲ್ಲಿ ಅವರು ಎಷ್ಟರ ಮಟ್ಟಿಗೆ ಫೇಂ ಪಡೆದುಕೊಂಡಿದ್ದಾರೋ ಅದೇ ರೀತಿ ಅವರ ವೈಯುಕ್ತಿಕ ಜೀವನದಲ್ಲಿ ಕಾಂಟ್ರವರ್ಸಿಗಳು, ಹಿರೋಯಿನ್ ಗಳ ಜೊತೆಗೆ ಅಫೈರ್‍ ರೂಮರ್‍ ಗಳು ಸಹ ಕೇಳಿಬಂದವು. ಇನ್ನೂ ಕಳೆದ ಮೂರು ವರ್ಷಗಳ ಹಿಂದೆ ರಾಣಾ ಮಿಹಿಕಾ ಬಜಾಜ್ ರನ್ನು ಮದುವೆಯಾದರು. ಮದುವೆಯಾದ ಬಳಿಕ ಸಂತೋಷದಿಂದ ಮದುವೆ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ರಾಣಾ ಸಿನೆಮಾಗಳಲ್ಲಿ ಜೋರು ಕಡಿಮೆಯಾಗಿದೆ. ಕೆಲವೊಂದು ಸಿನೆಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಇನ್ನೂ ವ್ಯಾಪಾರ ಹಾಗೂ ನಿರ್ಮಾಪಕರಾಗಿ ಬ್ಯುಸಿಯಾಗಿದ್ದಾರೆ. ಇದೀಗ ಈ ಜೋಡಿಯ ಬಗ್ಗೆ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.

ಇನ್ನೂ ರಾಣಾ ಹಾಗೂ ಮಿಹಿಕಾ ಮದುವೆಯಾಗಿ ಮೂರು ವರ್ಷಗಳು ಕಳೆದರೂ ಇನ್ನೂ ಅವರಿಗೆ ಮಕ್ಕಳಾಗಿಲ್ಲ. ಇನ್ನೂ ಈ ಬಗ್ಗೆ ಅನೇಕರು ರಾಣಾ ದಂಪತಿಗೆ ಮಕ್ಕಳಾಗಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಅವರಿಗೆ ಈಗಾಗಲೇ ಮಕ್ಕಳು ಪಡೆದುಕೊಳ್ಳುವ ಉದ್ದೇಶ ಹೊಂದಿಲ್ಲ ಎಂಬ ಸುದ್ದಿಗಳೂ ಸಹ ಕೇಳಿಬರುತ್ತಿವೆ. ಇದೀಗ ಈ ಬಗ್ಗೆ ಮತ್ತೊಂದು ಸುದ್ದಿ ಸಹ ಕೇಳಿಬರುತ್ತಿದ್ದು, ಅದರಂತೆ ಅವರು ಮಕ್ಕಳನ್ನು ಪಡೆಯೊಲ್ಲವಂತೆ. ಆದರೆ ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ತೀರ್ಮಾನ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಇನ್ನೂ ರಾಣಾ ದಂಪತಿಯ ಈ ನಿರ್ಧಾರ ದಗ್ಗುಬಾಟಿ ಕುಟುಂಬಕ್ಕೆ ಶಾಕಿಂಗ್ ಸುದ್ದಿ ಎಂದು ಹೇಳಲಾಗುತ್ತಿದೆ. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ  ವೈರಲ್ ಆಗುತ್ತಿವೆ. ಆದರೆ ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಮಾತ್ರ ಲಭ್ಯವಿಲ್ಲ. ಈ ಬಗ್ಗೆ ರಾಣಾ ದಂಪತಿಯೇ ಸ್ಪಷ್ಟನೆ ಕೊಡುವವರೆಗೂ ಕಾಯಬೇಕಿದೆ.

Most Popular

To Top