ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ, ಆಕೆ ಹೇಳಿದ್ದು ಏನು ಗೊತ್ತಾ?

Follow Us :

ನಟ ಪವನ್ ಕಲ್ಯಾಣ್ ರವರ ಮಾಜಿ ಪತ್ನಿ ರೇಣು ದೇಸಾಯಿ ವಿಚ್ಚೇದನ ಪಡೆದುಕೊಂಡು ವರ್ಷಗಳೇ ಕಳೆದಿದೆ. ವಿಚ್ಚೇದನ ಬಳಿಕ ರೇಣು ತನ್ನ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ನಟಿ ರೇಣು ದೇಸಾಯಿ ಬಗ್ಗೆ ಸದಾ ಒಂದಲ್ಲ ಒಂದು ರೀತಿಯ ಚರ್ಚೆ ನಡೆಯುತ್ತಿರುತ್ತದೆ. ಸೋಷಿಯಲ್ ಮಿಡಿಯಾದ ಮೂಲಕ ಆಕೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಇತ್ತಿಚಿಗೆ ಪವನ್ ರೇಣು ವಿಚ್ಚೇದನದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಸಹ ನಡೆಯುತ್ತಿದೆ. ಇದೀಗ ಆಕೆ ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅಷ್ಟಕ್ಕೂ ಆಕೆ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ನಟಿ ರೇಣು ದೇಸಾಯಿ ಹಾಗೂ ನಟ ಪವನ್ ಕಲ್ಯಾಣ್ ರವರು ಸಹಜೀವನ ನಡೆಸಿ ಮಕ್ಕಳಾದ ಬಳಿಕ ಇಬ್ಬರು ಮದುವೆಯಾದರು. ಮದುವೆಯಾದ ಕಲವೇ ತಿಂಗಳುಗಳಲ್ಲಿ ಅವರಿಬ್ಬರು ವಿಚ್ಚೇದನ ಪಡೆದುಕೊಂಡು ಬೇರೆಯಾದರು. ಮದುವೆಯಾದ ಬಳಿಕ ರೇಣು ದೇಸಾಯಿ ಸೋಷಿಯಲ್ ಮಿಡಿಯಾದಲ್ಲಿ ಹಾಕುವ ಪೋಸ್ಟ್ ಗಳಿಗೆ ಅನೇಕರು ಟ್ರೋಲ್ ಸಹ ಮಾಡುತ್ತಿದ್ದಾರೆ. ಅದಕ್ಕೆ ಆಕೆ ತನ್ನದೇ ಆದ ಶೈಲಿಯಲ್ಲಿ ಕೌಂಟರ್‍ ಸಹ ಕೊಡುತ್ತಿರುತ್ತಾರೆ. ಅಷ್ಟೇಅಲ್ಲದೇ ಅನೇಕ ಬಾರಿ ಆಕೆ ಪವನ್ ಕಲ್ಯಾಣ್ ಫ್ಯಾನ್ಸ್ ಮಾಡಿದ ಕಾಮೆಂಟ್ ಗಳಿಗೆ ಸರಿಯಾಗಿಯೇ ರಿಪ್ಲೆ ಕೊಟ್ಟಿದ್ದಾರೆ. ನಟಿ ರೇಣು ದೇಸಾಯಿ ಜಾನಿ ಸಿನೆಮಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿದರು. ಸುಮಾರು ವರ್ಷಗಳ ಬಳಿಕ ಆಕೆ ರವಿತೇಜ ಅಭಿನಯದ ಟೈಗರ್‍ ನಾಗೇಶ್ವರರಾವ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಕೆಲವು ತಿಂಗಳುಗಳ ಹಿಂದೆಯಷ್ಟೆ ಬಿಡುಗಡೆಯಾಗಿತ್ತು.

ಇನ್ನೂ ನಟಿ ರೇಣು ದೇಸಾಯಿ ಕಳೆದ 2018ರ ಸಮಯದಲ್ಲಿ ಎರಡನೇ ಮದುವೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಎಂಗೇಜ್ ಮೆಂಟ್ ಮಾಡಿಕೊಂಡ ಪೊಟೋಗಳೂ ಸಹ ವೈರಲ್ ಆಗಿತ್ತು. ಆದರೆ ಆಕೆ ಎರಡನೇ ಮದುವೆ ಮಾಡಿಕೊಂಡಿರಲಿಲ್ಲ. ಎರಡನೇ ಮದುವೆಯಾಗುವುದು ತಿಳಿಸಿ ಆಕೆ ಮದುವೆಯಾಗದೇ ಇರಲು ಕಾರಣ ಏನು ಎಂಬ ಪ್ರಶ್ನೆ ಇಂದಿಗೂ ಸಹ ಅನೇಕರಲ್ಲಿ ಜೀವಂತವಾಗಿದೆ. ಇದೀಗ ಈ ಕುರಿತು ರೇಣು ಸ್ಪಷ್ಟನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಎರಡನೇ ಮದುವೆಯ ಬಗ್ಗೆ ನಾನು ದೃಷ್ಟಿ ಇಟ್ಟಿಲ್ಲ. ನನ್ನ ಮಗಳು ಆದ್ಯ ಇದೀಗ ಶಾಲೆಗೆ ಹೋಗುವ ಮಗು. ನಾನು ಎರಡನೇ ಮದುವೆ ಆಗುವುದರ ಬಗ್ಗೆ ಆಕೆಗೆ ಅರ್ಥವಾಗೊಲ್ಲ. ಒಂದು ವೇಳೆ ಆಕೆ ಕಾಲೇಜಿಗೆ ಹೋಗುವ ವಯಸ್ಸು ಬಂದರೇ ಆಗ ಅವಳು ಅರ್ಥ ಮಾಡಿಕೊಳ್ಳುವ ಅವಕಾಶವಿದೆ. ಇದೆಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಎರಡನೇ ಮದುವೆಯ ಬಗ್ಗೆ ಆಲೋಚನೆ ಇಟ್ಟುಕೊಂಡಿಲ್ಲ ಎಂದಿದ್ದಾರೆ ಎಂದು ಹೇಳಲಾಗಿದೆ.