Film News

ಮತ್ತೊಮ್ಮೆ ಸಂಚಲನಾತ್ಮಕ ಕಾಮೆಂಟ್ ಮಾಡಿದ ನಿಹಾರಿಕಾ, ಮನಸಿಗೆ ಆದ ಗಾಯಕ್ಕೆ ಕಾಲವೇ ಮದ್ದು ಎಂದ ಸ್ಟಾರ್ ಕಿಡ್…..!

ತೆಲುಗು ಸಿನಿರಂಗದ ಮೆಗಾ ಕುಟುಂಬದ ನಿಹಾರಿಕಾ ಕೊಣಿದೆಲಾ ರವರು ಇತ್ತಿಚಿಗೆ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಆಕೆಯ ಪತಿ ಚೈತನ್ಯ ಜೊನ್ನಲಗಡ್ಡ ರವರಿಂದ ಬೇರೆಯಾಗಲಿದ್ದಾರೆ. ಇಬ್ಬರ ನಡುವೆ ವಿಬೇದಗಳ ಕಾರಣದಿಂದ ವಿಚ್ಚೇದನ ಪಡೆಯಲಿದ್ದಾರೆ. ಈಗಾಗಲೇ ಮೆಗಾ ಕುಟುಂಬದವರು ಸಂದಾನ ಸಹ ನಡೆಸಿದರೂ ಪ್ರಯೋಜನವಿಲ್ಲ ಎಂಬೆಲ್ಲಾ ರೂಮರ್‍ ಕೇಳಿಬಂದವು. ವಿಚ್ಚೇದನದ ರೂಮರ್‍ ಶುರುವಾದಾಗಿನಿಂದ ನಿಹಾರಿಕಾ ಏನೆ ಮಾಡಿದರೂ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತದೆ. ಇದೀಗ ಆಕೆ ಮತ್ತೊಮ್ಮೆ ಸಂಚಲನಾತ್ಮಕ ಕಾಮೆಂಟ್ ಮಾಡಿದ್ದಾರೆ.

ಇನ್ನೂ ವಿಚ್ಚೇದನದ ರೂಮರ್‍ ಶುರುವಾದಾಗಿನಿಂದ ನಿಹಾರಿಕಾ ಆಗಲಿ ಅಥವಾ ಮೆಗಾ ಕುಟುಂಬವಾಗಲಿ ಈ ಬಗ್ಗೆ ರಿಯಾಕ್ಟ್  ಆಗಿಲ್ಲ. ಈ ಕಾರಣದಿಂದ ಈ ರೂಮರ್‍ ಗಳು ಮತಷ್ಟು ಹೆಚ್ಚಾದವು. ಅದರ ಜೊತೆಗೆ ನಿಹಾರಿಕಾ ಸಹ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಕಾಮೆಂಟ್ ಗಳನ್ನು ಮಾಡುತ್ತಿದ್ದು, ಅವುಗಳನ್ನು ನೋಡಿದರೇ ಅವರ ನಡುವೆ ಏನೋ ನಡೆದಿದೆ ಎಂಬ ಅನುಮಾನಗಳನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ನಿಹಾರಿಕಾ ಸಹ ಅದೆಲ್ಲದರ ಬಗ್ಗೆ ಮೌನ ವಹಿಸಿ ತನ್ನ ಪಾಡಿಗೆ ತಾನು ತನ್ನ ಕೆರಿಯರ್‍ ನತ್ತ ಮುಖ ಮಾಡಿದ್ದಾರೆ. ಜೊತೆಗೆ ಫಿಟ್ ನೆಸ್ ಗಾಗಿ ಜಿಮ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ನಿಹಾರಿಕಾ ಹಾಗೂ ಚೈತನ್ಯ ವಿಚ್ಚೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ನಂಬುತ್ತಿದ್ದಾರೆ.

ಇನ್ನೂ ನಿಹಾರಿಕಾ ಇದೀಗ ಸಿನೆಮಾಗಳತ್ತ ಮುಖ ಮಾಡುತ್ತಿದ್ದಾರೆ. ನಟಿಯಾಗಬೇಕೆಂಬ ದೊಡ್ಡ ಆಸೆಯಿಂದ ಆಕೆ ಸಿನಿರಂಗಕ್ಕೆ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. ಆದರೆ ಆಕೆ ನಟಿಸಿದ ಎಲ್ಲಾ ಸಿನೆಮಾಗಳು ಆಕೆಯ ನಿರೀಕ್ಷೆಯನ್ನು ಹುಸಿ ಮಾಡಿದವು. ಬಳಿಕ ಆಕೆ ನಿರ್ಮಾಣದತ್ತ ಸಹ ಮುಂದಾದರು. ನಿರ್ಮಾಪಕಿಯಾಗಿ ಕೆಲವೊಂದು ಸಿನೆಮಾಗಳು ಹಾಗೂ ವೆಬ್ ಸಿರೀಸ್ ಗಳನ್ನು ಸಹ ಮಾಡಿದ್ದಾರೆ. ಇದೀಗ ನಿಹಾರಿಕಾ ತನ್ನ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಪುಲ್ ಆಕ್ಟಿವ್ ಆಗಿರುತ್ತಾರೆ. ಇದೀಗ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಲೇಟೆಸ್ಟ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆಕೆ ಕೆಲವೊಂದು ಕಾಮೆಂಟ್ಸ್ ಸಹ ಮಾಡಿದ್ದಾರೆ. ಹೆಲ್ತ್ ಟಿಪ್ಸ್ ಜೊತೆಗೆ ಕೆಲವೊಂದು ಮೋಟಿವೇಷನ್ ಕೋಟ್ಸ್ ಸಹ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಆಕೆ ಎಲ್ಲಾ ಗಾಯಗಳಿಗೆ ಕಾಲವೇ ಉತ್ತರ ನೀಡಲಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಈ ಎಲ್ಲಾ ಕಾಮೆಂಟ್ ಗಳನ್ನು ನೋಡುತ್ತದಿದಾರೆ. ನಿಹಾರಿಕ ತನ್ನ ನೋವನ್ನು ಹೊರಹಾಕಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆಯೇ ಎಂಬ ಅನುಮಾನಗಳು ಮೂಡುವಂತೆ ಮಾಡುತ್ತಿದ್ದಾರೆ. ಇನ್ನೂ ಈ ಬಗ್ಗೆ ನಿಹಾರಿಕಾ ಆಗಲಿ ಅಥವಾ ಚೈತನ್ಯ ಆಗಲಿ ಅಥವಾ ಮೆಗಾ ಕುಟುಂಬವಾಗಲಿ ಸ್ಪಷ್ಟನೆ ನೀಡುವ ವರೆಗೂ ಈ ರೂಮರ್‍ ಗಳು ನಿಲ್ಲುವ ಸ್ಥಿತಿ ಗೋಚರವಾಗುತ್ತಿಲ್ಲ.

Most Popular

To Top