ಮಹಿಳೆಯರ ಡ್ರೆಸಿಂಗ್ ಬಗ್ಗೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಶಾಕಿಂಗ್ ಕಾಮೆಂಟ್ಸ್, ವೈರಲ್ ಆದ ಕಾಮೆಂಟ್ಸ್……!

Follow Us :

ಬಾಲಿವುಡ್ ಸ್ಟಾರ್‍ ನಟ ಸಲ್ಮಾನ್ ಖಾನ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ಪ್ರದರ್ಶನ ಆಗುತ್ತಿದೆ. ಇನ್ನೂ ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗಿತ್ತು. ಈ ಹಿಂದೆ ಪ್ರಮೋಷನ್ ವೇಳೆ ನಟಿ ಪಾಲಕ್ ತಿವಾರಿ ಸಲ್ಮಾನ್ ಖಾನ್ ರವರ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಹೇಳಿಕೆಗಳನ್ನು ನೀಡಿದ್ದರು. ಶೂಟಿಂಗ್ ಸೆಟ್ ನಲ್ಲಿ ಮಹಿಳೆಯರ ಡ್ರೆಸ್ಸಿಂಗ್ ಬಗ್ಗೆ ಸಲ್ಮಾನ್ ಖಾನ್ ರವರ ರೂಲ್ ಬಗ್ಗೆ ಮಾತನಾಡಿದ್ದರು. ಇದೀಗ ಈ ಕಾಮೆಂಟ್ಸ್ ಬಗ್ಗೆ ಸಲ್ಲು ಭಾಯ್ ವಿವರಣೆ ನೀಡಿದ್ದಾರೆ. ಸಲ್ಮಾನ್ ಖಾನ್ ಕಾಮೆಂಟ್ಸ್ ಇದೀಗ ಸಖತ್ ವೈರಲ್ ಆಗುತ್ತಿವೆ.

ಬಾಲಿವುಡ್ ನ ಕಿಸಿ ಕಿ ಭಾಯ್ ಕಿಸಿ ಕಿ ಜಾನ್ ಸಿನೆಮಾ ಕಳೆದ ಏ.21 ರಂದು ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ಪ್ರದರ್ಶನ  ಆಗುತ್ತಿದೆ. ಈ ಸಿನೆಮಾದಲ್ಲಿ ಸಲ್ಮಾನ್ ಖಾನ್ ರವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ, ಪ್ರಮುಖ ಪಾತ್ರದಲ್ಲಿ ವಿಕ್ಟರಿ ವೆಂಕಟೇಶ್ ಹಾಗೂ ಭೂಮಿಕಾ ನಟಿಸಿದ್ದಾರೆ. ಇನ್ನೂ ಸಿನೆಮಾ ಬಿಡುಗಡೆಗೂ ಮುಂಚೆ ಟ್ರೈಲರ್‍ ಹಾಗೂ ಪ್ರಮೋಷನ್ ಕಾರ್ಯಕ್ರಮಗಳನ್ನು ಜೋರಾಗಿಯೇ ಆಯೋಜಿಸಿದ್ದರು. ಆದರೆ ಸಿನೆಮಾ ಮಾತ್ರ ಅಷ್ಟೊಂದು ಕ್ರೇಜ್ ಪಡೆದುಕೊಳ್ಳಲಿಲ್ಲ ಎನ್ನಬಹುದಾಗಿದೆ. ಈ ಸಿನೆಮಾದ ಪ್ರಮೋಷನ್ ಸಮಯದಲ್ಲಿ ನಟಿ ಪಾಲಕ್ ತಿವಾರಿ ಸಲ್ಮಾನ್ ಖಾನ್ ರವರ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದರು. ಶೂಟಿಂಗ್ ಸೆಟ್ ನಲ್ಲಿ ಮಹಿಳೆಯರು ಮೈ ತುಂಬಾ ಬಟ್ಟೆ ಧರಿಸಬೇಕೆಂದು ಸಲ್ಮಾನ್ ಖಾನ್ ರವರ ರೂಲ್ ಎಂದು ಹೇಳಿದ್ದರು.

ಈ ಕಾಮೆಂಟ್ ಗಳಿಗೆ ಇದೀಗ ಸಲ್ಮಾನ್ ಖಾನ್ ರಿಯಾಕ್ಟ್ ಆಗಿದ್ದಾರೆ. ಇತ್ತಿಚಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖಾನ್ ಸಿನಿರಂಗ ಪ್ರಯಾಣದ ಜೊತೆಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಪಾಲಕ್ ತಿವಾರಿ ನೀಡಿದ ಕಾಮೆಂಟ್ಸ್ ಬಗ್ಗೆ ಸಹ ಮಾತನಾಡಿದ್ದಾರೆ. ಸೆಟ್ ನಲ್ಲಿ ಮಹಿಳೆಯರು ಮೈ ತುಂಬಾ ಬಟ್ಟೆ ಹಾಕಬೇಕೆಂಬ ರೂಲ್ ಮಾಡಿದ್ದಿರಂತೆ ಎಂದು ನಿರೂಪಕ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸಲ್ಮಾನ್ ಖಾನ್ ರಿಯಾಕ್ಟ್ ಆಗಿ, ನನಗೆ ತಿಳಿದ ಮಟ್ಟಿಗೆ ಮಹಿಳೆಯರ ಶರೀರ ಎಂಬುದು ತುಂಬಾ ಬೆಲೆಯುಳ್ಳದ್ದು. ಆ ಕಾರಣದಿಂದಲೇ ಆಕೆ ಮೈತುಂಬಾ ಬಟ್ಟೆ ಹಾಕಿಕೊಂಡರೇ ತುಂಬಾ ಒಳ್ಳೆಯದು. ಅದೇ ರೀತಿ ಪುರುಷರೂ ಸಹ ಮೈತುಂಬಾ ಬಟ್ಟೆ ಧರಿಸಬೇಕೆಂದು ಹೇಳಿದ್ದಾರೆ.

ಇನ್ನೂ ಅಂದಿನ ಕಾಲ ಬೇರೆ, ಇಂದಿನ ಕಾಲದಲ್ಲಿ ಪರಿಸ್ಥಿತಿಗಳು ಬದಲಾಗಿದೆ. ಮಹಿಳೆಯರು ಮೈ ತುಂಬಾ ಬಟ್ಟೆ ಹಾಕಬೇಕು. ಹುಡುಗ ಹುಡುಗಿಯರು ನೋಡಲು ಇದೇ ಕಾರಣ. ನಮ್ಮ ಮನೆಯಲ್ಲಿರುವ ಸಹೋದರಿಯರು, ಪತ್ನಿ, ಅಮ್ಮ ನಂತೆ ನೋಡಲು ಇಷ್ಟಪಡುವುದಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಇನ್ನೂ ಸಲ್ಮಾನ್ ಖಾನ್ ರವರ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.