ಸಿಲ್ಕ್ ಸ್ಮಿತ ಆತ್ಮಹತ್ಯೆಗೆ ಅವರ ಮೋಸವೇ ಕಾರಣವಂತೆ, ಸಾಯುವ ಮುಂಚೆ ಆಕೆ ಬರೆದ ಲೆಟರ್ ನಲ್ಲಿ ಏನಿತ್ತು?

ಸಿನಿರಂಗದಲ್ಲಿ ಮಾದಕ ನಟಿ ಎಂಬ ಖ್ಯಾತಿ ಪಡೆದುಕೊಂಡು ಅನೇಕ ಸಿನೆಮಾಗಳ ಮೂಲಕ ಸದ್ದು ಮಾಡಿದ ನಟಿ ಸಿಲ್ಕ್ ಸ್ಮಿತಾ, ಗ್ರಾಮೀಣ ಭಾಗದಿಂದ ಬಂದು ಇಡೀ ಸೌತ್ ಸಿನಿರಂಗವನ್ನು ಶೇಕ್ ಮಾಡಿದ್ದರು. ಅನೇಕ ಸಿನೆಮಾಗಳಲ್ಲಿ ರೊಮ್ಯಾಂಟಿಕ್ ಪಾತ್ರಗಳ ಮೂಲಕವೇ ಸ್ಟಾರ್‍ ಡಮ್ ಪಡೆದುಕೊಂಡರು. ಭಾರಿ ನಿರೀಕ್ಷೆಯಿಂದ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ವಯಸ್ಸಿನಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟರು. ಕಳೆದ 1996 ಸೆಪ್ಟೆಂಬರ್‍ 23 ರಂದು ಆಕೆ ತನ್ನ ಮನೆಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಆಕೆ ಬರೆದಿದ್ದ ಡೆತ್ ನೋಟ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ದಿವಂಗತ ಸಿಲ್ಕ್ ಸ್ಮಿತ ಬರೆದಂತಹ ಲೆಟರ್‍ ನಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ಆಕೆ ತನ್ನ ಏಳನೇ ವರ್ಷದಿಂದಲೇ ಊಟಕ್ಕಾಗಿ ತುಂಬಾ ಕಷ್ಟಪಡುತ್ತಿದ್ದರಂತೆ.  ನನಗೆ ಅಂತಾ ಯಾರೂ ಇರಲಿಲ್ಲ. ಪ್ರೀತಿಸುವವರು ಇರಲಿಲ್ಲ, ಬಾಬು ಒಬ್ಬರೇ ನನ್ನನ್ನು ಅರ್ಥ ಮಾಡಿಕೊಂಡಿದ್ದರು. ಅವರಿನ್ನು ಬಿಟ್ಟು ಎಲ್ಲರೂ ನನ್ನ ಆಸ್ತಿ ತಿಂದರು. ನಂಬಿಸಿ ಮೋಸ ಮಾಡಿದ್ದರು. ರಾಮು ರಾಧಕೃಷ್ಣ ನನಗೆ ತುಂಬಾ ಅನ್ಯಾಯ ಮಾಡಿದರು. ದೇವರು ಎಂಬುವವರು ಇದ್ದರೇ ಅವರಿಗೆ ಶಿಕ್ಷೆ ನೀಡುತ್ತಾನೆ.  ಐದು ವರ್ಷದ ಹಿಂದೆ ಒಬ್ಬ ನನಗೆ ಜೀವನ ನೀಡುತ್ತೇನೆ ಎಂದು ಬಂದ, ಇದೀಗ ನನಗೆ ದೂರವಾದ. ಪ್ರತಿಯೊಬ್ಬ ನನ್ನ ಕಷ್ಟ ಅನುಭವಿಸಿದವನೇ, ಬಾಬು ಬಿಟ್ಟರೇ ಬೇರೆ ಯಾರೂ ನನ್ನನ್ನು ಅರ್ಥ ಮಾಡಿಕೊಂಡಿಲ್ಲ. ಪ್ರತಿನಿತ್ಯ ಟಾರ್ಚರ್‍ ಅನುಭವಿಸಿದ್ದೇನೆ. ಆ ದುಃಖವನ್ನು ಭರಿಸಲಾಗುತ್ತಿಲ್ಲ ಎಂದು ಲೆಟರ್‍ ನಲ್ಲಿ ಬರೆದಿದ್ದರು. ರಾಮು ಹಾಗೂ ರಾಧಕೃಷ್ಣ ಎಂಬುವವರೇ ಅನ್ಯಾಯ ಮಾಡಿದ್ದಾಗಿ ಆಕೆ ಹೇಳಿಕೊಂಡಿದ್ದರು. ಆದರೆ ಎಲ್ಲೂ ಸಹ ಆಕೆ ಸಾಯುತ್ತಿರುವುದಾಗಿ ಹೇಳಿರಲಿಲ್ಲ. ರಾಧಕೃಷ್ಣ ಎಂಬ ವ್ಯಕ್ತಿ ಸಿಲ್ಕ್ ಸ್ಮಿತಾ ವ್ಯವಸ್ಥಾಪಕರಾಗಿದ್ದರು. ಆಕೆಯ ಮರಣದ ಬಳಿಕ ರಾಧಾಕೃಷ್ಣ ರವರನ್ನು ಸಹ ವಿಚಾರಣೆ ನಡೆಸಿದ್ದರು. ಆದರೆ ಆಕೆಯ ಪತ್ರದ ಆಧಾರದ ಮೇಲೆ ಆಕೆಯ ಮರಣವನ್ನು ಸೂಸೈಡ್ ಎಂದು ನಿರ್ಧಾರ ಮಾಡಿದರು.

