ಅನೇಕ ರಾತ್ರಿಗಳು ನಿದ್ದೆಯಿಲ್ಲದೇ, ಪ್ರತಿ ದಿನ ರಾತ್ರಿ ಅಳುತ್ತಾ ಕಳೆದಿದ್ದೇನೆ ಎಂದ ಬಾಲಿವುಡ್ ಸ್ಟಾರ್ ನಟಿ ಕರೀನಾ ಕಪೂರ್….!

Follow Us :

ಬಾಲಿವುಡ್ ಸ್ಟಾರ್‍ ನಟಿ ಕರೀನಾ ಕಪೂರ್‍ ರವರಿಗೆ ದೊಡ್ಡ ಮಟ್ಟದಲ್ಲೇ ಅಭಿಮಾನಿ ಬಳಗವಿದೆ. ಬಾಲಿವುಡ್ ನಲ್ಲಿ ವಯಸ್ಸಾದರೂ ಸಹ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ನಟಿಯರಲ್ಲಿ ಕರೀನಾ ಕಪೂರ್‍ ಸಹ ಒಬ್ಬರಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಾ, ಕುಟುಂಬ ದೊಂದಿಗೆ ಸಿನೆಮಾಗಳನ್ನು ಸಹ ಸಮರೋಪಾದಿಯಲ್ಲಿ ಸಾಗಿಸುತ್ತಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಬಾಲಿವುಡ್ ಸ್ಟಾರ್ ನಟಿ ಕರೀನಾ ಕಪೂರ್ ಸುಮಾರು ಎರಡು ದಶಕಗಳ ಕಾಲ ಬಾಲಿವುಡ್ ನಲ್ಲಿ ಸಕ್ರೀಯರಾಗಿದ್ದಾರೆ. ಈಗಲೂ ಸಹ ಆಕೆಗೆ ತುಂಬಾನೆ ಬೇಡಿಕೆಯಿದೆ. ಬಹುತೇಕ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆಗೆ ನಟಿಸಿರುವ ಕರೀನಾ ಕಪೂರ್‍ ಗೆ ಈಗಲೂ ಸಹ ಅವಕಾಶಗಳು ಹರಿದು ಬರುತ್ತಿವೆ. ಆಕೆ ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಮದುವೆಯಾದರು. ಮದುವೆಗೂ ಮುಂಚೆ ಆಕೆ ಶಾಹಿದ್ ಕಪೂರ್ ಜೊತೆಗೆ ಡೇಟಿಂಗ್ ನಲ್ಲಿದ್ದರು. ಬಳಿಕ ಸೈಫ್ ಅಲಿ ಖಾನ್ ಜೊತೆಗೆ ಪ್ರೀತಿ ಚಿಗುರಿತ್ತು. ಆದರೆ ಆಗಾಗಲೇ ಸೈಫ್ ಅಮೃತಾ ಸಿಂಗ್ ಎಂಬಾಕೆಯನ್ನು ಮದುವೆಯಾಗಿ ಆಕೆಯೊಂದಿಗೆ ವಿಚ್ಚೇದನ ಸಹ ಪಡೆದುಕೊಂಡಿದ್ದರು. ಬಳಿಕ ಕರೀನಾ ಕಪೂರ್‍ ಸೈಪ್ ಜೊತೆಗೆ ವಿವಾಹವಾಗಿ ಸಂತೋಷದಿಂದ ಜೀವನ ಕಳೆಯುತ್ತಿದ್ದಾರೆ.

ಇನ್ನೂ ಮೂಲತಃ ಕರೀನಾ ದೊಡ್ಡ ಕುಟುಂಬದಿಂದ ಬಂದ ಹಿನ್ನೆಲೆಯಲ್ಲಿ ಆಕೆಗೆ ಚಿತ್ರರಂಗದ ಎಂಟ್ರಿ ತುಂಬಾ ಸುಲಭವಾಗಿತ್ತು. ಅವಕಾಶಗಳು ಸಹ ಸುಲಭವಾಗಿಯೇ ದೊರೆಯಿತು. ಆದರೂ ಸಹ ಕರೀನಾ ತಮ್ಮ ಕೆರಿಯರ್‍ ನಲ್ಲಿ ತುಂಬಾ ಕಷ್ಟದ ದಿನಗಳನ್ನು ಕಂಡಿದ್ದಾರಂತೆ. ಈ ಕುರಿತು ಆಕೆ ಸಂದರ್ಶನವೊಂದರಲ್ಲಿ ಹೇಳಿಕೊಡಿದ್ದಾರೆ. ಕರೀನಾ ಕಪೂರ್ ರವರ ಜಬ್ ವಿ ಮೆಟ್ ಎಂಬ ಸಿನೆಮಾಗೂ ಮುಂಚೆ ಅನೇಕ ಸಿನೆಮಾಗಳು ಫ್ಲಾಪ್ ಆಗಿತ್ತು. ಆ ಸಮಯದಲ್ಲಿ ಆಕೆಗೆ ಆಕೆಯ ಮೇಲೆಯೆ ಅನುಮಾನ ಮೂಡಿತ್ತಂತೆ. ಪ್ರತಿನಿತ್ಯ ಅಳುತ್ತಾ, ತಿಂಗಳುಗಳ ಕಾಲ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದರಂತೆ. ಬಳಿಕ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡೆ. ಇದಾದ ಬಳಿಕ ಜಬ್ ವಿ ಮೆಟ್ ಎಂಬ ಸಿನೆಮಾದಲ್ಲಿ ನಟಿಸಿದ್ದೆ. ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡುಕೊಂಡಿತ್ತು. ನನಗೂ ಸಹ ಆತ್ಮವಿಶ್ವಾಸ ಹೆಚ್ಚಾಗಿತ್ತು ಎಂದು ತಮ್ಮ ಜೀವನದ ಕರಾಳ ದಿನಗಳನ್ನು ಆಕೆ ನೆನಪಿಸಿಕೊಂಡಿದ್ದಾರೆ.

ಇನ್ನೂ ವಯಸ್ಸಾದರೂ ಸಹ ಕರೀನಾ ಕಪೂರ್ ಯಂಗ್ ನಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ದೇಹದ ಮೈಕಟ್ಟು ಹೊಂದಿದ್ದಾರೆ. ಈಗಲೂ ಸಹ ಆಕೆಗೆ ಬೇಡಿಕೆಯಿದೆ. ಸದ್ಯ ಆಕೆ ಕ್ರೀವ್, ಸಿಂಘಂ ಅಗೇನ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸ್ಯಾಂಡಲ್ ವುಡ್ ಪ್ಯಾನ್ ಇಂಡಿಯಾ ಸ್ಟಾರ್‍ ಯಶ್ ನಟಿಸುತ್ತಿರುವ ಟಾಕ್ಸಿಕ್ ಸಿನೆಮಾದಲ್ಲೂ ಕರೀನಾ ಕಪೂರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.