Film News

ಮುದ್ದಾದ ಮಗುವಿನೊಂದಿಗೆ ಕಾಣಿಸಿಕೊಂಡ ತ್ರಿಷಾ, ನಿಮ್ಮ ಮಗನೇ ಎಂದ ನೆಟ್ಟಿಗರು, ಅದರಲ್ಲೋಂದು ಟ್ವಿಸ್ಟ್……!

ಸೌತ್ ಸಿನಿರಂಗದಲ್ಲಿ ತನ್ನದೇ ಆದ ಕ್ರೇಜ್ ಸಂಪಾದಿಸಿಕೊಂಡ ನಟಿ ತ್ರಿಷಾ ಅನೇಕ ಹಿಟ್ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಎಂತಹುದೇ ಪಾತ್ರವಾದರೂ ಆಕೆ ಆ ಪಾತ್ರಕ್ಕೆ ಜೀವ ತುಂಬಿ ನಟಿಸುವ ಮೂಲಕ ಹೈಲೈಟ್ ಆಗುತ್ತಿರುತ್ತಾರೆ. ನಟಿ ತ್ರಿಷಾಗೆ ಸದ್ಯ 39 ವರ್ಷ ವಯಸ್ಸಾಗಿದೆ. ಆದರೂ ಸಹ ಆಕೆಗೆ ಸಿನೆಮಾಗಳ ಆಫರ್‍ ಗಳು ಸಹ ಹರಿದು ಬರುತ್ತಿವೆ. ಇನ್ನೂ ಆಕೆ ಇನ್ನೂ ಮದುವೆಯಾಗದ ನಟಿಯರ ಸಾಲಿಗೆ ಸೇರಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ವಿವಿಧ ರೀತಿಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಸೌತ್ ಸಿನಿರಂಗದ ಸ್ಟಾರ್‍ ನಟಿ ತ್ರಿಷಾ ಅನೇಕ ವರ್ಷಗಳ ಕಾಲ ಸಿನಿರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದರು. ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ತ್ರಿಷಾ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಸಕ್ಸಸ್ ಕಾಣುತ್ತಿದ್ದಾರೆ. ಜೊತೆಗೆ ಸೊಷಿಯಲ್ ಮಿಡಿಯಾದಲ್ಲೂ ಸಹ ಆಕೆ ಆಕ್ಟೀವ್ ಆಗಿರುತ್ತಾರೆ. ಇಂಟ್ರಸ್ಟಿಂಗ್ ಪೋಸ್ಟ್ ಗಳ ಮೂಲಕ ಹಾಗೂ ತಮ್ಮ ಸಿನೆಮಾ ಅಪ್ಡೇಟ್ ಗಳ ಬಗ್ಗೆ ಅಭಿಮಾನಿಗಳೊಂದಿಗೆ ಹತ್ತಿರವಾಗಿಯೇ ಇರುತ್ತಾರೆ. ಇನ್ನೂ ಆಕೆ ಹಂಚಿಕೊಂಡ ಪೋಸ್ಟ್ ಗಳೂ ಸಹ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಆಕೆ ಹಂಚಿಕೊಂಡ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕ್ಯೂಟ್ ಮಗುವನ್ನು ಎತ್ತಿಕೊಂಡು ತ್ರಿಷಾ ಕಾಣಿಸಿಕೊಂಡಿದ್ದು, ಈ ಬಗ್ಗೆ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನಟಿ ತ್ರಿಷಾ ದಿ ರೋಡ್ ಎಂಬ ತಮಿಳು ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾವನ್ನು ಅರುಣ್ ವಸಿಗರನ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್‍ ಗಳೂ ಸಹ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ಸಹ ಆಕೆಯ ಹುಟ್ಟುಹಬ್ಬದ ಸಮಯದಲ್ಲಿ ರಿಲೀಸ್ ಮಾಡಲಾಗಿತ್ತು. ಇದೀಗ ದಿ ರೋಡ್ ಶೂಟಿಂಗ್ ಸೆಟ್ ನಿಂದ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಮುದ್ದಾದ ಮಗುವನ್ನು ಎತ್ತಿಕೊಂಡು ಪೊಟೋಗೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಈ ಪೊಟೋ ನೋಡಿದ ಅನೇಕರು ಫಿದಾ ಗಿ, ತ್ರಿಷಾಗೆ ಮದುವೆಯಾಗಿದ್ದರೇ ಈ ರೀತಿಯ ಮಗು ಇರುತ್ತಿತ್ತೇನೋ ಎಂದು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರ ಜೊತೆಗ ಪೊಟೋಗಳನ್ನು ವೈರಲ್ ಸಹ ಮಾಡುತ್ತಿದ್ದಾರೆ.

ಇನ್ನೂ ತ್ರಿಷಾ ಹಂಚಿಕೊಂಡ ಈ ಪೊಟೋಗಳ ಕಾರಣದಿಂದ ಆಕೆ ದಿ ರೋಡ್ ಸಿನೆಮಾದಲ್ಲಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಅಭಿಪ್ರಾಯಗಳೂ ಸಹ ಮೂಡಿದೆ. ಈ ಸಿನೆಮಾದ ಜೊತೆಗೆ ಆಕೆಯ ಕೈಯಲ್ಲಿ ತಾಮ್, ಲಿಯೋ, ಸಥುರಂಗ ವೈಟ್ಟೈ2 ಸಿನೆಮಾಗಳಿವೆ. ಇತ್ತೀಚಿಗಷ್ಟೆ ಆಕೆ ಪೊನ್ನಿಯನ್ ಸೆಲ್ವನ್-2 ಸಿನೆಮಾದ ಮೂಲಕ ಅಭಿಮಾನಿಗಳು ಮುಂದೆ ಬಂದಿದ್ದು, ಈ ಸಿನೆಮಾ ಒಳ್ಳೆಯ ಸಕ್ಸಸ್ ಪಡೆದುಕೊಂಡು ಪ್ರದರ್ಶನ ಆಗುತ್ತಿದೆ.

Most Popular

To Top