ಸುಮಾರು ವರ್ಷಗಳ ಕಾಲ ಸಿಲ್ಕ್ ಸ್ಮಿತಾ ನೂರಕ್ಕು ಅಧಿಕ ಸಿನೆಮಾಗಳಲ್ಲಿ ನಟಿಸಿದ್ದರು. ಅನೇಕ ಟಾಪ್ ಹಿರೋಗಳ ಸಿನೆಮಾದಲ್ಲಿ ನಟಿಸಿದ್ದರು. ಆದರೆ ಆಕೆಯ ಅಂತ್ಯಕ್ರಿಯೆಯ ವೇಳೆ ಯಾವೊಬ್ಬ ನಟನಾಗಲೀ, ನಟಿಯಾಗಲಿ ಭಾಗವಹಿಸಿಲ್ಲ. ಓರ್ವ ಅನಾಥ ಶವದಂತೆ ಮಣ್ಣಾದರು. ಆಕೆಯೊಂದಿಗೆ ನಟಿಸಿದ ಹಿರೋಗಳು ಸಹ ಆಕೆಯನ್ನು ನೋಡಲಿಲ್ಲ. ಆದರೆ ನಟ ಅರ್ಜುನ್ ಮಾತ್ರ ಆಕೆಯ ಅಂತಿಮ ದರ್ಶನಕ್ಕೆ ತೆರಳಿದ್ದರು.  ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದು, ಅಂತ್ಯಕ್ರಿಯೆಗಳೂ ಸಹ ಪೂರ್ಣಗೊಂಡಿದೆ. ಸಿಲ್ಕ್ ಸ್ಮಿತಾ ಅರ್ಜುನ್ ರವರ ಜೊತೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು.

ಅರ್ಜುನ್ ಹಾಗೂ ಸಿಲ್ಕ್ ಸ್ಮಿತಾ ಒಳ್ಳೆಯ ಸ್ನೇಹಿತರಂತೆ. ಅನೇಕ ಬಾರಿ ಸಿಲ್ಕ್ ಸ್ಮಿತಾ ನಾನು ಸತ್ತರೇ ನೀನಾದರೂ ನೋಡಲು ಬರುತ್ತೀಯಾ ಎಂದು ಕೇಳುತ್ತಿದ್ದರಂತೆ. ಆತ ಸಹ ಖಂಡಿತ ಬರುತ್ತೇನೆ ಎಂದು ಹೇಳಿದ್ದರಂತೆ. ಕೊಟ್ಟ ಮಾತಿನಂತೆ ಆತ ಸಿಲ್ಕ್‌ ಸ್ಮಿತಾ ಅಂತಿಮ ದರ್ಶನಕ್ಕೆ ಹೋಗಿದ್ದರಂತೆ ಈ ವಿಚಾರವನ್ನು ಇತ್ತೀಚಿಗೆ ಓರ್ವ ಪತ್ರಕರ್ತ ಹೊರ ತಂದಿದ್ದಾರೆ ಎನ್ನಲಾಗುತ್ತಿದೆ.